ಈ ಸೋಶಿಯಲ್ ಮೀಡಿಯಾಗಳಿಗೆ ಇರುವಷ್ಟು ಪವರ್ ಇನ್ಯಾವುದಕ್ಕೂ ಇಲ್ಲ. ಒಂದೊಮ್ಮೆ ಟ್ರೆಡಿಷನಲ್ ಮೀಡಿಯಾಗಳಿಗೆ ಭಾರೀ ಡಿಮಾಂಡ್ ಇದ್ದರೂ ಅದರಲ್ಲಿ ಕೇವಲ ಸಾಧನೆ ಮಾಡಿರುವ ಅಥವಾ ಏನಾದರೂ ದೊಡ್ಡ ಮಟ್ಟದ ಸುದ್ದಿ ಇದ್ದರೆ ಮಾತ್ರ ಪ್ರಸಾರ ಆಗುತಿತ್ತು. ಆದರೆ ಈಗ ಈ ಸೋಶಿಯಲ್ ಮೀಡಿಯಾ ಬಂದಮೇಲೆ ಟ್ರೆಡಿಷನಲ್ ಮೀಡಿಯಾ ಕೂಡ ಅದರಲ್ಲಿ ಬರುವ ಸುದ್ದಿಗಳನ್ನು ನೋಡಿ ಪ್ರಸಾರ ಮಾಡುತ್ತದೆ.
ಈ ಸೋಶಿಯಲ್ ಮೀಡಿಯಾಕ್ಕೆ ಯಾವುದೇ ಮೂಲೆಯಲ್ಲಿ ಇರುವ ವ್ಯಕ್ತಿಗಳನ್ನು ಸ್ಟಾರ್ ಆಗಿ ಮಾಡುವಂತಹ ಶಕ್ತಿ ಇರುತ್ತದೆ. ಅದೇ ರೀತಿ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಅವರನ್ನು ಮಣ್ಣು ಮುಕ್ಕಿಸುವಂತಹ ಶಕ್ತಿಯೂ ಇದೆ. ಹೌದು, ಈ ಸೋಶಿಯಲ್ ಮೀಡಿಯಾ ಇದೀಗ ಅದು ಎಂತಹ ಪ್ರತಿಭೆ ಇದ್ದರೂ ಅವರನ್ನು ಜಗತ್ತು ಗುರುತಿಸುವಂತೆ ಮಾಡುತ್ತದೆ.
ಅದು ಏನೇ ಮಾಡಿದರೂ ಸೋಶಿಯಲ್ ಮೀಡಿಯಾದಿಂದ ವೈರಲ್ ಆಗಿ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಕೂಡ ಹಿಂದಿಕ್ಕುವಂತೆ ಮಾಡುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್ ಆಗಲು ಅಥವಾ ಫೇಮಸ್ ಆಗಲು ಕೇವಲ ಜನರಿಗೆ ನೋಡಲು ಇಷ್ಟ ಆಗುವಂತಹ ಡ್ಯಾನ್ಸ್, ಡ್ರಾಮ, ಆಕ್ಟಿಂಗ್ ಅದೇ ರೀತಿ ಕೇಳಲು ಖುಷಿ ಆಗುವಂತಹ ಹಾಡು ಗೊತ್ತಿರಲೇ ಬೇಕು ಅಂತೇನಿಲ್ಲ.
ನಾಲ್ಕು ಮಂದಿ ನೋಡಿ ನಗಾಡುವಂತಹ ಅಥವಾ ಥೂ ಇದೆಂಥ ಹುಚ್ಚನಪ್ಪಾ ಎಂದು ಬೈಯುವಂತಹ ವಿಡಿಯೋಗಳನ್ನು ಮಾಡುವ ಮೂಲಕವೂ ಫೇಮಸ್ ಆಗುತ್ತಾರೆ. ಇಂತಹ ಹಲವಾರು ಜನರನ್ನು ನಾವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೇವೆ. ಇದೇ ರೀತಿಯಾಗಿ ಫೇಮಸ್ ಆದವರು ಕಾಫಿನಾಡು ಚಂದು ಅನ್ನುವವರು. ಇವರ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯ ಇರುವುದಿಲ್ಲ.
ಯಾಕಂದರೆ ಸೋಶಿಯಲ್ ಮೀಡಿಯಾ ನೋಡುವವರಿಗೆ ಇವರ ಬಗ್ಗೆ ಗೊತ್ತೇ ಇದೆ. ರೀಲ್ಸ್ ನಲ್ಲಿ ಅದೇ ರೀತಿ ಯೂ ಟ್ಯೂಬ್, ಫೇಸ್ ಬುಕ್ ನಲ್ಲಿ ತನ್ನದೇ ರೀತಿಯಲ್ಲಿ ಯಾವುದೇ ಸ್ವರ ತಾಳ ವಿಲ್ಲದೆ ಹಾಡುವ ಕಾಫಿನಾಡು ಚಂದು ಇದೀಗ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ತಾನು ಯಾವುದೇ ವಿಡಿಯೋ ಪ್ರಾರಂಭ ಮಾಡುವ ಮೊದಲು ನಾನು ಪುನೀತಣ್ಣ ಶಿವಣ್ಣ ನವರ ಅಭಿಮಾನಿ ಎಂದು ಮಾತು ಆರಂಭಿಸುವ ಇವರು ನಂತರ ಯಾವುದಾದರೂ ರೀಲ್ಸ್ ಮಾಡುತ್ತಾರೆ.
ಈ ರೀತಿ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಯಾವುದೇ ಮೀಮ್ ಪೇಜ್ , ಟ್ರೋಲ್ ಪೇಜ್ ಗಳನ್ನು ನೋಡಿದರೆ ಅಲ್ಲಿ ಕಾಫಿನಾಡು ಚಂದು ಅವರ ಹೆಸರು ಕೇಳಿ ಬರುತ್ತದೆ. ಇಂತಹ ಸಾಮಾನ್ಯ ವ್ಯಕ್ತಿ ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಆಗುವ ಮೂಲಕ ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರನ್ನೇ ಹಿಂದಿಕ್ಕಿದ್ದಾರೆ. ಅರೆ ಅಉ ಹೇಗಂತನಾ? ಕಾಫಿನಾಡು ಚಂದು ಅವರ ಇನ್ಸ್ಟಾಗ್ರಾಂ ನಲ್ಲಿ 228 ಸಾವಿರ ಫಾಲೋವರ್ಸ್ ಗಳಿದ್ದಾರೆ.
ಆದರೆ ಸೆಲೆಬ್ರಿಟಿ ಆಗಿರುವ ಅರ್ಜುನ್ ಜನ್ಯಾ ಅವರಿಗೆ ಕೇವಲ 194 ಸಾವಿರ ಫಾಲೋವರ್ಸ್ ಇದ್ದಾರೆ. ಈ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನೇ ಹಿಂದಿಕ್ಕಿದ್ದಾರೆ. ಮನಸ್ಸಿಗೆ ಬಂದಂಥಹ ಹಾಡು, ಮನಸ್ಸಿಗೆ ಬಂದಥಹ ಸಾಹಿತ್ಯವನ್ನು ಹೇಳುವ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಓಟಿಟಿ ಗೆ ಕಾಫಿನಾಡು ಚಂದು ಅವರಿಗೆ ಅವಕಾಶ ಕೊಡಬೇಕು ಅನ್ನುವ ಬೇಡಿಕೆಯೂ ಶುರು ಆಗಿದೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ತಿಳಿಸಿ.