ಇತ್ತೀಚಿನ ವರ್ಷಗಳಲ್ಲಿ ಮದುವೆ ಮತ್ತು ವಿಚ್ಛೇದನ ಎನ್ನುವುದು ಬಹಳ ಕಾಮನ್ ಎನ್ನುವ ಹಾಗೆ ಆಗಿದೆ. ದಿಢೀರ್ ನಿರ್ಧಾರ ಮಾಡಿ ಮದುವೆ ಆಗುತ್ತಾರೆ. ಅದೇ ರೀತಿ ಯಾರು ಊಹೆ ಮಾಡದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ವಿಚ್ಛೇದನ ಪಡೆಯುತ್ತಾರೆ. ಮದುವೆ ಮತ್ತು ವಿಚ್ಚೇದನ ಎನ್ನುವ ಪದಕ್ಕೆ ಅರ್ಥವೇ ಇಲ್ಲ ಎನ್ನುವ ಹಾಗೆ ಆಗಿದೆ. ಮದುವೆ ವಿಚಾರದಲ್ಲಿ ನಾವು ದಿನೇ ದಿನೇ ಅನೇಕ ಘಟನೆಗಳನ್ನು ಕೇಳುತ್ತೇವೆ.
ಹಿಂದಿನ ಕಾಲದಲ್ಲಿ ಮದುವೆಯನ್ನು ಸ್ವರ್ಗದಲ್ಲಿ ನಿಶ್ಚಯಿಸಿದ ಬಂಧ ಎಂದು ಹೇಳುತ್ತಿದ್ದರು. ಹುಡುಗ ಹುಡುಗಿ ತಂದೆ ತಾಯಿ ತೋರಿಸಿದವರನ್ನೇ ಮದುವೆ ಆಗುತ್ತಿದ್ದರು. ಒಮ್ಮೆ ಮದುವೆಯಾದರೆ ಜೀವನ ಪೂರ್ತಿ ಜೊತೆಯಾಗಿರುತ್ತಿದ್ದರು. ಕಷ್ಟ ಸುಖ ಏನೇ ಇದ್ದರೂ ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. ಆದರೆ ಈಗ ಕಾಲ ಆ ರೀತಿ ಇಲ್ಲ.
ಹೆತ್ತವರು ಹೇಳುವವರಿಗಿಂತ, ಹುಡುಗ ಹುಡುಗಿಯರು ತಾವು ಮೆಚ್ಚಿದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಲವು ಬಾರಿ ಆಯ್ಕೆ ತಪ್ಪಾಗಿರುತ್ತದೆ, ಆದರೂ ಸಹ ತಮ್ಮಿಷ್ಟವೆ ನಡೆಯಬೇಕು ಎಂದು ಮದುವೆ ಆಗುತ್ತಾರೆ. ಹೊಂದಾಣಿಕೆ ಇಲ್ಲದ ಆ ಮದುವೆಗಳು ಬಹಳ ಬೇಗ ಮುರಿದು ಬೀಳುತ್ತವೆ. ಹಲವು ಬಾರಿ, ಮದುವೆಯಾದ ಮರುದಿನವೇ ವಿಚ್ಛೇದನಕ್ಕೆ ಹೋಗುತ್ತಾರೆ, ಕೆಲವರು ಮದುವೆಯಾಗಿ ಮಕ್ಕಳಾಗಿ ಹಲವು ವರ್ಷಗಳ ಕಾಲ ಸಂಸಾರ ನಡೆಸಿ, ವಿಚ್ಛೇದನ ಪಡೆಯುತ್ತಾರೆ.
ಇವರು ವಿಚ್ಛೇದನಕ್ಕೆ ಕೊಡುವ ಕಾರಣಗಳು ಸಹ ಕೆಲವೊಮ್ಮೆ ಸಿಲ್ಲಿ ಆಗಿರುತ್ತದೆ. ಇಂಥದ್ದೇ ಒಂದು ಘಟನೆ ತಿಳಿಸುತ್ತೇವೆ. ಇಂದು ನಾವು ತಿಳಿಸಲಿರುವ ದಂಪತಿಗಳು ಮದುವೆಯಾಗಿ ಚೆನ್ನಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಗಂಡನು ಹೆಂಡತಿಗೆ ವಿಚ್ಛೇದನ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ಅದಕ್ಕೆ ಕಾರಣ ಕೇಳಿ ಕುಟುಂಬದವರು ಹಾಗೂ ಎಲ್ಲರೂ ಶಾಕ್ ಆಗಿದ್ದಂತೂ ನಿಜ.
ಈತ ತನ್ನ ಪತ್ನಿಗೆ ವಿಚ್ಛೇದನ ಕೊಡಲು ಕೊಟ್ಟ ಕಾರಣ ಏನು ಅಂದ್ರೆ, ಆಕೆ ಪ್ರತಿದಿನ ಸ್ನಾನ ಮಾಡುತ್ತಿರಲಿಲ್ಲ. ಹೆಂಡತಿ ಈ ರೀತಿ ಸ್ನಾನ ಮಾಡದೆ ಇದ್ದ ಕಾರಣ, ಗಂಡ ಆಕೆಗೆ ವಿಚ್ಛೇದನ ನೀಡಲು ಪಟ್ಟು ಹಿಡಿದಿದ್ದಾನೆ. ಯಾರು ಎಷ್ಟೇ ಹೇಳಿದರು ಸಹ ಆತ ಕೇಳುತ್ತಿಲ್ಲ, ಕುಟುಂಬದವರು, ಲಾಯರ್, ಪೊ’ಲೀಸರು ಎಲ್ಲರೂ ಆತನನ್ನು ಸಮಾಧಾನ ಪಡಿಸಿ ಹೆಂಡತಿಯ ಜೊತೆಗೆ ಇರಲು ಒಪ್ಪಿಸುವ ಪ್ರಯತ್ನ ಮಾಡಿದ್ದು.
ಯಾರು ಏನೇ ಹೇಳಿದರೂ ಒಪ್ಪದ ಗಂಡ, ತಾನು ಹೆಂಡತಿಗೆ ವಿ’ಚ್ಛೇದನ ಕೊಡಲೇಬೇಕು ಎಂದು ಹಠ ಮಾಡುತ್ತಿದ್ದಾನೆ. ಆತನ ಪತ್ನಿ ಸಹ ಗೋಗರೆದು, ಕಣ್ಣೀರು ಹಾಕಿ ಮನವಿ ಮಾಡಿದರು ಸಹ, ಆತ ತನ್ನ ನಿರ್ಧಾರವನ್ನು ಬದಲಾಯಿಸುತ್ತಿಲ್ಲ. ಇಂತಹ ಒಂದು ಕಾರಣಕ್ಕೂ ವಿಚ್ಛೇ’ದನ ಕೊಡುತ್ತಾರಾ ಎಂದು ಜನರು ಶಾಕ್ ಆಗಿರುವುದಂತೂ ಖಂಡಿತ.