ಮಿಲ್ಕ್ ಬ್ಯೂಟಿ ತಮನ್ನಾ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಬಹಳ ಸಮಯ ಆಯ್ತು ಇದೀಗ ಮತ್ತೆ ಹೊಸ ಸಿನಿಮಾದ ಮೂಲಕ ಜನರನ್ನ ಆರಂಭಿಸಲು ಬರಲಿದ್ದಾರೆ. ಮುಂಬೈನವರದ ತಮನ್ನಾ ಸೌತ್ ನಲ್ಲಿ ಮಿಂಚಿತೇ ಹೆಚ್ಚು ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಅಭಿನಯಿಸಿದ್ದಾರೆ. ಇನ್ನು ಕನ್ನಡದ ಎರಡು ಐಟಂ ಸಾಂಗ್ ಗೆ ಸೊಂಟ ಬಳುಕಿಸಿ, ಕನ್ನಡಿಗರಿಗೂ ಮೆಚ್ಚಿನ ನಟಿ ಆಗಿದ್ದಾರೆ.
ಮಿಲ್ಕ್ ಬ್ಯೂಟಿ ಎಂದೇ ಪ್ರಸಿದ್ಧರಾಗಿರುವ ತಮನ್ನಾ ಇದೀಗ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ತಮನ್ನಾ ಅವರ ನಟನೆಯ ಬಬ್ಲಿ ಬೌನ್ಸರ್ ಸಿನಿಮಾ ಟ್ರೈಲರ್, ಭಾರೀ ಸದ್ದು ಮಾಡಿದೆ. ಬಹು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ ಸಿನಿಮಾ ಇದು. ಇನ್ನು ಈ ಸಿನಿಮಾದಲ್ಲಿ ತಮ್ಮನ್ನ ಬಹಳ ವಿಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಬಬ್ಲಿ ಬೌನ್ಸರ್ ಸಿನಿಮಾದ ಟ್ರೈಲರ್ ನೋಡಿ ತಮ್ಮನ್ನ ಅವರ ನಟನಿಗೆ ಸಿನಿಪ್ರಿಯರು ವಾವ್ ಎಂದಿದ್ದಾರೆ.
ಅಂದಹಾಗೆ ಮಧುರ್ ಭಂಡಾರ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್ ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇನ್ನು ಈ ಸಿನಿಮಾ ಯಾವ ಥಿಯೇಟರ್ ನಲ್ಲೂ ಅಲ್ಲ ಬದಲಿಗೆ ಡಿಸ್ನಿ ಹಾಟಸ್ಟಾರ್ ನಲ್ಲಿ ನೇರವಾಗಿ ರಿಲೀಸ್ ಆಗಲಿದೆ. ಇನ್ನು ಲೇಡಿ ಬೌನ್ಸರ್ ಆಗಿ ತಮನ್ನಾ ಭಾಟಿಯಾ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಟೀಸರ್ ನ ಆರಂಭದಲ್ಲಿಯೇ ಸಿನಿಮಾದ ಬಗ್ಗೆ ಸಣ್ಣ ಕಥೆ ಹೇಳಲಾಗುತ್ತೆ.
ಫತಿಪುರ್ ಬೆರಿ ಎನ್ನುವ ಊರು. ಅದು ಪೈಲ್ವಾನರೆ ಇರುವ ನಾಡು ಇದು. ಈ ಊರಿನ ಗಂಡಸರೆಲ್ಲಾ ಪೈಲ್ವಾನರಾಗಿ ಇರುವಾಗ, ಬಬ್ಲಿಯಾಗಿರುವ ತಮನ್ನಾ ಕೂಡ ಗಂಡುಬೀರಿಯಂತೆ ಲೇಡಿ ಬೌನ್ಸರ್ ಆಗಿ ಕೆಲಸಕ್ಕೆ ಸೇರುವುದೇ ಸಿನಿಮಾದ ಕಥೆ. ಲೇಡಿ ಬೌನ್ಸರ್ ಆಗಿ ಅಭಿನಯಿಸಿರುವ ತಮನ್ನ ಕೆಲವರಿಗೆ ಗೂಸಾ ಕೊಟ್ಟಿದ್ದು ಕೂಡ ಸಿನಿಮಾದ ಅಟ್ರಾಕ್ಟಿವ್ ಭಾಗವಾಗಿದೆ. ಇನ್ನು ತಮ್ಮನ್ನ ಮೆಡಿಕಲ್ ಶಾಪ್ ನಲ್ಲಿ ಎರಡು ಪ್ಯಾಕೆಟ್ ಕಾಂ-ಡೋಮ್ ಕೇಳುವ ದೃಶ್ಯವೊಂದು ಹೈಲೈಟ್ ಆಗಿದೆ.
