ಹೆಣ್ಣನ್ನ ಲಕ್ಷ್ಮಿಯ ಸ್ವರೂಪ ಎಂದು ಕರೆಯಲಾಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಒಂದು ಮನೆಯನ್ನು ಬೆಳಗುವವಳು ಹೆಣ್ಣು. ಇನ್ನು ಹೆಣ್ಣು ಮಕ್ಕಳು ತಾವು ಹುಟ್ಟಿದ ಮನೆಗೂ ಹೋದ ಮನೆಗೆ ಕೀರ್ತಿ ತರುವಂತೆ ಇರಬೇಕು. ಮದುವೆಯಾದ ನಂತರ ಗಂಡನ ಮನೆಯಲ್ಲಿ ಎಲ್ಲಾ ಆಗು ಹೋಗುಗಳನ್ನು ನೋಡಿಕೊಳ್ಳುವುದು ಹೆಣ್ಣು, ಹಾಗಾಗಿ ಹೆಣ್ಣು ಮಕ್ಕಳು ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು.
ಒಂದು ಮನೆಯಲ್ಲಿ ಆ ಮನೆಯ ಗ್ರಹಿಣಿ ಖುಷಿಯಿಂದ ಲವಲವಿಕೆಯಿಂದ ಓಡಾಡಿಕೊಂಡು ಇದ್ದರೆ ಆ ಮನೆಯಲ್ಲಿ ಅಷ್ಟೈಶ್ವರ್ಯವೂ ಪ್ರಾಪ್ತಿಯಾಗುತ್ತದೆ. ಅದೇ ಹೆಣ್ಣು ತಪ್ಪು ದಾರಿ ಹಿಡಿದರೆ ಅಥವಾ ಇತರ ಕೆಟ್ಟ ಕೆಲಸಗಳನ್ನು ಮಾಡಲು ಹೊರಟರೆ ಅದರಿಂದ ಲಕ್ಷ್ಮೀದೇವಿ ಮುನಿಸಿಕೊಳ್ಳುತ್ತಾಳೆ. ಜೊತೆಗೆ ಆ ಮನೆಯ ಸ’ರ್ವನಾಶವಾಗುತ್ತದೆ.
ಹಾಗಾಗಿ ಮಹಿಳೆಯರೇ ನೀವು ಈ ಕೆಲವು ಕೆಲಸಗಳನ್ನು ರಾತ್ರಿ ಹೊತ್ತು ಮನೆಯಲ್ಲಿ ಮಾಡುತ್ತಿದ್ದರೆ ಖಂಡಿತವಾಗಿಯೂ ಅದನ್ನ ತಪ್ಪಿಸಿ ಇದು ನಿಮ್ಮ ಮನೆಗೆ ಶ್ರೇಯಸ್ಕರವಲ್ಲ. ಮೊದಲನೆಯದಾಗಿ ಮ-ದ್ಯಪಾನ ಮಹಿಳೆಯರು ಮಧ್ಯಪಾನ ಮಾಡುವುದೇ ತಪ್ಪು, ಅದರಲ್ಲೂ ರಾತ್ರಿ ವೇಳೆ ಮ-ದ್ಯಪಾನ ಮಾಡುವುದು ಒಳ್ಳೆಯದಲ್ಲ ಇದನ್ನ ರಾಕ್ಷಸ ಸ್ವರೂಪ ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣು ಮಗಳು ಮ-ದ್ಯಪಾನ ಸೇವನೆ ಮಾಡುವುದು ಒಳ್ಳೆಯದಲ್ಲ.
