ಕೇವಲ ಸಿನಿಮಾ ನಟಿಯರು ಮಾತ್ರ ನೋಡಲು ಸುಂದರವಾಗಿರುತ್ತಾರೆ, ಹಾ-ಟ್ ಆಗಿರುತ್ತಾರೆ, ಅವರಷ್ಟೇ ಫಿಗ-ರ್ ಮೈಂಟೇನ್ ಮಾಡಿರುತ್ತಾರೆ ಎಂದು ಸಾಮಾನ್ಯವಾಗಿ ಅಂದುಕೊಂಡಿರುತ್ತಾರೆ. ಆದರೆ ಕನ್ನಡದ ಒಬ್ಬ ಧಾರವಾಹಿ ನಟಿ ಈ ರೀತಿ ಯೋಚನೆ ಮಾಡುವವರನ್ನು ಹೌಹಾರುವಂತೆ ಮಾಡಿದ್ದಾರೆ. ಅದು ಬೇರಾರೂ ಅಲ್ಲ, ನಟಿ ಶ್ವೇತಾ ಪ್ರಸಾದ್. ಹೌದು, ಸೋಶಿಯಲ್ ಮೀಡಿಯಾ ಫಾಲೋ ಮಾಡುವವರು ಖಂಡಿತಾ ಶ್ವೇತಾ ಪ್ರಸಾದ್ ಅವರ ಫ್ಯಾನ್ ಆಗಿರುತ್ತಾರೆ.
ಅಷ್ಟು ಸುಂದರವಾಗಿ ಅವರು ಫೋಟೋಗಳಲ್ಲಿ ಕಾಣುತ್ತಾರೆ. ಶ್ವೇತಾ ಪ್ರಸಾದ್ ಅವರು ಮೂಲತಃ ಶಿವಮೊಗ್ಗದವರು. ಇವರು ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಆದರೆ ಇವರಿಗೆ ಮಾಡೆಲಿಂಗ್ ನಲ್ಲಿ ವಿಪರೀತ ಆಸಕ್ತಿ ಇತ್ತು. ಹಾಗಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಅವರು ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು.
ಇವರು ಫೇಮಸ್ ಆರ್ ಜೆ ಆಗಿರುವ ಪ್ರದೀಪ್ ಅವರನ್ನು ಮದುವೆ ಆಗಿದ್ದರು. ಮದುವೆ ನಂತರವೂ ಅವರು ಮಾಡೆಲಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಒಂದು ದಿನ ಪೇಸ್‌ಬುಕ್‌ನಲ್ಲಿ ಇವರ ಸುಂದರವಾದ ಪೋಟೋ ನೋಡಿದ ನಿರ್ಮಾಪಕಿ ಶೃತಿ ನಾಯ್ಡು ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದ್ದರು, ಆದರೆ ಶ್ವೇತಾ ಪ್ರಸಾದ್ ಅವರು ಈ ಆಫರನ್ನು ಮೊದಲು ನಿರಾಕರಿಸಿದ್ದರು.
ಆದರೆ ಪತಿಯ ಪ್ರೋತ್ಸಾಹದಿಂದ ನಟಿಸಿಲು ಒಪ್ಪಿಕೊಂಡರು. ಹೀಗೆ ಮದುವೆ ನಂತರದಲ್ಲಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ನಟಯಾಗಿ ಜೀ ಕನ್ನಡದಲ್ಲಿ ಪ್ರಸಾರವಾದ `ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಯಲ್ಲಿ ನಟಿಸಿದರು.ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು. ಈ ಧಾರಾವಾಹಿ 600 ಎಪಿಸೋಡ್ಗಳನ್ನು ಪೂರ್ಣಗೊಳಿಸಿತತ್ತು. ಇದರಿಂದಾಗಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತ್ತು.