ಟ್ರೈಲರ್ ನಲ್ಲಿ ಒಂದು ಮೆಡಿಕಲ್ ಶಾಪಿಗೆ ಹೋಗಿ ನಟಿ ತಮನ್ನಾ ಕಾಂ-ಡೋಮ್ ಪ್ಯಾಕ್ ಕೇಳುತ್ತಾಳೆ. ಇನ್ನು ಅದರ ಬಗ್ಗೆ ಆಕೆಗೂ ಅಷ್ಟಾಗಿ ಗೊತ್ತಿಲ್ಲ ಅನ್ನೋದು ಶಾಪ್ ಕೀಪರ್ ಗೆ ಗೊತ್ತಾಗುತ್ತೆ. ಈ ತುಣುಕು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ಬಬ್ಲಿ ಬೌನ್ಸರ್ ಸಿನಿಮಾದಲ್ಲಿ ಅಭಿಷೇಕ್ ಬಜಾಜ್ ಸಹಿಲ್ ವೈದ್, ಸೌರಭ ಶುಕ್ಲ ಮೊದಲಾದವರು ತಮನ್ನಾ ಭಾಟಿಯಾ ಜೊತೆ ಅಭಿನಯಿಸಿದ್ದಾರೆ.
ಇನ್ನು ಈ ಸಿನಿಮಾವನ್ನು ಸ್ಟಾರ್ ಸ್ಟುಡಿಯೋಸ್ ಹಾಗೂ ಜಂಗ್ಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ ಓಟಿಟಿಯಲ್ಲಿ ತೆರೆ ಕಾಣಲು ಸಿದ್ಧವಾಗಿರುವ ಈ ಸಿನಿಮಾಕ್ಕೆ, ತನಿಷ್ ಭಾಕ್ಷಿ ಹಾಗೂ ಕರಣ್ ಮಲ್ಹೋತ್ರಾ ಅವರ ಸಂಗೀತ ಹೊಂದಿದ್ದು, ಚಿತ್ರದ ಛಾಯಾಗ್ರಹಣವನ್ನು ಹಿಮ್ಮಾ ದಮೀಜಾ ಮಾಡಿದ್ದಾರೆ. ಇನ್ನು ತಮ್ಮನ್ನ ನಟಿಸುತ್ತಿರುವ ಇತರ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕನ್ನಡದಲ್ಲಿ ಫೇಮಸ್ ಆಗಿದ್ದ ’ಲವ್ ಮಾಕ್ಟೇಲ್” ಸಿನಿಮಾದ ತೆಲುಗು ವರ್ಷನ್ ’ಗುರ್ತುಂದಾ ಸೀತಾಕಾಲಮ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನು ಬೋಳ ಶಂಕರ್ ಎನ್ನುವ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಬೋಲೇ ಚೂಡಿಯನ್ ಹಾಗೂ ಪ್ಲಾನ್ ಎ ಪ್ಲಾನ್ ಬಿ ಎನ್ನುವ ಹಿಂದಿ ಸಿನಿಮಾಗಳು ಕೂಡ ಬ್ಯುಸಿ ಆಗಿರುವ ತಮನ್ನಾ, ಬಬ್ಲಿ ಬೌನ್ಸರ್ ಸಿನಿಮಾದ ಮೂಲಕ ಮತ್ತೆ ಅವಕಾಶಗಳನ್ನ ಗಿಟ್ಟಿಸಿಕೊಳ್ಳುತ್ತಾರಾ ಕಾದು ನೋಡಬೇಕು.