ಇನ್ನು ಎರಡನೆಯದಾಗಿ ಪರಪುರುಷರೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು ಹೌದು ಇತ್ತೀಚಿಗೆ ದಿನಗಳಲ್ಲಿ ಮದುವೆಯಾದ ನಂತರವೂ ಬೇರೆಯವರ ಜೊತೆಗೆ ಸ್ನೇಹ ಬೆಳೆಸುವುದು ಅಥವಾ ಅ-ನೈತಿಕ ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗಿದೆ ಈ ರೀತಿ ಮಾಡಿದರೆ ನಿಮ್ಮ ಮನೆಗೆ ಖಂಡಿತವಾಗಿಯೂ ತೊಂದರೆಯಾಗುತ್ತದೆ. ಇನ್ನು ಮನೆಯಲ್ಲಿ ಸ್ತ್ರೀ ಹೇಗಿರಬೇಕು ಎನ್ನುವುದನ್ನು ಚಾಣಕ್ಯ ತನ್ನ ನೀತಿ ಗ್ರಂಥದಲ್ಲಿಯೂ ಕೂಡ ಬರೆದಿದ್ದಾನೆ.
ಹೆಣ್ಣು ಮಕ್ಕಳು ಮೊದಲು ನಾಲ್ಕು ಗೋಡೆ ಮಧ್ಯದಲ್ಲಿ ಸುರಕ್ಷಿತವಾಗಿ ಇರುತ್ತಾರೆ ಎನ್ನುವ ಕಲ್ಪನೆ ಇತ್ತು. ಆದರೆ ಈಗ ಸ್ವಾವಲಂಬಿ ಮಹಿಳೆಯಾಗಿ ಹೊರಗಡೆ ಹೋಗಿ ಕೆಲಸ ಮಾಡುವ ಜವಾಬ್ದಾರಿಯು ಹೆಣ್ಣು ಮಕ್ಕಳ ಮೇಲಿದೆ. ಆದರೆ ಇದನ್ನು ಹೊರತುಪಡಿಸಿ ವಿನಾಕಾರಣ ಮನೆಯಿಂದ ಹೊರ ಹೋಗುವುದು ಸುಮ್ಮನೆ ಸುತ್ತಾಡುವುದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಆರ್ಥಿಕ ಪರಿಸ್ಥಿತಿ ಹದಗಿಡುತ್ತದೆ.
ಜೊತೆಗೆ ಇದು ಹೆಣ್ಣು ಮಕ್ಕಳಿಗೆ ಅಪಾಯವನ್ನು ಕೂಡ ಉಂಟು ಮಾಡಬಹುದು. ಇನ್ನು ಕೊನೆಯದಾಗಿ ಗಂಡನ ಮನೆಯನ್ನು ಬಿಟ್ಟು ಹೋಗುವ ನಿರ್ಧಾರ ಮಾಡುವುದು ತಪ್ಪು. ಹೌದು ಇಂದು ಸಣ್ಣಪುಟ್ಟ ವಿಚಾರಗಳಿಗೂ ವಿ-ಚ್ಛೇದನ ಎಂದು ಧ್ವನಿ ಎತ್ತುತ್ತಾರೆ ಹಿಂದೆಲ್ಲ ಎಷ್ಟೇ ಕಷ್ಟ ಇದ್ದರೂ ಅನುಸರಿಸಿಕೊಂಡು ಹೋಗುತ್ತಿದ್ದರು ಆದರೆ ಈಗ ಚಿಕ್ಕಪುಟ್ಟ ಕಾರಣಗಳಿಗೂ ಗಂಡ ಹೆಂಡತಿ ವಿ-ಚ್ಛೇದನದ ಮೊರೆ ಹೋಗುತ್ತಾರೆ.
ಇದು ಹೆಣ್ಣಿನ ತವರು ಮನೆಗೂ ಕೂಡ ಅಪವಾದವನ್ನು ತರುತ್ತದೆ. ಹಾಗಾಗಿ ನಿಮ್ಮ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಿಕೊಳ್ಳಲ್ಲು ಪ್ರಯತ್ನಿಸಿ. ಇಂತಹ ಉತ್ತಮ ಕೆಲಸಗಳನ್ನು ಮಹಿಳೆಯರು ಮಾಡಿದರೆ ಖಂಡಿತವಾಗಿಯೂ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.