PhotoGrid Site 1657011818284

ಯುವತಿಯರ ಮೇಲೆ ನಡೆಯುತ್ತಿರುವ ರೇ-ಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಹರಿಪ್ರಿಯಾ! ಅಷ್ಟಕ್ಕೂ ಆಗಿದ್ದೇನು ನೋಡಿ!!

ಸುದ್ದಿ

ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಪರಭಾಷಾ ನಟಿಯರ ಹವಾ ಜೋರಾಗಿತ್ತು. ಸಿನಿಮಾ ನೋಡಿದ್ರು ಹೊಸ ಮುಖಗಳು ಕಾಣಿಸುತ್ತಿದ್ದವು ಅದರಲ್ಲೂ ಬೇರೆ ಭಾಷೆಯ ನಟಿಯರಿಗೆ ಹೆಚ್ಚು ಮಾನ್ಯತೆಯನ್ನು ನೀಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪರಭಾಷೆ ನಟಿಯರನ್ನ ಮೀರಿಸುವಂತಹ ಅದ್ಭುತ ಕಲಾವಿದರು ಇದ್ದಾರೆ ಎನ್ನುವುದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಹಾಗಾಗಿ ಕನ್ನಡತಿಯರಿಗೆ ಕನ್ನಡ ನೆಲದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತವೆ. ಹೀಗೆ ಸಿಕ್ಕ ಅವಕಾಶಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡು ಇಂದು ಕನ್ನಡದ ಒಬ್ಬ ಭರವಸೆಯ ನಟಿ ಎನಿಸಿರುವುದು ಹರಿಪ್ರಿಯಾ ಅವರು.

ಮುದ್ದು ಮುಖದ, ಚಬ್ಬಿ ಚಬ್ಬಿ ಚೀಕ್ಸ್ ಹೊಂದಿರುವ ನಟಿ ಹರಿಪ್ರಿಯಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ಬೋಲ್ಟ್ ಲುಕ್ ನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಅವರು ಇತ್ತೀಚಿಗೆ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಹೊಂದಿರುವ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹರಿಪ್ರಿಯಾ ಅವರ ವಿಶೇಷತೆ ಅಂದ್ರೆ ಅವರು ತಮ್ಮ ರೋಲ್ ಗೆ ಹೆಚ್ಚು ಇಂಪಾರ್ಟೆಂಟ್ ಇರುವಂತಹ ಪಾತ್ರವನ್ನು ಆಯ್ದುಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿ ಅಂದ್ರೆ ಹರಿಪ್ರಿಯಾ ಅವರು.

ಹರಿಪ್ರಿಯಾ ಅವರು ಅಕ್ಟೋಬರ್ 29, 1991ರಲ್ಲಿ, ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಸಿನಿಮಾದಲ್ಲಿ ಹರಿಪ್ರಿಯಾ ಇಂದು ಗುರುತಿಸಿಕೊಂಡಿರುವ ಇವರ ನಿಜವಾದ ಹೆಸರು ಶ್ರುತಿ. ನೃತ್ಯದಲ್ಲಿ ಹೆಚ್ಚು ಆಸಕ್ತಿ ಇದ್ದ ಹರಿಪ್ರಿಯಾ ಚಿಕ್ಕ ವಯಸ್ಸಿನಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿ ಸಾಕಷ್ಟು ಪ್ರದರ್ಶನವನ್ನು ಕೂಡ ನೀಡಿದ್ದಾರೆ. 2008ರಲ್ಲಿ ನಿರ್ದೇಶಕ ರಿಚರ್ಡ್ ಇವರ ನೃತ್ಯವನ್ನು ನೋಡಿ ತುಳು ಚಿತ್ರ ಒಂದರಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟರು.

