PhotoGrid Site 1660623267065

ಮೂಡ್ ಬಂದ್ರೆ ಮಾತ್ರ ನಾನು ಸ್ನಾನ ಮಾಡ್ತೀನಿ ಎಂದ ಸೋನು ಗೌಡ! ಬೆಚ್ಚಿಬಿದ್ದ ಕಿಚ್ಚ ಸುದೀಪ್ ಕೊಟ್ಟ ಉತ್ತರ ಹೇಗಿತ್ತು ನೋಡಿ!!

ಸುದ್ದಿ

ಈ ಬಾರಿ ಬಿಗ್ ಬಾಸ್ ಕನ್ನಡ ಓ ಟಿ ಟಿ ವರ್ಷನ್ ಅದ್ದೂರಿಯಾಗಿ ಆರಂಭವಾಗಿದೆ. ಆದರೆ ಎಲ್ಲರೂ ಇದಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ಕೊಡುತ್ತಿಲ್ಲ. ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಅದರಲ್ಲೂ ಕೆಲವು ಸ್ಪರ್ಧಿಗಳನ್ನು ಸುತಾರಾಂ ಈ ಕಾರ್ಯಕ್ರಮಕ್ಕೆ ತೆಗೆದುಕೊಳ್ಳಲೇಬಾರದಿತ್ತು. ಅಂತ ಜನ ಬಾಯಿಗೆ ಬಂದ ಹಾಗೆ ಬಿಗ್ ಬಾಸ್ ತಂಡವನ್ನು ಉಗಿಯುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುವ 16 ಸ್ಪರ್ಧಿಗಳಲ್ಲಿ ಮುಖ ಪರಿಚಯ ಇರುವ ಸ್ಪರ್ಧಿಗಳು ಬೆರಳ ಎಣಿಕೆಯಷ್ಟು. ಅಲ್ಲದೆ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡವರೇ ಈ ಬಾರಿ ಹೆಚ್ಚಾಗಿ ಸ್ಪರ್ಧಿಗಳಾಗಿ ಸೆಲೆಕ್ಟ್ ಆಗಿದ್ದಾರೆ.

ಹೌದು, ಬಿಗ್ ಬಾಸ್ ಸ್ಪರ್ಧಿಗಳು ಈಗಾಗಲೇ ನಾನು ಯಾರು ಎನ್ನುವ ಟಾಸ್ಕ್ ಮೂಲಕ ತಮ್ಮ ಜೀವನದ ಕಥೆಯನ್ನು ಹೇಳಿಕೊಂಡಿದ್ದಾರೆ. ಇದರಿಂದ ಜನ ನೊಂದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಅರ್ಹತೆ ಇಲ್ಲದ, ಜೀವನದಲ್ಲಿ ತಪ್ಪನ್ನೇ ಮಾಡಿರುವ ಇಂತಹ ಅಭ್ಯರ್ಥಿಗಳನ್ನು ನೀವು ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಲೇಬಾರದಿತ್ತು ಅಂತ ಬಿಗ್ ಬಾಸ್ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸೌಂಡ್ ಮಾಡ್ತಾ ಇರೋದು ಸೋನು ಶ್ರೀನಿವಾಸ್ ಗೌಡ ಅವರ ಹೆಸರು.

ಈ ಹಿಂದೆ ಸೋನು ಶ್ರೀನಿವಾಸ ಗೌಡ ಅವರ ಬಗ್ಗೆ ಸಾಕಷ್ಟು ಟ್ರೋಲ್ ಗಳನ್ನು ನೀವು ನೋಡಿರಬಹುದು. ಯಾರು ಏನೇ ಅಂದ್ರು ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಬೇಕಾಬಿಟ್ಟಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಸೋನು ಬಗ್ಗೆ ಜನರಿಗೆ ಅಷ್ಟು ಉತ್ತಮ ಒಪೀನಿಯನ್ ಇಲ್ಲ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಎಲ್ಲರ ಜೊತೆ ಕಿರಿಕ್ ಮಾಡಿಕೊಳ್ಳಲು ಶುರು ಮಾಡಿದ್ದಾರೆ ಸೋನು.

