PhotoGrid Site 1664770448174

ಮೊದಲಬಾರಿಗೆ ಅತ್ತೆಯನ್ನು ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ! ಅಳಿಯನನ್ನು ತಬ್ಬಿಕೊಂಡ ಸ್ವಾಗತ ಕೋರಿದ ಅತ್ತೆ, ವಿಡಿಯೋ ವೈರಲ್ ನೋಡಿ!!

ಸುದ್ದಿ

ಜನರಿಗೆ ಸಿನಿಮಾ ಸ್ಟಾರ್ ಗಳ ಬಗ್ಗೆ ಎಷ್ಟು ಆಸಕ್ತಿ ಇರುತ್ತೋ ಅಷ್ಟೇ ಆಸಕ್ತಿ ಕುತೂಹಲ ಇರೋದು ಕ್ರಿಕೆಟಿಗರ ಬಗ್ಗೆಯೂ ಕೂಡ. ಹೌದು ನಮ್ಮ ದೇಶದಲ್ಲಿ ಇತರ ಎಲ್ಲಾ ಕ್ರೀಡೆಗಳಿಗಿಂತಲೂ ಕ್ರಿಕೆಟ್ ಗೆ ಹೆಚ್ಚಿನ ಬೆಲೆ ಕೊಡಲಾಗುತ್ತೆ. ಅಷ್ಟರ ಮಟ್ಟಿಗೆ ಫೇಮಸ್ ಆಗಿರುವ ಕ್ರಿಕೆಟ್ ಆಡುವ ಟೀಮ್ ಇಂಡಿಯಾ ತಂಡದಲ್ಲಿ ಅತ್ಯದ್ಭುತ ಆಟಗಾರರು ಇದ್ದಾರೆ. ನಾವು ಸಚಿನ್ ಅವರನ್ನು ಕ್ರಿಕೆಟ್ ದೇವರು ಎಂದೇ ಪೂಜಿಸುತ್ತೇವೆ ಅದೇ ರೀತಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಎಲ್ಲರೂ ಕ್ರಿಕೆಟ್ ಗುರುಗಳು.

ಆದರೆ ಇವರುಗಳನ್ನು ಹೊರತುಪಡಿಸಿ ಇನ್ನೂ ಕೆಲವು ಆಟಗಾರರು ಜನರ ಗಮನಸೆಳೆಯುತ್ತಾರೆ ಅಂತವರಲ್ಲಿ ಆಲ್ ರೌಂಡರ್ ಹಾರ್ದಿಕ ಪಾಂಡ್ಯ ಕೂಡ ಒಬ್ರು. ಹೌದು ಸ್ನೇಹಿತರೆ ಹಾರ್ದಿಕ ಪಾಂಡ್ಯ ಟೀಮ್ ಇಂಡಿಯಾದಲ್ಲಿ ಬಹಳ ಅತ್ಯುತ್ತಮ ಹೆಸರು ಮಾಡಿರುವ ಆಟಗಾರ ಬ್ಯಾಟಿಂಗ್ ಬೀಸುವುದು ಮಾತ್ರವಲ್ಲದೆ ಅಗತ್ಯವಿದ್ದರೆ ಬೌಲಿಂಗ್ ಗು ಕೂಡ ಸಿದ್ಧ. ಇನ್ನು ಹಾರ್ದಿಕ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಹಾರ್ದಿಕ್ ಪಾಂಡ್ಯ ಅವರು ನತಾಶಾ ಸ್ಟ್ಯಾಂಕೋವಿಕ್ ಅವರ ಜೊತೆ ಜನವರಿ 01 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಜೋಡಿ ಅದೇ ವರ್ಷ ಅಂದರೆ 2020 ಮೇ 31ರಂದು ದಾಂಪತ್ಯ ಜೀವನ ಆರಂಭಿಸಿದ್ದರು. ಇನ್ನು ಹಾರ್ದಿಕ ಅವರಿಗೆ ಅಗಸ್ತ್ಯ ಎನ್ನುವ ಮುದ್ದಾದ ಮಗುವು ಕೂಡ ಇದೆ. ಇನ್ನು ಹಾರ್ದಿಕ ಪಾಂಡ್ಯ ಅವರು ಮದುವೆಯಾಗಿ ಎರಡು ವರ್ಷ ಕಳೆದರೂ ನತಾಶ ಅವರ ಮನೆಯವರ ಜೊತೆಗೆ ಭೇಟಿಯಾಗಿರಲಿಲ್ಲ ಅವರೊಂದಿಗೆ ವಿಡಿಯೋ ಕಾಲ್ ಅಥವಾ ಫೋನ್ ನಲ್ಲಿ ಮಾತನಾಡುತ್ತಿದ್ದರೆ ಹೊರತು ಹಾರ್ದಿಕ್ ಪಾಂಡ್ಯ ನೇರವಾಗಿ ನತಾಶಾ ಕುಟುಂಬ ಅವರನ್ನು ಭೇಟಿ ಮಾಡಿರಲಿಲ್ಲ.

