ನಿಮಗೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗೊತ್ತಿರಲೇ ಬೇಕು. ಕನ್ನಡದಲ್ಲಿ ಕಿಲ್ಲಿಂಗ್ ವೀರಪ್ಪನ್ ಹಾಗೂ ಭೈರವ ಗೀತ ಸಿನಿಮಾ ಮಾಡಿರುವ ರಾಮ್ ಗೋಪಾಲ್ ವರ್ಮಾ ಅವರ ಸಿನಿಮಾದಲ್ಲಿ ಏನಾದರೂ ಒಂದು ವಿಶೇಷತೆ ಇರುತ್ತದೆ. ಅವರ ಸಿನಿಮಾಗಳು ವಿಭಿನ್ನ ಫ್ಲೇವರ್ ಹೊಂದಿರುತ್ತವೆ. ಇದು ಯಾವುದೇ ಚಿತ್ರವಾದರೂ ಅದರಲ್ಲಿ ವಿಶೇಷತೆ ಇಟ್ಟಿರುತ್ತಾರೆ.
ಆರ್‌ಜಿವಿ ಅವರು ಹೇಳಬೇಕೆಂದಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೆ ಚಿತ್ರದ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುತ್ತಾರೆ. ತಮ್ಮ ಸಿನಿಮಾಗಳ ಬಗ್ಗೆ ಅದು ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳದೆ ತಮಗೆ ಅನಿಸಿದನ್ನು ಸಿನಿಮಾದಲ್ಲಿ ತರುತ್ತಾರೆ. ಹೀಗಾಗಿ ಇವರ ಸಿನಿಮಾ ನೋಡಲು ಸಿನಿ ಪ್ರಿಯರು ಕೂಡ ಕಾಣುತ್ತಾರೆ. ಆದರೆ ರಾಮ್ ಗೋಪಾಲ್ ವರ್ಮಾ ಸಿನಿಮಾ ವಿಷಯಕಿಂತ ಕೆಲವೊಂದು ನಡವಳಿಕೆ ಹಾಗೂ ಹೇಳಿಕೆಗಳಿಂದ ಯಾವಾಗಲೂ ವಿವಾದದಲ್ಲಿ ಸಿಲುಕಿ ಕೊಳ್ಳುತ್ತಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ಅವರು ಸೆಲೆಬ್ರಿಟಿ ಹೆಣ್ಮಕ್ಕಳ ಜೊತೆ ತುಂಬಾನೇ ಅನ್ಯೂನ್ಯವಾಗಿ ಇರುತ್ತಾರೆ. ಈ ವಿಷಯದಲ್ಲಿ ಕೂಡ ರಾಮ್ ಗೋಪಾಲ್ ವರ್ಮಾ ಅನೇಕ ಬಾರಿ ಸುದ್ದಿಯಾಗಿದ್ದಾರೆ. ಇದೀಗ ಒಬ್ಬ ನಟಿ ಜೊತೆ ರಾಮ್ ಗೋಪಾಲ್ ವರ್ಮಾ ಡ್ಯಾನ್ಸ್ ಮಾಡಿರುವ ಕಾರಣಕ್ಕೆ ಆ ನಟಿಯ ಮನೆಯವರು ಆಕೆ ಜೊತೆ ಮಾತೇ ಆಡುತ್ತಿಲ್ಲವಂತೆ. ಹೌದು, ನಟಿ ಇನಾಯಾ ಸುಲ್ತಾನ್ ಹಾಗೂ ರಾಮ್ ಗೋಪಾಲ್ ವರ್ಮಾ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು.
ಇನಾಯಾ ಸುಲ್ತಾನ್ ಅವರ ಹುಟ್ಟು ಹಬ್ಬದ ದಿನ ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ವರ್ಮಾ ಅವರ ಜೊತೆ ಡ್ಯಾನ್ಸ್ ಮಾಡಿದ್ದರು. ಅದು ನಾರ್ಮಲ್ ಡ್ಯಾನ್ಸ್ ಆಗಿರಲಿಲ್ಲ, ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ಸುಲ್ತಾನ ಅವರನ್ನು ತಬ್ಬಿಕೊಂಡು ನೋಡಲು ಅಸಹ್ಯ ಅನ್ನಿಸುವಂತೆ ಡ್ಯಾನ್ಸ್ ಮಾಡಿದ್ದರು. ಅಷ್ಟು ದೊಡ್ಡ ನಿರ್ದೇಶಕರಾಗಿದ್ದರೂ ನಟಿಯ ಕಾಲಿಗೆ ಬಿದ್ದು ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ನೆಟ್ಟಿಗರು ಬಾಯಿಗೆ ಬಂದ ಹಾಗೆ ಬೈದಿದ್ದರು. ಆಗ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟರ್ ನಲ್ಲಿ ಆ ವಿಡಿಯೋದಲ್ಲಿ ಇರುವುದು ನಾನಲ್ಲ, ಹಾಗೂ ನಟಿ ಇನಾಯಾ ಸುಲ್ತಾನ್ ಕೂಡ ಅಲ್ಲ.ಇದು ಅಮೇರಿಕಾ ಅಧ್ಯಕ್ಷ ಜಾಯ್ ಬಿಡನ್ ಮೇಲೆ ಆಣೆ ಎಂದು ಹೇಳಿದ್ದರು. ಇದು ಒಂದು ಕಡೆಯಾದರೆ, ರಾಮ್ ಗೋಪಾಲ್ ವರ್ಮಾ ಜೊತೆ ಡ್ಯಾನ್ಸ್ ಮಾಡಿದ್ದಕ್ಕೆ ಇನಾಯಾ ಸುಲ್ತಾನ್ ಅವರನ್ನು ಅವರ ಮನೆಯವರು ದ್ವೇಷಿಸುತ್ತಿದ್ದಾರಂತೆ.
ಆ ವಿಡಿಯೋದಲ್ಲಿ ವರ್ಮಾ ಅವರ ಜೊತೆ ಡ್ಯಾನ್ಸ್ ಮಾಡಿದ್ದರಿಂದ ಮನೆಯವರು ಬೇಸರ ಪಟ್ಟಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ. ‘ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇತ್ತು, ಮನೆಯಲ್ಲಿ ಇಷ್ಟವಿಲ್ಲದಿದ್ದರೂ ಹೊರಗೆ ಬಂದೆ. ಈ ಪ್ರಕ್ರಿಯೆಯಲ್ಲಿ ನನ್ನ ಬೆಂಬಲ ಇಲ್ಲದಿದ್ದರೂ ಹೈದರಾಬಾದ್‌ನಲ್ಲಿ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನ ಆರಂಭಿಸಿದೆ‘ ಎಂದು ಇನಾಯಾ ಹೇಳಿಕೊಂಡಿದ್ದಾರೆ. ಹೀಗೆ ರಾಮ್ ಗೋಪಾಲ್ ವರ್ಮಾ ಅವರು ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದರು.
ಹೀಗಾಗಿ ನನ್ನ ಹುಟ್ಟುಹಬ್ಬದ ದಿನ ಪಾರ್ಟಿಗೆ ರಾಮ್ ಗೋಪಾಲ್ ವರ್ಮಾ ಬಂದು ಡ್ಯಾನ್ಸ್ ಮಾಡಿದ್ದರು ಎಂದು ಇನಾಯಾ ಹೇಳಿಕೊಂಡಿದ್ದಾರೆ. ಇನ್ನು ನಟರತ್ನಾಲು ಎಂಬ ಚಿತ್ರದಲ್ಲಿ ಇನಾಯಾ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಕಾಮೆಂಟ್ ಏನು ಅನ್ನುವುದನ್ನು ತಿಳಿಸಿ.