ಆ ನಂತರ ಶ್ವೇತಾ ಪ್ರಸಾದ್ ಅವರು ಕಲರ್ಸ್ ಕನ್ನಡ ವಾಹಿನಿಯ `ರಾಧಾ ರಮಣ’ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರವಾಹಿ ಅವರನ್ನು ಮತ್ತಷ್ಟು ಜನಪ್ರಿಯತೆಯ ಉತ್ತುಂಗಕ್ಕೇರಿಸಿತು. ಇನ್ನು ಶ್ವೇತಾ ಪ್ರಸಾದ್ 2017 ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಕನ್ನಡದ ಬಿಗ್ ಬಾಸ್ ಸೀಸನ್7’ರಲ್ಲಿ ಸೆಲೆಬ್ರಿಟಿ ಸ್ಪರ್ಧಿ ಆಗಿ ಇವರು ಬಂದಿದ್ದರು.
ಇನ್ನಿಉ 2019ರಲ್ಲಿ ತೆರೆಗೆ ಬಂದ ‘ಕಳ್ಬೆಟ್ಟದ ದರೋಡೆಕೋರರು’ ಎಂಬ ಚಿತ್ರದ ಮೂಲಕ ಬೆಳ್ಳಿ ಪರದೆಗೂ ಕಾಲಿಟ್ಟರು. ಹೀಗೆ ನಟಿ ಶ್ವೇತಾ ಪ್ರಸಾದ್ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಫೇಮಸ್ ಆಗಿದ್ದಾರೆ. ಆದರೆ ಇವರು ಶ್ರೀರಸ್ತು ಶುಭಮಸ್ತು’ವಿನ ಜಾನ್ಹವಿಯಾಗಿ, `ರಾಧಾ ರಮಣ’ದ ರಾಧಾ ಆಗಿ ಕನ್ನಡಿಗರಿಗೆ ತುಂಬಾ ಪರಿಚಯ. ಇದೀಗ ಯಾವ ಧಾರವಾಹಿಯಲ್ಲಿ ಕೂಡ ನಟಿಸದಿದ್ದರೂ ತನ್ನನ್ನು ಮಾಡೆಲಿಂಗ್ ಲೋಕಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಶ್ವೇತಾ ಪ್ರಸಾದ್, ತಮ್ಮ ಸುಂದರ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಹೆಚ್ಚಾಗಿ ಇವರು ಹಾ-ಟ್ ಆಗಿರುವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರನ್ನು ನೋಡಿದರೆ ಯಾರು ಕೂಡ ಇವರಿಗೆ ಮದುವೆ ಆಗಿದೆ ಎಂದು ಹೇಳಲು ಸಾಧ್ಯ ಇಲ್ಲ.ಮದುವೆ ಆದ ಮೇಲೆ ನಟಿಯರ ಕೆರಿಯರ್ ಬ್ರೇಕ್ ಡೌನ್ ಆಗುತ್ತವೆ ಎಂಬ ಮಾತಿಗೆ ವಿರುದ್ಧವಾಗಿ ಇವರು ಮದುವೆ ಆದ ನಂತರದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಇದೀಗ ಇವರು ಬಿಳಿ ಬಣ್ಣದ ಮುತ್ತಿನ ಡಿಸೈನ್ ಇರುವ ಲೆಹಂಗಾ ರೀತಿಯ ಡ್ರೆಸ್ ಧರಿಸಿರುವ ಫೋಟೊ ಶೇರ್ ಮಾಡಿದ್ದು, ಹುಡುಗರು ಅಬ್ಬಾ ಎಂದು ಕಣ್ಣು ಮಿಟುಕಿಸದೆ ನೋಡುವಂತೆ ಕಾಣಿಸಿದ್ದಾರೆ. ಅವರ ಬಳುಕುವ ಮೈಮಾಟಕ್ಕೆ ಸರಿಯಾಗಿ ಆ ಡ್ರೆಸ್ ಕೂಡ ಇದ್ದು ಮತ್ತೆ ಮತ್ತೆ ನೋಡಬೇಕು ಅನ್ನುವಂತೆ ಶ್ವೇತಾ ಪ್ರಸಾದ್ ಕಾಣಿಸಿದ್ದಾರೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.