ಇದೀಗ ಆ ಸಮಯವೂ ಕೂಡ ಒಲಿದು ಬಂದಿದೆ. ಸ್ವತಃ ಹಾರ್ದಿಕ ಪಾಂಡ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಹೌದು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ತಾವು ಮೊದಲ ಬಾರಿಗೆ ನತಾಶಾ ಕುಟುಂಬವನ್ನು ಭೇಟಿ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಈಗಾಗಲೇ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿದೆ.

ಹಾರ್ದಿಕ ಪಾಂಡ್ಯ ಮೊದಲು ಹೋಗಿ ಅತ್ತೆ ರಾಧಾ ಅವರನ್ನ ಭೇಟಿಯಾಗಿ ಅವರನ್ನ ಅಪ್ಪಿಕೊಳ್ಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ವಿಡಿಯೋ ಹಾಗೂ ಫೋನ್ ಕಾಲ್ ನಿಂದ ಕೊನೆಗೂ ವ್ಯಕ್ತಿಯನ್ನು ಮೀಟ್ ಆಗುವ ಹಾಗೆ ಆಯ್ತು. ನಟ್ಸ್ ಳ ಕುಟುಂಬದವರನ್ನು ಮೊದಲ ಬಾರಿಗೆ ಭೇಟಿಯಾದ ಇದೊಂದು ಅತ್ಯದ್ಭುತ ಕ್ಷಣವಾಗಿತ್ತು’ ಎಂದು ಹಾರ್ದಿಕ ಪಾಂಡ್ಯ ಬರೆದುಕೊಂಡಿದ್ದಾರೆ.

*೮ಹಾರ್ದಿಕ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಏನಿದೆ?* ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿಯ ತವರು ಮನೆಗೆ ಹೋಗುತ್ತಾರೆ ಅಲ್ಲಿ ಎದುರಲ್ಲಿ ನತಾಶಾ ಅವರ ತಾಯಿ ರಾಧಾ ಅಳಿಯನನ್ನು ಎದುರುಗೊಳ್ಳುತ್ತಾರೆ. ಬಹಳ ಪ್ರೀತಿಯಿಂದ ಅಳಿಯನನ್ನು ಅಪ್ಪಿಕೊಂಡು ನನಗೆ ನೀನು ಬಂದೇ ಬರುತ್ತೀಯ ಎಂದು ಪಕ್ಕ ಗೊತ್ತಿತ್ತು ಎಂದು ಸಂತೋಷದ ಮಾತುಗಳನ್ನು ಆಡುತ್ತಾರೆ.

28 ವರ್ಷದ ಹಾರ್ದಿಕ ಪಾಂಡ್ಯ ಮದುವೆಯಾಗಿ ಎರಡು ವರ್ಷ ಆದ್ರೂ ಅತ್ತೆಯನ್ನು ಭೇಟಿಯಾಗಿರಲಿಲ್ಲ ಇದೀಗ ನಕಾಶ ಅವರ ಫ್ಯಾಮಿಲಿ ಭೇಟಿಯಾಗಿ ಹಾರ್ದಿಕ್ ಸಂತಸ ವ್ಯಕ್ತ ಪಡಿಸಿದ್ದಾರೆ. ಅತ್ತೆಯ ನಂತರ ನತಾಶ ಕುಟುಂಬದ ಇನ್ನೂ ಕೆಲವರನ್ನು ಭೇಟಿಯಾಗುತ್ತಾರೆ ಹಾರ್ದಿಕ ಪಾಂಡ್ಯ ಇದೀಗ ಈ ಕ್ಯೂಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾರ್ದಿಕ ಪಾಂಡ್ಯ ಹಾಗೂ ನತಾಶಾಂಕು ವಿಚ್ ಕೋವಿಡ್ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಹಾಗಾಗಿ ಇವರ ವಿವಾಹ ಸರಳವಾಗಿ ನೆರವೇರಿತ್ತು.

Leave a Reply

Your email address will not be published. Required fields are marked *