ನಟ ಯಶ್ ಅಂದ್ರೆ ಇದೀಗ ಒಂದು ಭಾಷೆಗೆ ಅಥವಾ ಸ್ಥಳಕ್ಕೆ ಸೀಮಿತವಾಗಿರುವ ನಟ ಅಲ್ಲ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿದ್ದಾರೆ. ಯಶ್ ಅವರಿಗೆ ಈ ಮಟ್ಟಿಕಿನ ಯಶಸ್ಸು ತಂದು ಕೊಟ್ಟಿದ್ದು ಕೆಜಿಎಫ್ ಸರಣಿಗಳು. ಕೆಜಿಎಫ್ ಹಾಗೂ ಕೆಜಿಎಫ್ ಬಾಗ 2 ಸಿನಿಮಾ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಹಲವು ಥಿಯೇಟರ್ ಗಳಲ್ಲಿ ಬೇರೆ-ಬೇರೆ ಭಾಷೆಯಲ್ಲಿ ರಿಲೀಸ್ ಆಗಿದ್ದ ಕೆಜಿ ಎಫ್ ಭಾರಿ ಪ್ರಶಂಸೆ ಗಳಿಸಿಕೊಂಡಿದೆ.
ಹಾಗಾಗಿ ನಟ ಯಶ್ ಇತರ ಭಾಷಾ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಕೆಜಿಎಫ್ ಸಿನಿಮಾದ ಸಕ್ಸಸ್ ಅನಂತರ ಬಾಲಿವುಡ್ ನ ಎಲ್ಲಾ ಸಿನಿಮಾಗಳು ಹೆಚ್ಚು ಕಡಿಮೆ ಮಕ್ಕಡೆ ಮಲಗಿವೆ. ಬಾಲಿವುಡ್ ಸ್ಟಾರ್ ನಟರು ಕೂಡ ಯಶ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಸ್ಟಾರ್ ಅಂದ್ರೆ ಹೀಗಿರಬೇಕು ಅಂತ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇನ್ನು ಇತ್ತ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಯಶ್ ಅವರಿಗೆ ಬೇಡಿಕೆ ಹೆಚ್ಚಾಗಿದೆ.
ರಾಕಿ ಭಾಯ್ ಸಿನಿಮಾಕ್ಕೆ ಹಣ ಹಾಕಲು ನಿರ್ಮಾಪಕರು ಕಾದು ಕುಳಿತಿದ್ದಾರೆ. ನಟ ಯಶ್ ಅವರ ಮುಂದಿನ ಸಿನಿಮಾ ಯಾವುದು ಅನ್ನೋದು ಕೂಡ ಬಹಳ ಕುತೂಹಲ ಮೂಡಿಸಿತು. ನರ್ತನ ಅವರ ಜೊತೆ ಯಶ್ ಅವರು ಹೊಸ ಸಿನಿಮಾ ದಲ್ಲಿ ನಟಿಸಲು ಮುಂದಾಗಿದ್ದಾರೆ ಇನ್ನು ಈ ಸಿನಿಮಾನ ನಿರ್ಮಾಣ ಮಾಡುತ್ತಾ ಇರುವವರು ಯಶ್. ಹಾಗೆಯೇ ಈ ಸಿನಿಮಾಕ್ಕೆ ಪೂಜಾ ಹೆಗಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
ಅಂದಹಾಗೆ ಈ ಸಿನಿಮಾದಲ್ಲಿ ನಟಿಸಲು ಪೂಜಾ ಹೆಗಡೆ ಕೂಡ ಭಾರೀ ಮೊತ್ತದ ಸಂಭಾವನೆ ಪಡೆಯಲಿದ್ದಾರಂತೆ. ಪ್ರಶಾಂತ್ ಅನಿಲ್ ನಿರ್ದೇಶನದ ಪ್ರಭಾಸ್ ಅಭಿನಯದ ಸಲಾಂ ಸಿನಿಮಾದಲ್ಲಿಯೂ ಕೂಡ ಅತಿಥಿ ಪಾತ್ರದಲ್ಲಿ ನಟಿಸ್ತಾ ಇರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ನಟ ಯಶ್ ಒಂದು ಸಿನಿಮಾಕ್ಕೆ 5 ಕೋಟಿ ಸಂಭಾವನೆ ಪಡೆದರೆ ಕೆಜಿಎಫ್ ಸಿನಿಮಾಕ್ಕೆ 6 ಕೋಟಿ ಸಂಭಾವನೆ ಗಳಿಸಿದ್ದಾರೆ ಎನ್ನಲಾಗಿದೆ.
ನಟ ಯಶ್ ರಾಮಮಂದಿರ ನಿರ್ಮಾಣಕ್ಕೆ ಕೂಡ ಹಣ ನೀಡಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗೆ ಹರಿದಾಡುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ 50 ಕೋಟಿ ಹಣವನ್ನು ನೀಡಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಸಂತೋಷ್ ತ್ರಿಪಾಠಿ ಎನ್ನುವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಯಶ್ ಬಗ್ಗೆ ಈ ರೀತಿ ಬರೆದುಕೊಂಡಿದ್ದರು. ಆದರೆ ಇದರ ಬಗ್ಗೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಿದ ಫ್ರೀ ಪ್ರೆಸ್ ಜರ್ನಲ್ ಈ ಸುದ್ದಿ ಸುಳ್ಳು ಎಂದು ಹೇಳಿದೆ.
ಅಲ್ಲದೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಯಶ್ ಅವರು ತಿರುಪತಿಗೆ ಭೇಟಿ ನೀಡಿದ ಫೋಟೋಗಳು ಎಂದು ಸ್ಪಷ್ಟತೆಯನ್ನು ನೀಡಿದೆ. ಹಾಗಾಗಿ ರಾಕಿಂಗ್ ಸ್ಟಾರ್ ಯಶ್ ರಾಮಬಂದಿರ ನಿರ್ಮಾಣಕ್ಕೆ 50 ಕೋಟಿ ಹಣ ದೇಣಿಗೆ ನೀಡಿದ್ದಾರೆ ಎನ್ನುವುದು ಕೇವಲ ಗಾಸಿಪ್ ಅಷ್ಟೇ. ಇನ್ನು ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನೆಟ್ಟಿಗರು ಸಾಕಷ್ಟು ಕಮೆಂಟ್ ಮಾಡಿದ್ದಾರೆ.