ಬಿಗ್ ಬಾಸ್ ಸೀಸನ್ 9, 50 ದಿನಗಳನ್ನು ಪೂರೈಸಿದೆ. ಅರ್ಧ ಸೆಂಚುರಿ ಪೂರೈಸಿದ ಖುಷಿಯಲ್ಲಿ ಕಳೆದ ವಾರ ಯಾವ ಎಲಿಮಿನೇಷನ್ ಕೂಡ ಇರಲಿಲ್ಲ. ಹಾಗಾಗಿ ಈ ಬಾರಿ ಬಹುಶಃ ಈ ವಾರ ಇಬ್ಬರೂ ಮನೆಯಿಂದ ಹೊರ ಹೋಗಬಹುದು ಎನ್ನುವ ಅನುಮಾನ ಎಲ್ಲರಲ್ಲಿಯೂ ಇತ್ತು. ಆದರೆ ಈ ವಾರ ಯಾರೂ ನಿರೀಕ್ಷೆ ಮಾಡದೆ ಇರುವ ರೀತಿಯಲ್ಲಿ ಟಾಪ್ ಕಂಟೆಸ್ಟೆಂಟ್ ಒಬ್ಬರು ಮನೆಯಿಂದ ಆಚೆ ಹೋಗಿದ್ದಾರೆ. ಅವರೇ ದೀಪಿಕಾ ದಾಸ್.
ಪ್ರವೀಣರ ಸಾಲಿನಲ್ಲಿದ್ದ ದೀಪಿಕಾ ದಾಸ್ ಮನೆಯಿಂದ ಹೊರ ಬಂದಿರುವ ಪ್ರವೀಣರಲ್ಲಿ ಮೊದಲ ಸ್ಪರ್ಧಿ ಆಗಿದ್ದಾರೆ. ಕಳೆದ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ದೀಪಿಕಾ ದಾಸ್ ಅವರ ಹವಾ ಜೋರಾಗಿತ್ತು. ಯಾವುದೇ ಟಾಸ್ಕ್ ಕೊಟ್ರು ಅದನ್ನ ಅತ್ಯುತ್ತಮವಾಗಿ ನಿಭಾಯಿಸಿದ ಸ್ಪರ್ಧಿ ಇವರಾಗಿದ್ದರು. ಎದುರಾಳಿ ಸ್ಪರ್ಧಿ ಎಷ್ಟೇ ಗಟ್ಟಿಗರಾಗಿರಲಿ ದೀಪಿಕಾ ಮುಂದೆ ತಲೆ ಬಾಗಲೇಬೇಕು.
ಅಷ್ಟು ಅದ್ಬುತವಾಗಿ ಆಟ ಆಡುತ್ತಿದ್ದರು ದೀಪಿಕಾ ದಾಸ್. ಈ ಬಾರಿ ದೀಪಿಕಾ ದಾಸ್ ಅಷ್ಟು ಹೆಚ್ಚಾಗಿ ಆಟದಲ್ಲಾಗಲಿ ಅಥವಾ ಮನೆಯವರ ಜೊತೆ ಬೆರೆಯುವದರಲ್ಲಾಗಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ಕಂಪ್ಲೇಂಟ್ ಇತ್ತು. ಇತರ ಸ್ಪರ್ಧಿಗಳ ಜೊತೆ ಹೆಚ್ಚು ಬೆರೆಯುವುದಿಲ್ಲ ಎನ್ನುವ ಕಾರಣಕ್ಕೆ ಪ್ರತಿ ವಾರ ದೀಪಿಕಾ ದಾಸ್ ಅವರನ್ನು ನಾಮಿನೇಟ್ ಮಾಡಲಾಗುತ್ತಿತ್ತು.
ಆದರೆ ಈವರೆಗೂ ಗೆದ್ದು ಬಂದಿದ್ದರು ದೀಪಿಕಾ ದಾಸ್. ಆದರೆ ಬ್ಯಾಡ್ ಲಕ್ ಈ ಬಾರಿ ಮಾತ್ರ ದೀಪಿಕಾ ದಾಸ್ ಮನೆಯಿಂದ ಆಚೆ ಹೋಗಿದ್ದಾರೆ. ನಾಮಿನೇಟ್ ಆಗಿರುವವರಲ್ಲಿ ಕೊನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ದೀಪಿಕಾ ದಾಸ್ ಉಳಿದಿದ್ರು. ಪ್ರಶಾಂತ ಸಂಬರ್ಗಿ ಹೋಗುತ್ತಾರೆ ಅಂತ ಮನೆಯವರೆಲ್ಲರ ಊಹೆ ಆಗಿತ್ತು ಆದರೆ ಬಿಗ್ ಬಾಸ್ ಲೆಕ್ಕಾಚಾರವೇ ಬೇರೆ.
ಜನರ ನಿರ್ಣಯದಂತೆ ಪ್ರಶಾಂತ ಸಂಬರ್ಗಿ ಮನೆಯಲ್ಲಿ ಉಳಿದುಕೊಂಡಿದ್ದಾರೆ ಅಂತಯೇ ದೀಪಿಕಾ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಕಳೆದ ಸೀಸನ್ ನಲ್ಲಿ ಕೂಡ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಈ ಬಾರಿಯೂ ಕೂಡ ಕೆಲವು ಸಂದರ್ಭದಲ್ಲಿ ಉತ್ತಮ ಆಟ ಪ್ರದರ್ಶನ ಮಾಡಿದ್ದಾರೆ. ಹಾಗಾಗಿ ಅವರಿಗೆ ಬಂದಿರುವ ಸಂಭಾವನೆ ಎಷ್ಟು ಎಂದು ಎಲ್ಲರ ಕುತೂಹಲ.
ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದ ದೀಪಿಕಾ ದಾಸ್ ಅವರಿಗೆ ಬರೋಬರಿ 9 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ್ರು ಕೂಡ ದೀಪಿಕಾ ದಾಸ್ ಇನ್ಮೇಲೆ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಈಗಾಗಲೇ ಒಪ್ಪಿಕೊಂಡ ಸಿನಿಮಾಕ್ಕೆ ಶೂಟಿಂಗ್ ಶೆಡ್ಯೂಲ್ ಕೂಡ ಫಿಕ್ಸ್ ಆಗಿದೆಯಂತೆ. ಹಾಗಾಗಿ ದೀಪಿಕಾ ದಾಸ್ ಅವರನ್ನ ಇನ್ನು ಮುಂದೆ ಸಿನಿಮಾಗಳಲ್ಲಿ ನೀವು ನೋಡಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.