ಮಾಂಸಹಾರಿಗಳಿಗೆ ಸೀ ಫುಡ್ ಅಂದ್ರೆ ತುಂಬಾನೇ ಇಷ್ಟ ಮೀನನ್ನು ಇಷ್ಟಪಡುವ ಸಾಕಷ್ಟು ಜನರಿದ್ದಾರೆ. ಮೀನಿನಿಂದ ತಯಾರಿಸಬಹುದಾದ ಹಲವಾರು ರೀತಿಯ ಡಿಶ್ ಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ ಕರಾವಳಿ ಭಾಗದಲ್ಲಿ ಮೀನು ಮುಖ್ಯ ಫುಡ್. ಮೀನಿನಲ್ಲಿ ಸಾಕಷ್ಟು ವೆರೈಟಿ ಇದೆ. ಹಾಗಾಗಿ ಮಾಂಸಹಾರ ಪ್ರಿಯರಿಗೆ ಮೀನು ಅಚ್ಚುಮೆಚ್ಚಿನ ಆಹಾರಗಳಲ್ಲಿ ಒಂದು. ನೀವು ಇತರ ಮಾಂಸಹಾರಗಳನ್ನು ತಿನ್ನುವುದಕ್ಕಿಂತ ಮೀನನ್ನು ತಿಂದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಮೀನಿನಲ್ಲಿ ಕಡಿಮೆ ಕೊಬ್ಬಿನ ಅಂಶ ಇರುತ್ತೆ ಒಮೇಗಾ 3, ವಿಟಮಿನ್ ಡಿ, ಹೆಚ್ ಮೊದಲಾದ ಪೋಷಕಾಂಶಗಳು ಹೇರಳವಾಗಿರುತ್ತದೆ. ಮೀನನ್ನು ಆಹಾರವಾಗಿ ಮಾತ್ರವಲ್ಲದೆ ಔಷಧಿಗಳಲ್ಲಿಯೂ ಕೂಡ ಬಳಕೆ ಮಾಡಲಾಗುತ್ತದೆ. ಮೀನನ್ನು ಇಷ್ಟಪಟ್ಟು ತಿನ್ನುವವರಿಗೆ ಒಂದು ಸಮಸ್ಯೆ ಆಗಾಗ ಕಾಡಬಹುದು. ಅದೇ ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಮಸ್ಯೆ. ಎಲ್ಲಾ ಮೀನುಗಳಲ್ಲೂ ಗಂಟಲಿಗೆ ಸಿಕ್ಕಿಹಾಕಿಕೊಳ್ಳುವಂತಹ ಮುಳ್ಳು ಇರುವುದಿಲ್ಲ ಆದರೆ ಕೆಲವು ಮೀನುಗಳಲ್ಲಿ ಮುಳ್ಳು ಇರುತ್ತದೆ.
ಮೀನನ್ನು ತೊಳೆದು ಸ್ವಚ್ಛಗೊಳಿಸಿ ಆಹಾರ ತಯಾರಿಸಲಾಗುತ್ತದೆ ಆದರೂ ಕೆಲವೊಮ್ಮೆ ಮೀನಿನಲ್ಲಿ ಇರುವ ಮುಳ್ಳು ಆಹಾರ ಸೇವಿಸಿದ ತಕ್ಷಣ ಗಂಟಲಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಇದಕ್ಕಾಗಿ ಚಿಂತೆ ಮಾಡುವ ಅಗತ್ಯ ಇಲ್ಲ ಕೂಡಲೇ ಇದಕ್ಕೆ ಈ ಕೆಳಗಿನ ಕೆಲವು ವಿಧಾನದ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಹಾಕಿಕೊಂಡರೆ ಏನು ಮಾಡಬೇಕು ನೋಡೋಣ ಬನ್ನಿ.
ಮೊದಲನೆಯದಾಗಿ ಮೀನಿನಲ್ಲಿ ಇರುವಂತಹ ಮೂಳು ಗಂಟಲಲ್ಲಿ ಅದರಲ್ಲೂ ಕಿರು ನಾಲಿಗೆಯ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಜೋರಾಗಿ ಉಸಿರನ್ನು ಎಳೆದುಕೊಂಡು ಗಂಟಲನ್ನು ಬಿಗಿಯಾಗಿ ಹಿಡಿದುಕೊಳ್ಳಿ ನಂತರ ಜೊತೆಯಲ್ಲಿ ಇದ್ದವರಿಗೆ ನಿಮ್ಮನ್ನ ಹಿಂದುಗಡೆಯಿಂದ ಗಟ್ಟಿಯಾಗಿ ಅಪ್ಪಿಕೊಳ್ಳುವುದಕ್ಕೆ ಹೇಳಿ ನೀವು ಎಷ್ಟು ಸ್ಪೀಡ್ ಆಗಿ ಉಸಿರನ್ನು ಹೊರಕ್ಕೆ ಬಿಡುತ್ತೀರೋ ಅಷ್ಟೇ ಸ್ಪೀಡ್ ಆಗಿ ಮೀನಿನ ಮುಳ್ಳು ಹೊರಗಡೆ ಬರುತ್ತದೆ.
