ಹೆಣ್ಣು ಅಂದ್ರೆ ಮನೆಯ ಮಹಾಲಕ್ಷ್ಮಿ. ಆಕೆ ಹೇಗಿರುತ್ತಾಳೆ ಎನ್ನುವುದರ ಮೇಲೆ ಮನೆಯ ಸುಖ, ಶಾಂತಿ ಸಮೃದ್ಧಿ ಎಲ್ಲವೂ ನಿರ್ಧಾರಿತವಾಗುತ್ತದೆ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಮಾತಿದೆ ಮನೆಯಲ್ಲಿ ಶಾಂತ ಸ್ವರೂಪಿಯಾಗಿ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಾ, ಚೆನ್ನಾಗಿ ಸಂಸಾರ ನಡೆಸಿಕೊಂಡು ಇದ್ರೆ ಆಕೆ ಒಬ್ಬ ಉತ್ತಮ ಗೃಹಿಣಿ ಎನಿಸಿಕೊಳ್ಳುತ್ತಾಳೆ.
ಆದರೆ ಇವೆಲ್ಲವನ್ನ ಬಿಟ್ಟು ಸಿಟ್ಟಿನಿಂದ ವರ್ತಿಸಿದ್ರೆ ಆ ಮನೆಯ ನಾಶ ಖಂಡಿತ ಅದರಲ್ಲೂ ಹೆಣ್ಣು ಮಕ್ಕಳು ಮನೆಯಲ್ಲಿ ಹೇಗಿರಬೇಕು ಯಾವ ಸಮಯದಲ್ಲಿ ನಿದ್ದೆ ಮಾಡಬೇಕು ಯಾವ ಸಮಯಕ್ಕೆ ಎದ್ದೇಳಬೇಕು ಎಂಬ ಎಲ್ಲಾ ವಿಷಯದ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಯಮಾವಳಿಗಳನ್ನ ಹೇಳಲಾಗಿದೆ. ಅದೇ ರೀತಿ ಇದ್ರೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಸಂಪತ್ತು ತುಂಬಿ ತುಳುಕಾಡುತ್ತದೆ.
ಹೌದು ಮನೆಯ ಮಹಾಲಕ್ಷ್ಮಿಯಾಗಿರುವ ಹೆಣ್ಣು ಮುಸ್ಸಂಜೆಯ ಹೊತ್ತು ತಲೆ ಬಾಚುವುದು ಅಥವಾ ಕಾಲು ಚಾಚಿ ಮಲಗುವುದು ಆ ಮನೆಗೆ ಶ್ರೇಯಸ್ಕರವಲ್ಲ. ಮಹಿಳೆ ಹೆಚ್ಚು ಕೋಪವನ್ನು ಕೂಡ ಮಾಡಿಕೊಳ್ಳಬಾರದು. ಆಕೆಯ ಮುಂಗೋಪದಿಂದ ಮನೆಯ ಸರ್ವನಾಶ ಆಗಬಹುದು. ದಿನಮಿಡಿ ಕೆಲಸ ಮಾಡಿ ದಣಿದಿರುವ ಮಹಿಳೆಗೆ ಸರಿಯಾದ ಅವಶ್ಯಕತೆ ನಿದ್ರೆ ಬೇಕೇ ಬೇಕು.
ಆದರೆ ಆ ಹೆಣ್ಣು ಮಗಳು ಹೇಗೆ ಮಲಗುತ್ತಾಳೆ ಎನ್ನುವುದು ಕೂಡ ಗಂಡನ ಹೇಳಿಕೆಯನ್ನ ನಿರ್ಧರಿಸುತ್ತದೆ ಮೊದಲನೆಯದಾಗಿ ತಡರಾತ್ರಿ ಮಲಗುವ ಹೆಣ್ಣು ಮಕ್ಕಳು ಮನೆಗೆ ದರಿದ್ರ ತರುತ್ತಾರೆ ಎನ್ನಲಾಗುತ್ತದೆ. ಇದಕ್ಕೂ ಒಂದು ಕಾರಣವಿದೆ ಗ್ರಹಿಣಿ ತಡವಾಗಿ ಮಲಗಿ ಬೇಗ ಎದ್ದೇಳಲು ಸಾಧ್ಯವಿಲ್ಲ. ಏಳುವಾಗ ತಡವಾಗುತ್ತದೆ ಸೂರ್ಯೋದಯದ ನಂತರ ಎದ್ದೇಳುವುದು ಮನೆಗೆ ಒಳ್ಳೆಯದಲ್ಲ ಆರೋಗ್ಯಕ್ಕೂ ಹಾನಿ.
ಜೊತೆಗೆ ತಡವಾಗಿ ಇದ್ದಾಗ ಕೆಲಸ ಮಾಡುವ ಗಡಿಬಿಡಿ ಉಂಟಾಗುತ್ತದೆ. ಆಗ ಸಹಜವಾಗಿಯೇ ಕೋಪ ಬರುತ್ತದೆ ಗಂಡನಿಗೆ ಆ ದಿನದ ಸಮಯ ಒಳ್ಳೆಯದಾಗಲು ಸಾಧ್ಯವೇ ಇಲ್ಲ. ಇನ್ನು ಮಲಗುವಾಗ ಕೆಟ್ಟ ಯೋಚನೆಗಳನ್ನು ತಲೆಗೆ ತುಂಬಿಕೊಂಡು ಮಲಗಬಾರದು ಹಾಗೆ ಮಾಡಿದರೆ ರಾಹು ಕೇತು ನಮ್ಮನ್ನ ಸುತ್ತುತ್ತಲೇ ಇರುತ್ತಾರೆ. ಇದರಿಂದ ಮನೆಗೆ ದರಿದ್ರ ಒಕ್ಕರಿಸುತ್ತದೆ.
ಇನ್ನು ಮುಖ್ಯವಾಗಿ ಸೋಮವಾರ ಶನಿವಾರ ಹಾಗೂ ಗುರುವಾರ ಸೂರ್ಯೋದಯಕ್ಕೂ ಮುಂಚೆ ಎದ್ದು ಹೆಣ್ಣು ಮಕ್ಕಳು ದೇವರಿಗೆ ನಮಸ್ಕರಿಸಿದರೆ ಆ ಮನೆಯಲ್ಲಿ ಸಂಪತ್ತು ತುಂಬಿ ತುಳು ಕಾಡುತ್ತದೆ. ಹೆಣ್ಣು ಮಕ್ಕಳು ಬೇಗ ಎದ್ದು ಕಸ ಗುಡಿಸಿ, ರಂಗೋಲಿ ಹಾಕಿದರೆ ಮನೆಯ ಮುಂಭಾಗಲು ನೋಡುವುದಕ್ಕೆ ಎಷ್ಟು ಚಂದವೋ ಮನೆಯ ಒಳಗೆ ನೆಮ್ಮದಿಯೂ ಕೂಡ ಅಷ್ಟೇ ತುಂಬಿರುತ್ತದೆ.
ಹೆಂಗಸರು ಮಲಗುವಾಗ ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ತಲೆ ಹಾಕಿ, ಮಲಗಿದರೆ ಒಳ್ಳೆಯದು ಇದನ್ನು ಬಿಟ್ಟು ಬೇರೆ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಆ ದಿನ ಚೆನ್ನಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಗೆ ಒಳಿತನ್ನು ಮಾಡುವ ಗಂಡನ ಶ್ರೇಯಸ್ಸನ್ನು ಬಯಸುವ ಹೆಣ್ಣು ಮಕ್ಕಳು ಮನೆಯಲ್ಲಿ ತಾವು ಹೇಗೆ ಇದ್ದರೆ ಸರಿ ಎಂಬುದನ್ನು ಕೂಡ ಅರಿತಿರಬೇಕು ಸ್ನೇಹಿತರೆ ನಿಮಗೆ ಈ ಸುದ್ದಿ ಇಷ್ಟವಾಗಿದ್ದಲ್ಲಿ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.