ಬಳಿಕ ಅದೇ ವರ್ಷ ಮನಸುಗಳ ಮಾತು ಮಧುರ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ನಟಿ ಹರಿಪ್ರಿಯ. 25ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ ಅವರ ನಟನೆಯ ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು ಉಗ್ರಂ, ಬೆಲ್ ಬಾಟಮ್, ನೀರ್ ದೋಸೆ, ಭರ್ಜರಿ, ಸೂಜಿ ದಾರ, ರಿಕ್ಕಿ ಹೀಗೆ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹರಿಪ್ರಿಯ. ಅಲ್ಲದೆ ತೆಲುಗು ಚಿತ್ರರಂಗದಲ್ಲಿಯೂ ಕೂಡ ಸಕ್ರಿಯವಾಗಿರುವ ನಟಿ ಇವರು.

ನಟಿ ಹರಿಪ್ರಿಯಾ ಅವರ ಕೈಯಲ್ಲಿ ಈಗಾಗಲೇ ನಾಲ್ಕೈದು ಸಿನಿಮಾಗಳಿದ್ದು, ಇದೇ ವರ್ಷದ ಅಂತ್ಯದ ವೇಳೆಗೆ ಪೆಟ್ರೋಮ್ಯಾಕ್ಸ್, ಬೆಲ್ ಬಾಟಮ್ 2, ಲಗಾಮ್, ಅಮೃತಮತಿ ಸಿನಿಮಾಗಳು ತೆರೆ ಕಾಣಲಿವೆ. ಇನ್ನು ತಮ್ಮ ಹೊಸ ಸಿನಿಮಾ ಒಂದು ರ ಬಗ್ಗೆ ಮಾತನಾಡಿದ ಹರಿಪ್ರಿಯಾ ಅವರು, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅದರಲ್ಲೂ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಕ್ಕಳು ತಮಗೆ ಆದ ಅನ್ಯಾಯವನ್ನು ಯಾರ ಎದುರಿನಲ್ಲಿಯೂ ಹೇಳಿಕೊಳ್ಳುವುದಿಲ್ಲ.

ಅಲ್ಲದೆ ಈ ವಿಷಯ ತಂದೆ ತಾಯಿಯವರಿಗೆ ಗೊತ್ತಿದ್ದರೂ ಕೂಡ ಎಲ್ಲಿ ತನ್ನ ಮಗಳನ್ನು ಬೇರೆ ಯಾರಾದರೂ ಮದುವೆಯಾಗುವುದಿಲ್ಲ ಎನ್ನುವ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸುವುದಕ್ಕೂ ಅಂಜುತ್ತಾರೆ. ಹಾಗಾಗಿ ಒಂದು ಹೆಣ್ಣು ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎನ್ನುವ ಪಾತ್ರದಲ್ಲಿ ತಾನು ನಟಿಸಿದ್ದು, ಪ್ರಿಯಾಂಕ ಎನ್ನುವ ಪಾತ್ರಧಾರಿಯಾಗಿ ನನಗೆ ಆಗುವ ಅನ್ಯಾಯವನ್ನು ಖಂಡಿಸುತ್ತೇನೆ ಎಂದು ತಮ್ಮ ಮುಂಬರುವ ಸಿನಿಮಾದ ಬಗ್ಗೆ ಸಣ್ಣ ಹಿಂಟ್ ನೀಡಿದ್ದಾರೆ. ಅಲ್ಲದೆ ಇಂದು ರೇ’ಪ್ ಪ್ರಕರಣಗಳು ಹೆಚ್ಚಾಗುತ್ತಿದೆ.

ನಮ್ಮದು ಪುರುಷ ಪ್ರಧಾನ ಸಮಾಜವಾದ್ದರಿಂದ ಇಲ್ಲಿ ಈ ವಿಷಯದ ಬಗ್ಗೆ ಹೆಚ್ಚಾಗಿ ಯಾರೂ ಮಾತನಾಡುವುದಿಲ್ಲ. ಆದರೆ ಈಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಪುರುಷರಿಗೆ ಸಮಾನವಾಗಿ ನಿಲ್ಲುತ್ತಿದ್ದಾರೆ ಹಾಗೂ ಇಕ್ವಾಲಿಟಿ ಬರುತ್ತಿದೆ ಎಂದು ಹರಿಪ್ರಿಯಾ ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *