ಹಿಂದೂ ಧರ್ಮದಲ್ಲಿ ಸಾಕಷ್ಟು ಆಚಾರ-ವಿಚಾರ ಪದ್ಧತಿಗಳಿವೆ. ಒಂದೊಂದು ಹೆಜ್ಜೆಗೂ ಶಾಸ್ತ್ರಗಳನ್ನು ಹೇಳುವಷ್ಟರ ಮಟ್ಟಿಗೆ ಸಮೃದ್ಧವಾಗಿದೆ ಹಿಂದೂ ಧರ್ಮ! ಆದರೆ ಪೂರ್ವಜರು ಮಾಡಿಟ್ಟ ಶಾಸ್ತ್ರ ಸಂಪ್ರದಾಯಿಕಗಳು ಯಾವುದು ಸುಮ್ಮನೆ ಅಲ್ಲ ಪ್ರತಿಯೊಂದು ಕಾರಣಗಳಿವೆ ಅಲ್ಲದೆ ಇಂತಹ ಸಂಪ್ರದಾಯಗಳನ್ನ ಆಚರಣೆ ಮಾಡಿದ್ದಲ್ಲಿ, ಜೀವನದಲ್ಲಿ ಯಶಸ್ಸನ ಕೂಡ ಸಾಧಿಸಬಹುದು.
ಇನ್ನು ಮದುವೆಯಾದ ಸ್ತ್ರೀ ಗಂಡನ ಮನೆಯಲ್ಲಿ ಹೇಗಿರಬೇಕು ಗಂಡನ ಜೊತೆ ಹಾಗೂ ಗಂಡನ ಮನೆಯವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಹಿಂದೂ ಧರ್ಮದಲ್ಲಿ ಸಾಕಷ್ಟು ಶಾಸ್ತ್ರಗಳಿವೆ. ಗಂಡನ ಆಯಸ್ಸು ಹೆಚ್ಚಾಗುವುದಕ್ಕೆ ಸಂಸಾರ ಸುಖವಾಗಿ ಸಾಧಿಸುವುದಕ್ಕೆ ಎಲ್ಲದಕ್ಕೂ ವ್ರತ ಆಚರಣೆಗಳನ್ನು ಕೂಡ ಹೇಳಲಾಗಿದೆ. ಇನ್ನು ಹಿಂದಿನಿಂದಲೂ ಮದುವೆಯಾದ ಸ್ತ್ರೀ ಗಂಡನ ಹೆಸರನ್ನು ಕರೆಯಬಾರದು, ಗಂಡನಿಗೆ ಏಕವಚನದಲ್ಲಿ ಮಾತನಾಡಿಸಬಾರದು ಎಂಬ ನಿಯಮಗಳಿವೆ.
ಆದರೆ ಇಂದು ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿಬಿಟ್ಟಿದ್ದಾರೆ ಈಗಿನ ಹೆಣ್ಣು ಮಕ್ಕಳು. ತಾವು ಹೇಗೆ ನಡೆದುಕೊಳ್ಳುತ್ತೇವೆ ಅದೇ ಸಂಪ್ರದಾಯ ಎನ್ನುವಂತಾಗಿದೆ. ಮದುವೆಯಾದ ಸ್ತ್ರೀ ಗಂಡನಿಗೆ ಏಕವಚನದಲ್ಲಿ ಮಾತನಾಡಿಸುವುದಾಗಲಿ ಅಥವಾ ಹೆಸರು ಹೇಳಿ ಕರೆಯುವುದಾಗಲಿ ಮಾಡುವಂತಿಲ್ಲ ನೀವು ರಾಜ್ಯದ ವಿವಿಧ ಕಡೆಗೆ ಇಂತಹ ಸಂಪ್ರದಾಯವನ್ನು ನೋಡಬಹುದು.
