ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಕಾಂಬಿನೇಶನ್ ನಲ್ಲಿ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ. ಟ್ರೈಲರ್ ಬಗ್ಗೆಯೇ ಟಿಸರ್ ಬಿಡುಗಡೆ ಮಾಡಿದ್ದು ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಇನ್ನು ಟ್ರೈಲರ್ ನ್ನ ನೋಡಿದವರು ಸಿನಿಮಾ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದಾರೆ. ಮಾನ್ಸೂನ್ ರಾಗ ಚಿತ್ರದ ಹೆಸರೇ ಬಹಳ ಮೇಲೋಡಿಯಾಗಿದ್ದು, ಧನಂಜಯ ಹಾಗೂ ರಚಿತಾ ರಾಮ್ ಅವರ ಜೋಡಿಯನ್ನು ತೆರೆಯ ಮೇಲೆ ನೋಡಲು ಸಿನಿಪ್ರಿಯರ ಕಾತುರರಾಗಿದ್ದಾರೆ.
ಮಾನ್ಸೂನ್ ರಾಗ ಸಿನಿಮಾ ಇದೇ ತಿಂಗಳು ಅಂದ್ರೆ ಆಗಸ್ಟ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮಾನ್ಸೂನ್ ರಾಗ ಹೆಸರೇ ಸೂಚಿಸುವಂತೆ ಒಂದು ಮ್ಯೂಸಿಕಲ್ ಮೂವಿ. ಮೊಟ್ಟ ಮೊದಲ ಬಾರಿಗೆ ರಚಿತಾ ರಾಮ್ ಹಾಗೂ ಧನಂಜಯ್ ಒಟ್ಟಾಗಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ರಚ್ಚು ಅಭಿಮಾನಿಗಳಿಗೂ ಇದು ಸಂತೋಷದ ಸುದ್ದಿ. ಇನ್ನು ಮಾನ್ಸೂನ್ ರಾಗ ಸಿನಿಮಾದ ಬಗ್ಗೆ ರಚಿತಾ ರಾಮ್ ಮಾಧ್ಯಮದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಜೊತೆ ಮೊದಲ ಬಾರಿಗೆ ರಚಿತಾ ರಾಮ್ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ರಚಿತಾ ರಾಮ್. ಧನಂಜಯ್ ನಿಜಕ್ಕೂ ನಟ ರಾಕ್ಷಸನೆ. ಅವರೊಂದಿಗೆ ಅಭಿನಯಿಸುವುದು ನಿಜಕ್ಕೂ ನನಗೂ ಒಂದು ಚಾಲೆಂಜ್ ಆಗಿತ್ತು. ಈ ಸಿನಿಮಾದಲ್ಲಿ ನನ್ನದು ವಿಶೇಷ ಪಾತ್ರ. ಆ ಪಾತ್ರಕ್ಕೆ ಸಾಕಷ್ಟು ಮಹತ್ವವಿದೆ. ಚಿತ್ರದ ಸಂಭಾಷಣೆಯ ಅಷ್ಟೇ ಚೆನ್ನಾಗಿದ್ದು. ಸಿನಿಮಾ ಅತ್ಯಂತ ಚೆನ್ನಾಗಿ ಮೂಡಿಬಂದಿದೆ ಎಂದು ಗುಳಿ ಕೆನ್ನೆಯ ಚೆಲುವೆ ಹೇಳಿದ್ದಾರೆ.
ಇನ್ನು ಪುಷ್ಪಕ ವಿಮಾನ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಮಾನ್ಸೂನ್ ರಾಗ ಸಿನಿಮಾವನ್ನು ಅದೇ ತಂಡ ನಿರ್ಮಾಣ ಮಾಡಿದ್ದು, ಅವರ ಕೆಲಸ ಹೇಗಿದೆ ಎನ್ನುವುದು ನನಗೆ ಗೊತ್ತು. ಹಾಗಾಗಿ ಈ ಚಿತ್ರ ಬಹಳ ಚೆನ್ನಾಗಿದೆ ಎಂದೂ ಕೂಡ ರಚ್ಚೂ ತಿಳಿಸಿದ್ದಾರೆ. ಅಲ್ಲದೆ ಮಾನ್ಸೂನ್ ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಇದೀಗ ಮಾನ್ಸೂನ್ ನಲ್ಲಿಯೇ ಚಿತ್ರ ತೆರೆಕಾಣಲು ಸಿದ್ಧವಾಗಿದೆ.
ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ ಎಂದು ರಚಿತಾ ರಾಮ್ ಮಾನ್ಸೂನ್ ರಾಗ ಸಿನಿಮಾದ ಅನುಭವವನ್ನ ಹಂಚಿಕೊಂಡಿದ್ದಾರೆ. ಇನ್ನು ಮಾನ್ಸೂನ್ ರಾಗ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಆಧರಿಸಿದೆ. ಈ ಸಿನಿಮಾಕ್ಕೆ ವೀರೆಂದ್ರನಾಥ್ ಅವರ ನಿರ್ದೇಶನವಿದೆ. ಎ.ಆರ್. ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ಗುರು ಕಶ್ಯಪ್ ಅವರ ಅದ್ಭುತ ಸಂಭಾಷಣೆ ಚಿತ್ರದಲ್ಲಿದೆ. ಯಶಾ ಶಿವಕುಮಾರ್ ಪಾತ್ರ ಹೆಚ್ಚು ಕಾಡುತ್ತೆ.
ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಪಾತ್ರ ಇನ್ನಷ್ಟು ಜನರಿಗೆ ಹತ್ತಿರವಾಗುತ್ತೆ. ಅಲ್ಲದೆ ಅನೂಪ್ ಸೀಳಿನ್ ಮ್ಯೂಸಿಕ್ ಮಾನ್ಸೂನ್ ರಾಗವನ್ನು ಇನ್ನಷ್ಟು ರಂಗಾಗಿಸಲಿದೆ. ಈ ಎಲ್ಲದರ ನಡುವೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಂಭಾವನೆ ಏರಿಸಿಕೊಡಿದ್ದಾರೆ ಎನ್ನುವ ಸುದ್ದಿ ಗಾಂಧನಗರದಲ್ಲಿ ಹಬ್ಬಿದೆ. ನಟಿ ರಚಿತಾ ರಾಮ್ ಬಹುಬೇಡಿಕೆಯ ನಟಿ. ಈಗಾಗಲೇ ತೆಲುಗು ಚಿತ್ರರಂಗದಲ್ಲಿಯು ಕೂಡ ಅಭಿನಯಿಸಿದ್ದಾರೆ.
ಇನ್ನು ಸಿನಿಮಾಕ್ಕೆ 40-50 ಲಕ್ಷ ಸಂಭಾವನೆ ಪಡೆಯುತ್ತಿದ್ದ ರಚ್ಚು ಇದೀಗ ಏಕಾಏಕಿ ತಮ್ಮ ಸಂಭಾವನೆಯನ್ನು ಎರಿಸಿಕೊಂಡಿದ್ದಾರೆ. ಹೌದು ಈ ಸಿನಿಮಾಕ್ಕೆ 80ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಹುಬೇಡಿಕೆಯ ನಟಿಯಾಗಿರುವ ರಚಿತಾ ರಾಮ್ ಗೆ ಇಷ್ಟು ಸಂಭಾವನೆಯನ್ನು ನೀಡಲು ನಿರ್ಮಾಪಕರು ಹಿಂದೆಮುಂದೆ ಯೋಚನೆ ಮಾಡದೆ ಒಪ್ಪಿಕೊಳ್ಳುತ್ತಾರೆ ಕೂಡ.