ಮಾಂಸಾಹಾರಿಗಳಿಗೆ ಅತ್ಯಂತ ಇಷ್ಟವಾಗಿರೋದು ಅಂದ್ರೆ ಮೀನು. ಮಾಂಸಾಹಾರವನ್ನು ಸೇವಿಸುವವರು ಸೀ ಫುಡ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ನೀವು ಕರಾವಳಿ ಭಾಗಕ್ಕೆ ಹೋದರೆ ಅಲ್ಲಿ ಹೆಚ್ಚಾಗಿ ಸಿಗುವುದೇ ಮೀನುಗಳು. ಅಲ್ಲದೆ ತರಾವರಿ ಮೀನುಗಳನ್ನು ಇಲ್ಲಿ ಟೆಸ್ಟ್ ಮಾಡಬಹುದು. ನೀವು ಇತರ ಯಾವುದೇ ಮಾಂಸಹಾರಗಳಿಗೆ ಹೋಲಿಸಿದರೆ ಮೀನು ಅತ್ಯಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ.
ಮೀನಿನಲ್ಲಿ ಇತರ ಮಾಂಸಹಾರಿಗಳಿಗಿಂತ ಕಡಿಮೆ ಕೊಬ್ಬಿನ ಅಂಶವಿದೆ ಇದರಲ್ಲಿ ಇರುವ ಒಮೆಗಾ 3, ವಿಟಮಿನ್ ಡಿ, ಎಚ್ ಮೊದಲದ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾಗಿ ಮೀನನ್ನ ಆಹಾರದಲ್ಲಿ ಸೇರಿಸಿ ಸವಿಯುವುದು ನಿಜಕ್ಕೂ ಆರೋಗ್ಯದ ವಿಷಯದಲ್ಲಿ ತುಂಬಾನೇ ಒಳ್ಳೆಯದು. ಆದರೆ ಸಾಕಷ್ಟು ಜನರಿಗೆ ಮೀನನ್ನು ತಿನ್ನುವಾಗ ಅದರಲ್ಲಿರುವ ಮುಳ್ಳು ಗಂಟಲಿಗೆ ಸಿಕ್ಕಿಕೊಂಡರೆ ಎನ್ನುವ ಭಯವಿರುತ್ತದೆ.
ಕೆಲವರಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಹಾಗಾಗಿ ಮಕ್ಕಳಿಗಂತೂ ಮೀನಿನ ಆಹಾರವನ್ನು ಕೊಡುವಾಗ ಬಹಳ ಜಾಗರೂಕತೆಯನ್ನು ವಹಿಸಬೇಕು. ಇನ್ನು ಪ್ರತಿ ಬಾರಿಯೂ ಮೀನನ್ನ ತಿನ್ನುವಾಗ ಗಂಟಲಿಗೆ ಮೀನಿನ ಮುಳ್ಳು ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಅಪರೂಪಕ್ಕೆ ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಅಥವಾ ಹೊಟ್ಟೆಗೆ ಸೇರಬಹುದು.
ಆದರೆ ಇದರಿಂದ ಹೆಚ್ಚಿನ ಅಪಾಯವೇನೂ ಇಲ್ಲ. ಅದಕ್ಕಾಗಿ ನೀವು ಏನು ಮಾಡಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತಿವೆ. ಮೊದಲನೆಯದಾಗಿ ಕಿರುನಾಲಿಗೆಯ ಅಡಿಯಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡ್ರೆ ಜೋರಾಗಿ ಉಸಿರನ್ನು ಎಳೆದುಕೊಂಡು ಗಂಟಲ ಬಳಿ ಕಟ್ಟಿಹಿಡಿಯಿರಿ ನಂತರ ಜೊತೆಯಲ್ಲಿ ಇರುವವರಿಗೆ ಹಿಂದುಗಡೆಯಿಂದ ನಿಮ್ಮನ್ನ ಗಟ್ಟಿಯಾಗಿ ಅಪ್ಪಿಕೊಳ್ಳುವುದಕ್ಕೆ ಹೇಳಿ ಆಗ ಜೋರಾಗಿ ಉಸಿರನ್ನು ಹೊರಕ್ಕೆ ಬಿಡಿ.
