ಹೆಣ್ಣಿನ ಮನಸ್ಥಿತಿಯನ್ನು ಯಾರಿಗೂ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳ ಮುಖ ನೋಡಿ ಇವರ ಸ್ವಭಾವ ಹೀಗೆ ಇರಬಹುದು ಎಂದು ಊಹಿಸುವುದೇ ಕಷ್ಟ. ಯಾಕಂದ್ರೆ ಹೆಣ್ಣು ಮಕ್ಕಳು ಮುಖದಲ್ಲಿ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಬಹಳಷ್ಟು ಬಾರಿ ಅವರನ್ನ ಅರ್ಥ ಮಾಡಿಕೊಂಡವರಿಗೆ ಮಾತ್ರ ಅವರೇ ಬಗ್ಗೆ ತಿಳಿಯುತ್ತದೆ.
ಹಾಗಂತ ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟು ಸುಲಭವಲ್ಲ ಯಾಕಂದ್ರೆ ನಿಜವಾಗಿ ತಮ್ಮ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಮುಖಭಾವನೆಯ ಮೂಲಕ ಎಲ್ಲಾ ಸಮಯದಲ್ಲಿಯೂ ವ್ಯಕ್ತಪಡಿಸುವುದಿಲ್ಲ. ಉದಾಹರಣೆಗೆ ಮನಸ್ಸಿನಲ್ಲಿ ಎಷ್ಟೇ ದುಃಖವಿದ್ದರೂ ಮೇಲ್ನೋಟಕ್ಕೆ ನಗುತ್ತಲೇ ಇರುವ ಹೆಣ್ಣು ಮಕ್ಕಳಿದ್ದಾರೆ. ಎಷ್ಟೋ ಜನರಿಗೆ ಕಷ್ಟವೇ ಇಲ್ಲವೇನೋ ಎನ್ನುವಷ್ಟು ಸರಳವಾಗಿ ಜೀವನ ಮಾಡುತ್ತಿರುತ್ತಾರೆ ಆದರೆ ಅವರ ನೋವು ಸಂಕಟ ಅವರಿಗೆ ಗೊತ್ತು.
ಇನ್ನು ಹೆಣ್ಣು ಮಕ್ಕಳ ಕೆಲವು ಭಾವನೆಯನ್ನು ಅವರ ಮುಖದ ಸನ್ನೆಯಿಂದ ಅಥವಾ ಕೈಕಾಲು ಸನ್ನೆಯಿಂದ ಅರ್ಥಮಾಡಿಕೊಳ್ಳಬಹುದು. ಹಾಗಾದ್ರೆ ಹೆಣ್ಣು ಮಕ್ಕಳ ಯಾವ ಸನ್ನೆಗೆ ಯಾವ ಅರ್ಥವಿದೆ ಗೊತ್ತಾ ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ ಮುಂದೆ ಓದಿ. ಸಾಮಾನ್ಯವಾಗಿ ಒಂದು ಹೆಣ್ಣು ಮಗಳು ಸಾಮಾಜಿಕವಾಗಿ ಯಾರೊಂದಿಗೂ ಬೆರೆಯದೆ ಮನೆಯ ಮೂಲೆಯಲ್ಲಿ ಹೋಗಿ ಕುಳಿತುಕೊಂಡರೆ ಆಕೆ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾಳೆ.
ಮದುವೆಯಾಗಿದ್ದರೆ ಆಕೆಯ ಗಂಡನ ಮನೆಯಲ್ಲಿ ಆಕೆಗೆ ಕಷ್ಟವಿದೆ ಎಂದು ಅರ್ಥ. ಅದನ್ನ ಯಾರಿಗೂ ಹೇಳಿಕೊಳ್ಳಲಾಗದೆ ತಾನೇ ಅನುಭವಿಸುತ್ತಿದ್ದು ಎಲ್ಲರೊಂದಿಗೆ ಮಾತನಾಡಲು ಹೆದರುತ್ತದ್ದಾಳೆ ಎಂದೇ ಅರ್ಥ. ಇನ್ನು ಒಬ್ಬಳು ಹೆಣ್ಣು ನೇರವಾಗಿ ಕುಳಿತುಕೊಳ್ಳುತ್ತಾಳೆ. ಮಾತನಾಡುವಾಗ ತಲೆ ತಗ್ಗಿಸುವುದಿಲ್ಲ ಎಂದಾದರೆ ಆಕೆ ಸ್ವಾವಲಂಬಿ ಮಹಿಳೆ, ಆಕೆ ಯಾರ ಎದುರೂ ಕೈ ಚಾಚುವುದಿಲ್ಲ ಎಂದು ಅರ್ಥ.