ಅದನ್ನು ಕರಾವಳಿಯ ಕಡೆಗೆ ಹೋದರೆ ಗಂಡನ ಹೆಸರನ್ನು ಯಾರು ಕರೆಯುವುದಿಲ್ಲ ಬದಲಾಗಿ ರೀ, ಏನು ಅಂದ್ರೆ, ಹೊಯ್, ಹೌದಾ, ಕೇಳಿಸ್ತ ಹೀಗೆ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ ಹೊರತು ಗಂಡನ ಹೆಸರಿಡಿದು ಕರೆಯುವುದಿಲ್ಲ. ಅಷ್ಟೇ ಅಲ್ಲ ಗಂಡನನ್ನ ಏಕವಚನದಲ್ಲಿಯೂ ಕೂಡ ಮಾತನಾಡಿಸುವುದಿಲ್ಲ ನೀವು ಬನ್ನಿ ಹೋಗಿ ಎಂದೆ ಮಾತನಾಡಿಸುವ ಪರಿಪಾಠವಿದೆ.
ಆದರೆ ಇತ್ತೀಚಿಗೆ ಇವೆಲ್ಲವೂ ಬದಲಾಗಿದೆ ಗಂಡನನ್ನು ಹೆಸರಿಡಿದು ಕರೆಯುವುದು ಮಾತ್ರವಲ್ಲದೆ ಬಾರೋ ಹೋಗೋ ಎಂದೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ಹೀಗೆ ಮಾತನಾಡಿಸುವುದು ಖಂಡಿತವಾಗಿಯೂ ತಪ್ಪು ಯಾಕಂದ್ರೆ ಎದುರಲ್ಲಿ ಪತಿಯನ್ನು ಈ ರೀತಿ ಕರೆದರೆ ಅವರಿಗೆ ಅವಮಾನ ಮಾಡಿದಂತೆ. ಗೌರವಯುತವಾಗಿ ಗಂಡನನ್ನ ನಮೂದಿಸುವುದು ಅತ್ಯಂತ ಮುಖ್ಯ. ಕೆಲವರು ಗಂಡನ ಹೆಸರನ್ನು ಕರೆಯುವುದು ಹಾಗಿರಲಿ ಅದೇ ಹೆಸರಿನ ಬೇರೆಯವರು ತಮ್ಮ ಸಂಬಂಧಿಗಳಾಗಿದ್ದರು ಕೂಡ ಅವರ ಹೆಸರನ್ನು ಕೂಡ ಕರೆಯುವುದಿಲ್ಲ.
ಆದರೆ ಕಾಲಮಾನವೇ ಬದಲಾಗಿದೆ. ಪತಿ ಅಂದರೆ ಸ್ನೇಹಿತ ಅಂತಲೇ ಭಾವಿಸುತ್ತಾರೆ. ಹಾಗಾಗಿ ಅವರನ್ನು ಸಮಾನವಾಗಿ ನೋಡುತ್ತಾರೆ. ಆದರೆ ಅದನ್ನ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಇಂದು ಹೆಣ್ಣು ಗಂಡು ಎನ್ನುವ ಭೇದವಿಲ್ಲ. ಇಬ್ಬರು ಸಮಾನರು. ಇಬ್ಬರು ಸಂಸಾರದ ಜವಾಬ್ದಾರಿಯನ್ನು ಸಮವಾಗಿ ಹೊರುತ್ತಾರೆ. ಹೆಣ್ಣು ಕೂಡ ಮನೆಯಿಂದ ಆಚೆ ಹೋಗಿ ಕೆಲಸ ಮಾಡುತ್ತಾಳೆ.
ಹಾಗಾಗಿ ಇಲ್ಲಿ ಯಾರು ಹೆಚ್ಚು ಕಮ್ಮಿ ಎನ್ನುವ ಹಾಗಿಲ್ಲ. ಆದರೆ ಗಂಡನಿಗೆ ಬಹುವಚನದಲ್ಲಿ ಗೌರವ ಕೊಡುವುದು, ಹೆಸರು ಹಿಡಿದು ಕರೆಯದೆ ಇರುವುದು ಇದು ಉತ್ತಮ ಸಂಪ್ರದಾಯ ಎಂದು ಭಾವಿಸಿದರೆ ಖಂಡಿತವಾಗಿಯೂ ಗಂಡ ಹೆಂಡತಿ ಉತ್ತಮ ಸಂಸಾರ ನಡೆಸುವುದಕ್ಕೆ ಮಾರ್ಗವೂ ಆಗುತ್ತದೆ.