ಕನ್ನಡ ಕಿರುತೆರೆ ಲೋಕದಲ್ಲಿ ಅದೆಷ್ಟೋ ನಟಿಯರು ಮಿಂಚುತ್ತಿದ್ದಾರೆ. ಅದರಲ್ಲೂ ಹೊಸ ನಟಿಯರು ಕೂಡ ತಮ್ಮ ಪ್ರಬುದ್ಧವಾದ, ಪಕ್ವವಾದ ನಟನೆಯಿಂದ ಜನರ ಗಮನ ಸೆಳೆಯುತ್ತಿದ್ದಾರೆ. ಹೌದು ಇಂದು ಕನ್ನಡ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅದರಲ್ಲಿ ಕೆಲವು ಕಲಾವಿದರಂತೂ ಜನರಿಗೆ ಹೆಚ್ಚು ಅಚ್ಚುಮೆಚ್ಚು.
ಇಂದು ಅದೊಂದು ಧಾರಾವಾಹಿ ಮುಗಿದು ಹೋದರು ಅದರಲ್ಲಿ ಅಭಿನಯಿಸಿದ ಈ ಗುಳಿಕೆನ್ನೆಯ ಚೆಲುವೆಯ ಪಾತ್ರದ ನೆನಪು ಮಾತ್ರ ಜನರಿಂದ ಬಿಟ್ಟು ಹೋಗಿಲ್ಲ. ಯಾರು ಅಂತೀರಾ? ಅವರೇ ಅಗ್ನಿಸಾಕ್ಷಿಯ ಸನ್ನಿಧಿ. ಹೌದು ಕಲರ್ಸ್ ಕನ್ನಡದಲ್ಲಿ ಕೆಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎನ್ನುವ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಸನ್ನಿಧಿಯ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದು ವೈಷ್ಣವಿ ಗೌಡ.
ವೈಷ್ಣವಿ ಗೌಡ ಎನ್ನುವ ಹೆಸರಿಗಿಂತಲೂ ಸನ್ನಿಧಿ ಎಂದರೆ ಜನರಿಗೆ ಹೆಚ್ಚು ಆಪ್ತ. ಹೌದು ಇಂದಿಗೂ ವೈಷ್ಣವಿ ಗೌಡ ಅವರನ್ನು ಸಾಕಷ್ಟು ಜನ ಸನ್ನಿಧಿ ಎಂದೇ ಕರೆಯುತ್ತಾರೆ. ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ವೈಷ್ಣವಿ ಮಲ್ಟಿ ಟ್ಯಾಲೆಂಟೆಡ್ ಇರುವ ಹುಡುಗಿ. ನೃತ್ಯವಿರಲಿ, ನಟನೆ ಇರಲಿ, ಮಾತುಗಾರಿಕೆಯಲ್ಲಿರಲಿ ಎಲ್ಲದರಲ್ಲಿಯೂ ವೈಷ್ಣವಿ ಅವರ ಪ್ರತಿಭೆಯನ್ನು ನೀವು ನೋಡಬಹುದು. ವೈಷ್ಣವಿಯವರು ದೇವಿ ಎನ್ನುವ ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು.
ಆದರೆ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದು ಮಾತ್ರ ಅಗ್ನಿಸಾಕ್ಷಿಯ ಸನ್ನಿಧಿ ಪಾತ್ರದ ಮೂಲಕ. ಧಾರಾವಾಹಿಯಲ್ಲಿ ಮಾತ್ರವಲ್ಲದೆ ಸಿನಿಮಾದಲ್ಲಿಯೂ ಕೂಡ ವೈಷ್ಣವಿ ಅವರಿಗೆ ಅವಕಾಶಗಳು ಅರಸಿ ಬಂದವು. ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ದಿನಗಳ ಕಾಲ ಇದ್ದು ಟಾಪ್ 4ಗೆ ಬಂದಿದ್ದರು. ಇವರೇ ಬಿಗ್ ಬಾಸ್ ಪ್ರಮೋ ನೋಡಿದ ಎಲ್ಲರೂ ವೈಷ್ಣವಿ ಗೌಡ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ ಎಂದೇ ಭಾವಿಸಿದ್ದರು.
ಆದರೆ ಬಿಗ್ ಬಾಸ್ ಪ್ರೊಮೋ ದಲ್ಲಿ ವೈಷ್ಣವಿ ಅವರ ಜೊತೆಗೆ ಇದ್ದ ಅನುಪಮಾ ಗೌಡ ಮಾತ್ರ ಬಿಗ್ ಬಾಸ್ ಮನೆಯನ್ನು ಸೇರಿದ್ದಾರೆ. ಸದ್ಯ ಯಾವ ಧಾರಾವಾಹಿ ಅಥವಾ ಸಿನಿಮಾದಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ವೈಷ್ಣವಿ ಗೌಡ ಅವರ ಅಭಿಮಾನಿಗಳಿಂದ ಮಾತ್ರ ದೂರ ಉಳಿದಿಲ್ಲ. ಹೌದು, ನಟಿ ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ವೈಷ್ಣವಿ.
ಇತ್ತೀಚಿಗೆ ಹೊಸ ಮನೆಯನ್ನು ಕೂಡ ಖರೀದಿ ಮಾಡಿರುವ ವೈಷ್ಣವಿ ಗೌಡ ಅದರ ವಿಡಿಯೋ ಹಾಗೂ ಫೋಟೋಗಳನ್ನು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇನ್ನು ಇತ್ತೀಚೆಗೆ ಆಗಾಗ ಫೋಟೋಶೂಟ್ ಮಾಡಿಸಿ ಬಹಳ ವಿಭಿನ್ನವಾದ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು, ನವರಾತ್ರಿ ಉತ್ಸವ ಆರಂಭವಾದ ದಿನಗಳಿಂದ ವೈಷ್ಣವಿ ಗೌಡ ಒಂದಲ್ಲ ಒಂದು ರೀತಿಯ ಟ್ರೆಡಿಶನಲ್ ಡ್ರೆಸ್ ಹಾಕಿಕೊಂಡು ಪೋಟೋ ತೆಗೆದುಕೊಂಡಿದ್ದಾರೆ ಜೊತೆಗೆ ಇನ್ಸ್ಟಾಗ್ರಾಮ್ ರೀಲ್ ಗಳನ್ನು ಮಾಡಿದ್ದಾರೆ.
ಇನ್ನು ನವರಾತ್ರಿಯ ಕೊನೆಯ ದಿನ ಬಿಳಿ ಬಣ್ಣದ ಸಿಲ್ಕ್ ಸ್ಕರ್ಟ್ ಹಾಗೂ ರವಿಕೆ ತೊಟ್ಟು ವೈಷ್ಣವಿ ಗೌಡ ಮಿಂಚಿದ್ದಾರೆ ಜೊತೆಗೆ ಹಸಿರು ಬಣ್ಣದ ಹೆವಿ ಜ್ಯುವೆಲರಿ ಧರಿಸಿದ್ದಾರೆ. ಈ ಬಟ್ಟೆಯಲ್ಲಿ ಫೋಟೋಶೂಟ್ ಹಾಗೂ ವಿಡಿಯೋಗಳನ್ನು ಕೂಡ ಮಾಡಿಸಿರುವ ವೈಷ್ಣವಿ ಬೇರೆ ಬೇರೆ ಟ್ರೆಂಡಿ ಹಾಡುಗಳಿಗೆ ರೀಲ್ ಗಳನ್ನು ಕೂಡ ಮಾಡಿದ್ದಾರೆ. ಇದೀಗ ವೈಷ್ಣವಿ ಗೌಡ ಅವರ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.