ಇನ್ನು ಒಬ್ಬಳು ಎದುರಿಗಿರುವವರ ಜೊತೆ ಮಾತನಾಡುವಾಗ ತನ್ನ ಕೈಯಲ್ಲಿರುವ ಬಳೆ ಉಂಗುರ ಅಥವಾ ಶಾಲನು ಹಿಡಿದು ಬೆರಳಿನಲ್ಲಿ ತಿರುಪುವುದು, ಕೂದಲಿನ ಜೊತೆ ಕೈಬೆರಳನ್ನ ಆಡಿಸುವುದು ಈ ತರಹ ಮಾಡಿದರೆ ಎದುರಿಗಿರುವವರನ್ನು ಆಕರ್ಷಣೆ ಗಳಿಸುವುದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ ಇದರ ಅರ್ಥ ಬೇರೆಯೇ ಇದೆ. ಹೀಗೆಲ್ಲಾ ಸನ್ನೆ ಮಾಡಿದರೆ ಅದರ ಅರ್ಥ ಆಕೆ ಒತ್ತಡಕ್ಕೆ ಒಳಗಾಗಿದ್ದಾಳೆ ಆತಂಕದಲ್ಲಿದ್ದಾಳೆ ಅಥವಾ ಎದುರಿಗಿರುವವರ ಜೊತೆ ಮಾತನಾಡಲು ಹಿಂಜರಿಯುತ್ತಿದ್ದಾಳೆ ಎಂದು ಅರ್ಥ.
ಹಾಗೆಯೇ ಇನ್ನು ಯಾವುದಾದರು ಒಬ್ಬ ಮಹಿಳೆ ಎಲ್ಲಾ ಚಿಕ್ಕ ಚಿಕ್ಕ ವಿಷಯಗಳಿಗೂ ನಗುತ್ತಿದ್ದಾರೆ ಎಂದರೆ ಅವರು ತುಂಬಾನೇ ನರ್ವಸ್ ಆಗಿದ್ದಾರೆ ಎಂದು ಅರ್ಥ. ತಮ್ಮ ನರ್ವಸ್ನೆಸ್ ನ್ನೂ ಯಾರು ಎದುರು ತೋರಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಅವರು ಹೀಗೆ ಎಲ್ಲಾದಕ್ಕೂ ನಗುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಒಬ್ಬ ಮಹಿಳೆ ಎಲ್ಲದಕ್ಕೂ ತಲೆ ಆಡಿಸುತ್ತಾಳೆ. ನಿಮ್ಮ ಎದುರು ನಿಮ್ಮ ಮಾತನ್ನು ಕೇಳಿಸಿಕೊಂಡು ತಲೆ ಆಡಿಸುತ್ತಿದ್ದಾಳೆ ಎಂದರೆ ಅದಕ್ಕೆ ಕಾರಣವೇನು ಗೊತ್ತಾ ! ಆಕೆ ನಿಮ್ಮ ಮಾತನ್ನ ಸರಿಯಾಗಿ ಕೇಳಿಸಿಕೊಳ್ಳುತ್ತಿದ್ದಾಳೆ ನಿಮ್ಮ ಮಾತಿಗೆ ಗೌರವ ನೀಡುತ್ತಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಬಹುದು.
ಇನ್ನು ಯಾವುದೇ ಮಹಿಳೆ ಯೊಂದಿಗೆ ಶೇಕ್ ಹ್ಯಾಂಡ್ ಮಾಡಿದಾಗ ಅವರ ಕೈನಲ್ಲಿ ಗಟ್ಟಿಯಾದ ಬಲ ಇಲ್ಲದೆ ಇದ್ದರೆ ಆಕೆ ನರ್ವಸ್ ಆಗಿದ್ದಾಳೆ ಅಥವಾ ಅವಳಲ್ಲಿ ಆತ್ಮವಿಶ್ವಾಸ ಕಡಿಮೆ ಎಂದು ಅರ್ಥ ಮಾಡಿಕೊಳ್ಳುವುದು. ಇನ್ನು ಕೊನೆಯದಾಗಿ ಹೆಣ್ಣು ಮಕ್ಕಳು ತುಟಿ ಕಚ್ಚಿದರೆ ಏನು ಅರ್ಥ ಗೊತ್ತಾ? ಸಾಮಾನ್ಯವಾಗಿ ಹುಡುಕಿಯರು ಕೆಳದುಟಿಯನ್ನು ಕಚ್ಚಿಕೊಳ್ಳುತ್ತಾರೆ ಅಂದ್ರೆ ಅವರು ವಯ್ಯಾರ ಮಾಡುತ್ತಿದ್ದಾರೆ ಅಥವಾ ಹುಡುಗರನ್ನ ತಮ್ಮ ಆಕರ್ಷಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಭಾವಿಸುತ್ತೇವೆ.
ಆದರೆ ಇದು ಅಕ್ಷರಶಃ ತಪ್ಪು. ಮಹಿಳೆ ತಾನು ಏನಾದರೂ ಆಳವಾಗಿ ಯೋಚಿಸುತ್ತಿದ್ದಾಗ ಒತ್ತಡದಲ್ಲಿದ್ದಾಗ ಯಾವುದಾದರೂ ಗಟ್ಟಿ ನಿರ್ಧಾರವನ್ನ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ರೀತಿ ತುಟಿ ಕಚ್ಚುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಹಾಗೆ ಇಂಥ ಸಂದರ್ಭದಲ್ಲಿ ಉಗುರು ಕಚ್ಚುವ ಅಭ್ಯಾಸವು ಕೂಡ ಸಾಕಷ್ಟು ಮಹಿಳೆಯರಿಗೆ ಇರುತ್ತದೆ.