ಇನ್ನೊಂದು ಮಾರ್ಗವೆಂದರೆ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡರೆ ನೀವು ಬೆನ್ನನ್ನು ಭಾಗಿಸಿ ಬಾಯನ್ನು ತೆರೆಯಿರಿ ನಂತರ ನಿಮ್ಮ ಜೊತೆಯಲ್ಲಿ ಇರುವವರಿಗೆ ಬೊಗಸೆ ಕೈಯಿಂದ ಬೆನ್ನಿನ ಮೇಲೆ ಹೊಡೆಯಲು ಹೇಳಿ ಆಗ ಕೆಮ್ಮು ಬರುವ ಸಾಧ್ಯತೆ ಇದೆ ಕೆಮ್ಮು ಬಂದಾಗ ಶ್ವಾಸನಾಳದ ಮೇಲ್ಭಾಗದಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡಿದ್ದರೆ ತಕ್ಷಣ ಆಚೆಗೆ ಬರುತ್ತದೆ.
ಇನ್ನು ಮೀನಿನ ಮುಳ್ಳು ಹೊಟ್ಟೆಗೆ ಸೇರಿಕೊಂಡಿದ್ದರೆ ಅಂದರೆ ಕರುಳಿನ ಭಾಗದಲ್ಲಿ ಸಿಲುಕಿಕೊಂಡಿದ್ದರೆ ಆ ದಿನವಿಡಿ ಉಪವಾಸ ಇದ್ದರೆ ಒಳ್ಳೆಯದು ನೀರನ್ನು ಮಾತ್ರ ಹೆಚ್ಚಾಗಿ ಸೇವಿಸಿ. ಹೀಗೆ ಮಾಡಿದರೆ ಕರುಳಿನಲ್ಲಿ ಸೇರಿಕೊಂಡ ಮೀನು ಸ್ವಾಭಾವಿಕವಾಗಿ ಮಲ ವಿಸರ್ಜನೆಯ ಸಮಯದಲ್ಲಿ ಆಚೆ ಬರುತ್ತದೆ ಇಲ್ಲವಾದರೆ ಅದು ಅಲ್ಲಿಗೆ ಕರಗಿ ಹೋಗುತ್ತದೆ. ಇನ್ನು ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿಕೊಂಡಿದ್ದರೆ ಮತ್ತೊಂದು ಮಾರ್ಗದ ಮೂಲಕ ಅದನ್ನು ಹೊರ ತೆಗೆಯಬಹುದು.
ಗಂಟಲಲ್ಲಿ ಮೀನಿನ ಮುಳ್ಳು ಚುಚ್ಚಿಕೊಂಡ ಅನುಭವ ಆದರೆ ಬಾಳೆಹಣ್ಣನ್ನ ಎರಡು-ಮೂರು ತುಂಡುಗಳನ್ನಾಗಿ ಮಾಡಿ ಅದನ್ನು ಬಾಯಿಗೆ ಹಾಕಿಕೊಂಡು ನುಂಗಿ. ಬಾಳೆಹಣ್ಣನ್ನು ಜಗೆಯದೆ ನೇರವಾಗಿ ನುಂಗಬೇಕು ಆಗ ಮೀನಿನ ಮುಳ್ಳು ಬಾಳೆಹಣ್ಣಿಗೆ ಚುಚ್ಚಿಕೊಂಡು ಹೊಟ್ಟೆಯ ಒಳಗೆ ಇಳಿಯುತ್ತದೆ ನಂತರ ಸ್ವಾಭಾವಿಕವಾಗಿ ಆಚೆ ಬರುತ್ತದೆ.
ಅಷ್ಟೇ ಅಲ್ಲದೆ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡಾಗ ನೆಲಗಡಲೆ ಬೀಜಗಳನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗೆದು ನುಂಗಬೇಕು ಅಥವಾ ಅನ್ನವನ್ನು ಜಗಿಯದೆ ಚಿಕ್ಕ ಉಂಡೆಯನ್ನಾಗಿ ಮಾಡಿಕೊಂಡು ನೇರವಾಗಿ ನುಂಗಿ ನಂತರ ಒಂದು ಲೋಟ ನೀರನ್ನ ಕುಡಿಯಿರಿ ಇತರ ಮಾಡಿದರು ಕೂಡ ಗಂಟಲಿನಿಂದ ಮೀನಿನ ಮುಳ್ಳು ಹೊಟ್ಟೆಯನ್ನ ಸೇರಿಕೊಳ್ಳುತ್ತದೆ. ಅಷ್ಟೇ ಅಲ್ಲ ಸ್ನೇಹಿತರೆ ಬ್ರೌನ್ ಬ್ರೆಡ್ ಗೆ ಪೀನಟ್ ಬಟರ್ ಅನ್ನ ಸವರಿಕೊಂಡು ಚೆನ್ನಾಗಿ ಜಗಿದು ನುಂಗಬೇಕು ನಂತರ ಒಂದು ಲೋಟ ನೀರನ್ನು ಕುಡಿಯಬೇಕು ಅದು ಅಲ್ಲಿಯೇ ಕರಗಿ ಹೋಗುತ್ತದೆ ಆದ್ದರಿಂದ ಯಾವುದೇ ಅಪಾಯವು ಇಲ್ಲ.