ನಾವು ಪ್ರತಿನಿತ್ಯ ಒಂದಲ್ಲ ಒಂದು ವೈಚಿತ್ರ್ಯಗಳಿಗೆ ಸಾಕ್ಷಿಯಾಗುತ್ತದೆ ಒಬ್ಬ ಗಂಡು ಒಬ್ಬ ಹೆಣ್ಣು ವಿವಾಹವಾಗಿ ದಾಂಪತ್ಯ ನಡೆಸುವುದು ಹೊಸತೇನೂ ಅಲ್ಲ. ಮದುವೆ ಎನ್ನುವ ಬಂಧುದಲ್ಲಿ ಗಂಡು ಹೆಣ್ಣು ಬಂಧಿಯಾಗಿ ಜೀವನಪರ್ಯಂತ ಒಟ್ಟಾಗಿ ಜೀವನ ನಡೆಸುತ್ತಾರೆ. ಹೀಗೆ ತಮಗೆ ಬೇಕಾದ ಜೀವನವನ್ನು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ತಮ್ಮ ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದು.
ಆದರೆ ಇತ್ತೀಚಿಗೆ ಮನೆಯವರೆಲ್ಲ ನೋಡಿ ಒಪ್ಪಿ, ಮದುವೆ ಮಾಡಿಕೊಡುವುದಕ್ಕಿಂತ ತಾವಾಗಿಯೇ ನೋಡಿಕೊಂಡು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು. ಇದೀಗ ಅವಳಿ ಸಹೋದರಿಯರು ಇಬ್ಬರು ಆಶ್ಚರ್ಯವಾಗುವ ರೀತಿಯಲ್ಲಿ ಮದುವೆ ಆಗಿದ್ದಾರೆ, ಹೇಗಿತ್ತು ಗೊತ್ತಾ ಅವರ ಮದುವೆ? ಹೌದು ಸ್ನೇಹಿತರೆ, ಈ ವಿಷಯವನ್ನು ಕೇಳಿದರೆ ನಿಮಗೆ ನಿಜಕ್ಕೂ ಶಾಕ್ ಆಗಬಹುದು.
ಇದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ತಾಲೂಕಿನಲ್ಲಿ ಅಕ್ಲುಜ್ ನಲ್ಲಿ ವಾಸಿಸುತ್ತಿರುವ ಅವಳಿ ಸಹೋದರಿಯರ ಕಥೆ. ಇವರಿಬ್ಬರು ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೌದು ಆ ಅವಳಿ ಸಹೋದರಿಯರ ಹೆಸರು ಪಿಂಕಿ ಮತ್ತು ರಿಂಕಿ. ರಿಂಕಿ ಮತ್ತು ಪಿಂಕಿ ಐಟಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಮುಂಬೈನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇವರಿಬ್ಬರು ಇಂಜಿನಿಯರ್ ಆಗಿದ್ದಾರೆ.
ರಿಂಕಿ ಮತ್ತು ಪಿಂಕಿ ಬಾಲ್ಯದಿಂದಲೂ ಒಟ್ಟಿಗೆ ಇದ್ದವರು. ಅವಳಿ ಸಹೋದರಿಯರಾಗಿರುವ ಇವರಿಬ್ಬರೂ ಯಾವತ್ತೂ ಶಿಕ್ಷಣಕ್ಕಾಗಲಿ ಅಥವಾ ಇತರ ಕಾರಣಕ್ಕಾಗಲಿ ಬೇರೆ ಬೇರೆ ಆದವರಲ್ಲ. ಸದಾ ಒಟ್ಟಿಗೆ ಇದ್ದ ಅಕ್ಕತಂಗಿಯರಿಗೆ ಮದುವೆಯಲ್ಲೂ ಕೂಡ ಇಂಥದೊಂದು ನಿರ್ಧಾರ ತೆಗೆದುಕೊಳ್ಳಬೇಕು ಅನಿಸಿದೆ. ಹೌದು ರಿಂಕಿ ಮತ್ತು ಪಿಂಕಿ ಇಬ್ಬರು ತಾವು ಜೀವನಪರ್ಯಂತ ಒಟ್ಟಿಗೆ ಇರಬೇಕು ಎನ್ನುವ ಸಲುವಾಗಿ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ.
ಮಲಶಿರಾಸ್ ತಾಲೂಕಿನಲ್ಲಿ ಅತುಲ್ ಎನ್ನುವ ವ್ಯಕ್ತಿ ರಿಂಕಿ ಹಾಗೂ ಪಿಂಕಿಗೆ ಪರಿಚಯವಾಗುತ್ತಾನೆ. ಅವಳಿ ಸಹೋದರಿಯರ ತಂದೆ ಅಕಾಲಿಕ ಮ-ರ-ಣ ಹೊಂದಿದ ನಂತರ ಅವರ ತಾಯಿಯು ಕೂಡ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ರಿಂಗಿ ಹಾಗೂ ಪಿಂಕಿಯ ಈ ಕಷ್ಟದ ಸಮಯದಲ್ಲಿ ಅವರ ಜೊತೆಗೆ ನಿಂತಿದ್ದು ಅತುಲ್.
ಅವರಿಗೆ ಯಾವುದೇ ಸಮಸ್ಯೆ ಆದರೂ ಸಹಾಯ ಮಾಡುವುದಕ್ಕೆ ಮುಂದೆ ಬರುತ್ತಿದ್ದ ಅದು ನನ್ನು ರಿಂಕಿ ಹಾಗೂ ಬೆಂಕಿ ಪ್ರೀತಿಸಿದ್ದಾರೆ ನಂತರ ಮೂವರು ಸೇರಿ ಒಟ್ಟಿಗೆ ಮದುವೆ ಆಗಲು ನಿರ್ಧರಿಸಿದ್ದಾರೆ. ಕುಟುಂಬಸ್ಥರ ಗುರು ಹಿರಿಯರ ಎದುರು ಅದ್ದೂರಿಯಾಗಿ ಈ ಮೂವರು ಇದೀಗ ಹಾಸ್ಯಮಣೆ ಏರಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಂಕಿ ಪಿಂಕಿ ಹಾಗೂ ಅತುಲ್ ಮದುವೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ರೀತಿ ಮದುವೆ ಆಗುವುದು ಕಾನೂನಾತ್ಮಕವಾಗಿ ಸರಿಯೇ ಎನ್ನುವುದು ಹಲವರ ಪ್ರಶ್ನೆ. ಈ ವಿಡಿಯೋ ನೋಡಿದ ನಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಕೆಲವರು ಅಕ್ಕ ತಂಗಿಯರ ಬಾಂಧವ್ಯದ ಬಗ್ಗೆ ಹೊಗಳಿದರೆ ಇನ್ನು ಕೆಲವರು ಅತುಲ್ ಗೆ ‘ಲಡ್ಡು ಬಂದು ಬಾಯಿಗೆ ಬಿತ್ತಾ’ ಅಂತ ಕಮೆಂಟ್ ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.