ಈ ಸಮಯದಲ್ಲಿ ಮೀನಿನ ಮುಳ್ಳು ಆಚೆ ಬರುತ್ತದೆ. ಮುಂದಿನ ಮಾರ್ಗವೆಂದರೆ ನೀವು ಬಗ್ಗಿ ಬಾಯಿಯನ್ನ ತೆರೆದುಕೊಳ್ಳಿ. ನಂತರ ನಿಮ್ಮ ಜೊತೆಗೆ ಇರುವವರ ಬಳಿ ಬೆನ್ನಿನಲ್ಲಿ ಬೊಗಸೆ ಕೈಯಿಂದ ಹೊಡೆಯಲು ಹೇಳಿ ಆಗ ಕೆಮ್ಮು ಬರುವ ರೀತಿಯಲ್ಲಿ ಶ್ವಾಸನಾಳದ ಮೇಲ್ಭಾಗದಲ್ಲಿ ಚುಚ್ಚಿಕೊಂಡಿರುವ ಮೀನಿನ ಮುಳ್ಳು ಆಚೆ ಬರುತ್ತದೆ. ಇನ್ನು ಕರುಳಿನ ಭಾಗದಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡ್ರೆ ಆಗ ಆ ದಿನವಿಡೀ ಉಪವಾಸ ಇರುವುದು ಒಳ್ಳೆಯದು.
ಆದರೆ ನೀರನ್ನು ಅತಿ ಹೆಚ್ಚು ಕುಡಿಯಬೇಕು ಹೀಗಾದಾಗ ಕರುಳಿನಲ್ಲಿ ಸೇರಿಕೊಂಡ ಮೀನು ಸ್ವಾಭಾವಿಕವಾಗಿ ಆಚೆ ಹೋಗುತ್ತದೆ. ಇನ್ನು ಗಂಟಲಿನಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡಾಗ ಬಾಳೆಹಣ್ಣನ್ನು ಎರಡು ಅಥವಾ ಮೂರು ತುಂಡುಗಳನ್ನಾಗಿ ಮಾಡಿ ಅದನ್ನು ಜೊತೆಗೆ ಬಾಳೆಹಣ್ಣಿಗೆ ಮೀನಿನ ಮುಳ್ಳು ಚುಚ್ಚಿಕೊಂಡು ಹೊಟ್ಟೆ ಸೇರುತ್ತದೆ ಹಾಗೂ ಸ್ವಾಭಾವಿಕವಾಗಿಯೇ ಆಚೆ ಬರುತ್ತದೆ.
ಇನ್ನು ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡಾಗ ಅದನ್ನ ಹೊರ ತೆಗೆಯಲು ಮತ್ತೊಂದು ಮಾರ್ಗವೆಂದರೆ, ಎರಡು ಚಮಚ ಶೇಂಗಾ ಬೀಜವನ್ನು ಚೆನ್ನಾಗಿ ಅಗೆದು ನುಂಗಿ ಅಥವಾ ಅನ್ನವನ್ನು ಜಗಿಯದೆ ಹಾಗೆಯೇ ನುಂಗಿ. ನಂತರ ಒಂದು ಲೋಟ ನೀರು ಕುಡಿಯಬೇಕು. ಆಗ ಗಂಟಲಿನಿಂದ ಮೀನಿನ ಮುಳ್ಳು ಹೊಟ್ಟೆ ಸೇರುತ್ತದೆ. ಇನ್ನು ಬ್ರೌನ್ ಬ್ರೆಡ್ ಗೆ ಪೀನಟ್ ಬಟರನ್ನು ಸವರಿ ಚೆನ್ನಾಗಿ ಜಗೆದು ನುಂಗಬೇಕು ನಂತರ ಒಂದು ಲೋಟ ನೀರನ್ನು ಕುಡಿಯಬೇಕು ಹೀಗೆ ಮಾಡುವುದರಿಂದಲು ಕೂಡ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮೀನಿನ ಮುಳ್ಳು ಹೊಟ್ಟೆಗೆ ಸೇರಿ ನಂತರ ಸ್ವಾಭಾವಿಕವಾಗಿ ಆಚೆ ಬರುತ್ತದೆ.