ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ, ಸಂಸಾರ ಎನ್ನುವುದಕ್ಕೆ ಬಹಳ ಪವಿತ್ರವಾದ ಅರ್ಥವಿದೆ. ಪತಿ-ಪತ್ನಿ ಇಬ್ಬರು ಹಸೆಮಣೆ ಏರಿ ಸಪ್ತಪದಿ ತುಳಿದ ಬಳಿಕ ಜೀವನ ಪರ್ಯಂತ ಹೊಂದಿಕೊಂಡು ಜೀವನ ನಡೆಸಬೇಕು. ಯಾವುದೇ ಕಷ್ಟ ಇರಲಿ ಸುಖ ಇರಲಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಬಂದಿದ್ದೆಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕು ಈ ಹಿಂದೆ ಗುರು ಹಿರಿಯರು ನೋಡಿ ನಿಶ್ಚಯ ಮಾಡಿ ಮದುವೆಯ ಮಾಡುತ್ತಿದ್ದದ್ದೆ ಹೆಚ್ಚು.
ಆದರೆ ಇದೀಗ ಲವ್ ಮ್ಯಾರೇಜ್ ಹೆಚ್ಚು ಚಾಲ್ತಿಯಲ್ಲಿ ಇದೆ ತಮಗೆ ಬೇಕಾದ ಸಂಗತಿಯನ್ನು ಗಂಡಾಗಲಿ ಹೆಣ್ಣಾಗಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಸುಖವಾಗಿ ಸಂಸಾರ ನಡೆಸಬೇಕು ಅಂದ್ರೆ ಗೊತ್ತಿಲ್ಲದೆ ಇರುವವರಿಗಿಂತಲೂ ಗೊತ್ತಿರುವವರನ್ನು ಮದುವೆಯಾದರೆ ಒಳ್ಳೆಯದು ಅಂತ ಈಗಿನ ಜಮಾನದ ಜನರು ಯೋಚನೆ ಮಾಡುತ್ತಾರೆ. ಹಾಗಾಗಿ ಇಂದು ಅರೇಂಜ್ಡ್ ಮ್ಯಾರೇಜ್ ಗಿಂತಲೂ ಹೆಚ್ಚಾಗಿ ಪ್ರೀತಿಸಿ ಮದುವೆ ಆಗುವವರು ಹೆಚ್ಚು.
ಮದುವೆಯಾದ ಹೆಂಗಸರು ಗಂಡನ ಬಳಿ ಎಲ್ಲಾ ವಿಷಯವನ್ನು ಹೇಳಿಕೊಳ್ಳುವುದಿಲ್ಲ ಅದರಲ್ಲೂ ಅರೇಂಜ್ಡ್ ಮ್ಯಾರೇಜ್ ನಲ್ಲಿ ಪತಿಯ ಬಳಿ ಎಲ್ಲವನ್ನ ಹೇಳಿಕೊಳ್ಳುವುದಕ್ಕೆ ಹೆಂಗಸರು ಮುಜುಗರ ಪಟ್ಟುಕೊಳ್ಳುತ್ತಾರೆ ಹಾಗಾಗಿ ಗಂಡಸರೇ ಹೆಣ್ಣನ್ನ ಅರ್ಥ ಮಾಡಿಕೊಂಡು ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು ತನ್ನ ಜೊತೆ ಸಂಸಾರ ನಡೆಸುವ ಹೆಣ್ಣಿನ ಮೇಲೆ ಪ್ರೀತಿ ವಿಶ್ವಾಸ ಬೆಳೆಸಿಕೊಂಡು ಆಕೆಗೂ ಪತಿಯ ಮೇಲೆ ನಂಬಿಕೆ ಬರುವಂತೆ ನೋಡಿಕೊಳ್ಳಬೇಕು.