ಇನ್ನು ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ಆಡುವ ಮಾತುಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ. ’ನಾನು ಮೂಡ್ ಆಫ್ ಆಗೋದೇ ಇಲ್ಲ ಯಾವಾಗಲೂ ಮೂಡನಲ್ಲಿಯೇ ಇರುತ್ತೇನೆ’ ಅಂತ ಸೋನು ಹೇಳಿರುವ ಮಾತು ಹೊರ ಪ್ರಪಂಚದಲ್ಲಿ ಇನ್ನೊಂದಿಷ್ಟು ಚರ್ಚೆಗೆ ಕಾರಣವಾಗಿದೆ. ಟ್ರಯಾಂಗಲ್ ಲವ್ ಸ್ಟೋರಿ ಒಂದು ಬಿಗ್ ಬಾಸ್ ಮನೆಯಲ್ಲಿ ಆರಂಭವಾಗಿದೆ. ಕಾರ್ಯಕ್ರಮ ಶುರುವಾಗಿ ಕೇವಲ ಒಂದು ವಾರದಲ್ಲಿ ಪ್ರೀತಿ ಪ್ರೇಮ ಅಂತ ಸ್ಪರ್ಧಿಗಳು ಹೆಸರು ಕೆಡಿಸಿಕೊಳ್ಳುತ್ತಿದ್ದಾರೆ.

ಸೋನು ಶ್ರೀನಿವಾಸ ಗೌಡ ಹಾಗೂ ಸ್ಪೂರ್ತಿಗೌಡ ಇಬ್ಬರು ರಾಕೇಶ್ ಅಡಿಗ ಅವರಿಗಾಗಿ ಫೈಟಿಂಗ್ ಮಾಡುತ್ತಿದ್ದಾರೆ. ಸ್ಪೂರ್ತಿ ಹಾಗೂ ರಾಕೇಶ್ ಇಬ್ಬರೂ ಮಾತನಾಡುತ್ತಿರುವಾಗ ನಕ್ಕಿದಕ್ಕೆ ನೀವು ನನ್ನ ಬಗ್ಗೆ ಮಾತನಾಡಿಕೊಂಡು ನಕ್ಕಿದ್ದೀರಾ ಅಂತ ಸೋನು ಗರಂ ಆಗಿದ್ದರು. ಆದರೆ ಸ್ಪೂರ್ತಿ ಗೌಡ ಕೂಡ ಇದಕ್ಕೇನು ಕಮ್ಮಿ ಇಲ್ಲ. ನಗವುದು ಬಿಡುವುದು ನಮ್ಮಿಷ್ಟ ಅಂತ ಸೋನು ಮೇಲೆ ವಾಯ್ಸ್ ರೈಸ್ ಮಾಡಿದ್ರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಾಕೇಶ್ ಅಡಿಗ ಇವರಿಬ್ಬರ ಜಗಳವನ್ನೇನು ತಪ್ಪಿಸಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರ ಬಳಿ ವೈಯಕ್ತಿಕವಾಗಿ ಮಾತನಾಡಿದ ರಾಕೇಶ್ ಅಡಿಗ ಬೆಳಬೆಳಗ್ಗೆ ಹೀಗೆ ಮೂಡ್ ಹಾಳು ಮಾಡಿಕೊಳ್ಳಬೇಡ ಅಂತ ಹೇಳುತ್ತಾರೆ. ನಾನು ಯಾವಾಗಲೂ ಮೂಡ್ನಲ್ಲಿಯೇ ಇರುತ್ತೇನೆ ಅಂತ ಸೋನು ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಸೋನು ಮೂಡ್ ಇಲ್ಲದೆ ಇದ್ರೆ ಮೂರು ದಿನ ಆದ್ರೂ ಸ್ನಾನ ಮಾಡುವುದಿಲ್ಲವಂತೆ! ಈ ಮಾತನ್ನು ಕೇಳಿ ಬಿಗ್ ಬಾಸ್ ಮನೆಯವರು ಶಾಕ್ ಆಗಿದ್ದಾರೆ!

Leave a Reply

Your email address will not be published. Required fields are marked *