ಚಿನ್ನಾಭರಣ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ, ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಚಿನ್ನಾಭರಣಗಳು ಎಷ್ಟಿದ್ದರೂ ಸಾಲುವುದಿಲ್ಲ ಹೊಸ ಹೊಸ ಡಿಸೈನ್ ಬರುತ್ತಿದ್ದ ಹಾಗೆ ಅದನ್ನು ಕೊಂಡುಕೊಳ್ಳಬೇಕು ಇದನ್ನು ಕೊಂಡುಕೊಳ್ಳಬೇಕು ಅಂತ ಹೆಣ್ಣು ಮಕ್ಕಳಿಗೆ ಅನ್ನಿಸೋದು ಸಹಜ. ಹಾಗಂತ ಪ್ರತಿಬಾರಿ ಬೇರೆ ಬೇರೆ ಶಾಪ್ ಗಳಿಗೆ ಹೋಗಿ ಆಭರಣ ಖರೀದಿಸುವುದು ತುಸು ಕಷ್ಟ. ಅದಕ್ಕಾಗಿ ಪ್ರತಿ ವರ್ಷ ಜ್ಯುವೆಲ್ಸ್ ಆಫ್ ಇಂಡಿಯಾದವರು ಅದ್ದೂರಿಯಾಗಿ ಜುವೆಲ್ಲರಿ ಮೇಳವನ್ನು ನಡೆಸುತ್ತಾರೆ.
ಇಲ್ಲಿ ನಿಮಗೆ ಸಿಗದೇ ಇರುವ ಆಭರಣಗಳೆ ಇಲ್ಲ. ಹೌದು, ಜ್ಯುವೆಲ್ಸ್ ಆಫ್ ಇಂಡಿಯಾ ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ವರ್ಷದಲ್ಲಿ ಒಮ್ಮೆ ಜ್ಯುವೆಲರಿ ಎಕ್ಸಿಬಿಷನ್ ನಡೆಸುತ್ತೆ. ಬೆಂಗಳೂರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಈ ಚಿನ್ನಾಭರಣ ಮೇಳ ನಡೆಸಲಾಗುತ್ತದೆ. ಈ ಬಾರಿ ಸೇಂಟ್ ಜೋಸೆಫ್ ಹೈಸ್ಕೂಲ್ ಆವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಜ್ಯುವೆಲ್ಸ್ ಆಫ್ ಇಂಡಿಯಾ ಜ್ಯುವೆಲರಿ ಮೇಳವನ್ನು ಹಮ್ಮಿಕೊಂಡಿದೆ.
ನಿನ್ನೆಯಿಂದ ಅಂದರೆ ಅಕ್ಟೋಬರ್ 13 ರಿಂದ ಆರಂಭವಾದ ಜ್ಯುವೆಲರಿ ಮೇಳ 16ನೇ ತಾರೀಕಿನವರೆಗೂ ಮುಂದುವರೆಯಲಿದೆ. ಇನ್ನು ಇಲ್ಲಿ ಇನ್ನೊಂದು ಖುಷಿಯ ವಿಚಾರ ಅಂದ್ರೆ ಜ್ಯುವೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಮೇಘನಾ ರಾಜ್ ಆಯ್ಕೆಯಾಗಿದ್ದಾರೆ. ಹೌದು, ಈ ವರ್ಷ ಜ್ಯುವೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ಮೇಘನಾ ರಾಜ್ ಕಾಣಿಸಿಕೊಂಡಿದ್ದು ಈಗಾಗಲೇ ಹಲವಾರು ವಿವಿಧ ಜ್ಯುವೆಲರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿನ್ನ, ಬೆಳ್ಳಿ, ವಜ್ರ ಹೀಗೆ ಬೇರೆ ಬೇರೆ ರೀತಿಯ ಚಿನ್ನಾಭರಣಗಳನ್ನು ತೊಟ್ಟು ನಟಿ ಮೇಘನಾ ರಾಜ್ ಫೋಟೋಶೂಟ್ ಮಾಡಿಸಿದ್ದಾರೆ. ನಿನ್ನೆ ಆರಂಭವಾದ ಜ್ಯುವೆಲ್ಲರಿ ಮೇಳವನ್ನ ಉದ್ಘಾಟಿಸಿದ್ದು ಕೂಡ ಬ್ರಾಂಡ್ ಅಂಬಾಸಿಡರ್ ಆಗಿರುವ ಮೇಘನಾ ರಾಜ್. ಈ ಸಂದರ್ಭದಲ್ಲಿ ಚಿನ್ನದ ಬಣ್ಣದ ಸೀರೆ ಉಟ್ಟು ಕಂಗೊಳಿಸಿದ್ದರು ನಟಿ ಮೇಘನಾ ರಾಜ್.
ಇನ್ನು ಉದ್ಘಾಟನೆ ಮುಗಿದ ನಂತರ ಮೇಘನಾ ರಾಜ್ ಅವರನ್ನು ಸಂದರ್ಶನ ಮಾಡಲಾಗಿತ್ತು. ಈ ಸಂದರ್ಶನದ ವೇಳೆ ತಮಗಿಷ್ಟವಾದ ಡೈಮಂಡ್ ನೆಕ್ಲೇಸ್ ಬಗೆಗಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ನಟಿ ಮೇಘನಾ. ಮೇಘನಾ ಅವರ ಪತಿ ಚಿರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಎರಡು ವರ್ಷ ಕಳೆದಿವೆ ಆದರೆ ಚಿರು ನೆನಪು ಮಾತ್ರ ಮೇಘನಾ ಅವರನ್ನು ಬಿಟ್ಟಿಲ್ಲ. ಇನ್ನು ಚಿರು ಜೊತೆಗಿಲ್ಲದಿದ್ದರೂ ಅವರ ನೆನಪಿನಲ್ಲಿಯೇ ಖುಷಿಯಾಗಿರುವ ಮೇಘನಾ ರಾಜ್ ಮದುವೆ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಆಗಿ ತಂದುಕೊಟ್ಟ ಡೈಮಂಡ್ ನೆಕ್ಲೇಸ್ ಬಗ್ಗೆ ಮಾತನಾಡಿದ್ದಾರೆ.
ನನ್ನಲ್ಲಿ ಇರುವ ಆಭರಣಗಳಲ್ಲಿ ಚಿರು ಕೊಟ್ಟ ಡೈಮಂಡ್ ನೆಕ್ಲೆಸ್ ಅಂದರೆ ನನಗೆ ತುಂಬಾ ಪ್ರೀತಿ ಎಂದಿದ್ದಾರೆ. ಇನ್ನು ಉದ್ಘಾಟನೆಯ ಸಮಯದಲ್ಲಿಯೂ ಕೂಡ ಡೈಮಂಡ್ ನೆಕ್ಲೆಸ್ ಒಂದನ್ನು ಧರಿಸಿದ್ದು ಇದು ಅವರ ಮದುವೆಯ ಸಮಯದಲ್ಲಿ ಕೊಂಡುಕೊಂಡ ನೆಕ್ಲೆಸ್ ಅಂತೆ. ಒಟ್ಟಿನಲ್ಲಿ ಮೇಘನಾ ರಾಜ್ ಅವರಿಗೆ ಡೈಮಂಡ್ ಆಭರಣ ಅಂದ್ರೆ ಬಹು ಪ್ರೀತಿ.