ಪ್ರೇಮ ವಿವಾಹದಲ್ಲಿ ಇಂತಹ ರಿಸ್ಕ್ ಸ್ವಲ್ಪ ಕಡಿಮೆ. ಮೊದಲೇ ಒಬ್ಬರಿಗೆ ಒಬ್ಬರು ಪರಿಚಿತರಾಗಿ ಇರುವುದರಿಂದ ಮುಚ್ಚುಮರೆ ಇಲ್ಲದೆ ಎಲ್ಲವನ್ನು ಹೇಳಿಕೊಳ್ಳಬಹುದು. ಗಂಡನಾದವನು ಹೆಂಡತಿಯ ಬಳಿ ಯಾವುದೇ ಬಿಗುಮಾನ ಇಲ್ಲದೆ ಕೆಲವು ವಿಷಯಗಳನ್ನು ಕೇಳಿ ಪಡೆದುಕೊಳ್ಳಬೇಕು ಹೆಂಡತಿ ಹೇಳಿಕೊಳ್ಳದೆ ಇದ್ದರೂ ಗಂಡ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು.
ಅದರಲ್ಲೂ ರಾತ್ರಿ ವೇಳೆ ಹೆಂಡತಿಯ ಬಳಿ ಇದೊಂದು ವಿಷಯವನ್ನು ಕೇಳಿ ಪಡೆದರೆ ಪತಿಯ ಜೀವನ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತೆ. ಆರ್ಥಿಕವಾಗಿ ಸದೃಢನಾಗುತ್ತಾನೆ ಹಾಗಾದರೆ ಪತ್ನಿಯ ಬಳಿ ಗಂಡನಾದವನು ಯಾವ ವಸ್ತುವನ್ನು ಬಾಯಿ ಬಿಟ್ಟು ಕೇಳಬೇಕು ಗೊತ್ತೇ? ಗಂಡ ಹೆಂಡತಿ ನಡುವೆ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿ ಇರಬೇಕು. ದೈಹಿಕ ಸುಖ ಕೂಡ ಜೀವನದಲ್ಲಿ ಅಷ್ಟೇ ಮುಖ್ಯ.
ಹೆಣ್ಣು ಮಕ್ಕಳು ಸಾಮಾನ್ಯವಾಗಿ ದೈಹಿಕ ಸಂ-ಭೋ-ಗದ ಬಗ್ಗೆ ಗಂಡನ ಬಳಿ ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ ನಾಚಿಕೆ ಅವರಿಗೆ ಅಡ್ಡಿ ಪಡಿಸುತ್ತದೆ ಆದರೆ ಗಂಡನಾದವನು ಹೆಂಡತಿಯ ಬಳಿ ಪ್ರೀತಿಯನ್ನು ಕೇಳಿ ಪಡೆಯಬೇಕು ಗಂಡ ಹೆಂಡತಿಯ ಜಗಳ ಉಂಡು ಮಲಗುವ ವರೆಗೆ ಎನ್ನುವ ಗಾದೆ ಇದೆ ಅಲ್ವಾ? ಅದೇ ರೀತಿ ಪತಿ ತನ್ನ ಎಲ್ಲಾ ಅಹಂಕಾರವನ್ನು ಬಿಟ್ಟು ಹೆಂಡತಿಯ ಬಳಿ ರಾತ್ರಿಯ ಸಮಯದಲ್ಲಿ ಪ್ರೀತಿಯನ್ನು ಕೇಳಿ ಪಡೆಯಬೇಕು.
ಆಕೆ ಕ್ಷಮಯಾ ಧರಿತ್ರಿ ಹಾಗಾಗಿ ಯಾವುದೇ ಜಗಳ ಇದ್ದರೂ ಗಂಡ ಶರಣಾಗಿ ಆಕೆಯ ಬಳಿ ಮಾತನಾಡಿದರೆ ಖಂಡಿತವಾಗಿ ಆಕೆ ಕ್ಷಮಿಸುತ್ತಾಳೆ. ಜೊತೆಗೆ ಗಂಡನಿಗೆ ಬೇಕಾದ ಪ್ರೀತಿ, ಒಲವನ್ನು ದಾರೆ ಎರೆಯುತ್ತಾಳೆ. ಹಾಗಾಗಿ ಗಂಡಸರು ಹಮ್ಮು ಬಿಮುಗಳನ್ನ ಬಿಟ್ಟು ಹೆಂಡತಿಯ ಬಳಿ ಪ್ರೀತಿಯನ್ನು ಕೇಳಿ ಪಡೆಯಬೇಕು ಇದರಲ್ಲಿ ಅವರ ಶ್ರೇಯಸ್ಸು ಅಡಗಿದೆ.