ಈ ಸೃಷ್ಟಿಯಲ್ಲಿ ಯಾವುದಾದರೂ ಅರ್ಥವಾಗದ ವಿಷಯ ಇದೆ ಅಂದ್ರೆ ಅದು ಹೆಣ್ಣು ಹೌದು ಹೆಣ್ಣನ್ನ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಹಾಗಾಗಿ ಹೆಣ್ಣನ್ನ ಮಾಯೆ ಎಂದು ಕರೆಯಲಾಗುತ್ತೆ. ಹೆಣ್ಣು, ಹೊನ್ನು, ಮಣ್ಣು ಇದ್ಯಾವುದರ ಬಗ್ಗೆಯೂ ಯಾರಿಗೂ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೌದು ಹೆಣ್ಣನ್ನ ಚಂಚಲೆ ಎಂದು ಕರೆಯಲಾಗುತ್ತೆ ಆದರೆ ಆಕೆಯಲ್ಲಿ ಅಡಗಿರುವ ಅದೆಷ್ಟು ವಿಚಾರಗಳನ್ನು ಯಾರು ಸುಲಭವಾಗಿ ತಿಳಿದುಕೊಳ್ಳಲು ಕೂಡ ಸಾಧ್ಯವಿಲ್ಲ.
ನೀವು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರೋ ಅಷ್ಟು ಆಸೆ ನಿಮಗೆ ಹತ್ತಿರವಾಗುತ್ತಾ ಹೋಗುತ್ತಾಳೆ. ಉದಾಹರಣೆಗೆ ನಿಮ್ಮ ಮನೆಯಲ್ಲಿರುವ ಹೆಂಡತಿಯನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಆಕೆಯ ಕಷ್ಟ ಸುಖಗಳಲ್ಲಿ ಪಾಲುದಾರರಾಗಬಹುದು. ಇನ್ನು ಹೆಣ್ಣು ಮಕ್ಕಳು ಸುಲಭವಾಗಿ ಎಲ್ಲವನ್ನು ಹೇಳಿಕೊಳ್ಳುವುದಿಲ್ಲ ಕೆಲವು ಬಾರಿ ಕೈ ಸನ್ನೆ ಕಣ್ಣು ಸನ್ನೆಯಲ್ಲಿಯೇ ಹೇಳುವ ಪ್ರಯತ್ನ ಮಾಡುತ್ತಾರೆ.
ಹೆಣ್ಣು ಮಕ್ಕಳ ಯಾವ ಸನ್ನೆ ಯಾವ ಅರ್ಥವನ್ನು ಸೂಚಿಸುತ್ತದೆ ಎಂಬುದನ್ನು ನಾವು ಈ ಲೇಖನದಲ್ಲಿ ಹೇಳುತ್ತಿದ್ದೇವೆ ಮುಂದೆ ಓದಿ. ಮೊದಲನೆಯದಾಗಿ ಒಂದು ಹೆಣ್ಣು ಮೂಲೆಯಲ್ಲಿ ಹೋಗಿ ನಿಲ್ಲುತ್ತಾಳೆ ಮುದುಡಿದಂತೆ ಇರುತ್ತಾಳೆ ಅಂದರೆ ಆಕೆ ಶೋಷಣೆಗೆ ಒಳಗಾಗಿದ್ದಾಳೆ ಗಂಡ ಹೇಳಿದಂತೆ ಕೇಳುತ್ತಿದ್ದಾಳೆ ಆತನ ಹಂಗಿನಲ್ಲಿ ಇದ್ದಾಳೆ ಎಂದು ಅರ್ಥ.
ಇನ್ನು ಮುಂದಿನದು ಯಾವುದಾದರು ಹೆಣ್ಣು ಭುಜವನ್ನ ಒಗರಿ ಕಾಲು ಅಗಲಿಸಿ ಆರಾಮವಾಗಿ ಕುಳಿತುಕೊಳ್ಳುತ್ತಾಳೆ ಅಂದ್ರೆ ಅದರ ಅರ್ಥ ಆಕೆ ಸ್ವಾವಲಂಬಿಯಾಗಿ ಇದ್ದಾಳೆ ಯಾರಿಗೂ ಹೆದರುವುದಿಲ್ಲ ಎಂದು ತಿಳಿದುಕೊಳ್ಳಬಹುದು. ಹಾಗೆ ಒಂದು ಹೆಣ್ಣು ಯಾರತ್ತಾದರೂ ಜೊತೆಗೆ ಮಾತನಾಡುವಾಗ ತನ್ನ ಕೈ ಬಳೆಗಳ ಜೊತೆಗೆ ಒಡವೆಗಳ ಜೊತೆಗೆ ಅಥವಾ ಕೂದಲಿನ ಜೊತೆಗೆ ಸೀರೆ ಸೆರಗಿನ ಜೊತೆಗೆ ಕೈ ಆಡಿಸುತ್ತಿದ್ದಾಳೆ.
ಅಂದರೆ ಆಕೆ ವೈಯಾರ ಮಾಡುತ್ತಿದ್ದಾಳೆ ಎಂಬುದು ಹಲವರ ಅನಿಸಿಕೆ ಆದರೆ ಅದು ತಪ್ಪು, ಆಕೆ ಯಾವುದು ಒತ್ತಡಕ್ಕೆ ಒಳಗಕ್ಕಿದ್ದಾಳೆ ಎನ್ನುವುದು ಇದರ ಅರ್ಥ. ಅಂತಹ ಸಂದರ್ಭದಲ್ಲಿ ಅವರ ಜೊತೆಗಿರುವವರು ಅವರಿಗೆ ಕಂಫರ್ಟೆಬಲ್ ಫೀಲ್ ಆಗುವಂತೆ ಮಾಡಬೇಕು. ಇನ್ನು ನಾಲ್ಕನೆಯದಾಗಿ ಕೆಲವು ಹೆಣ್ಣು ಮಕ್ಕಳು ಚಿಕ್ಕ ಪುಟ್ಟ ವಿಚಾರಕ್ಕೂ ನಗುವುದನ್ನು ನೀವು ನೋಡಿರಬಹುದು ಅದರ ಅರ್ಥ ಅವರು ಅಷ್ಟು ಕಂಫರ್ಟೆಬಲ್ ಆಗಿ ಇಲ್ಲ ಸಣ್ಣ ಸಣ್ಣ ವಿಷಯಕ್ಕೂ ನರ್ವಸ್ ಆಗುತ್ತಾರೆ ಎಂದು ಅರ್ಥ.
ಹಾಗಾಗಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡಬೇಕು. ಇನ್ನೂ ಒಬ್ಬಳು ಹುಡುಗಿ ನೀವು ಹೇಳಿದ ಮಾತಿಗೆಲ್ಲ ತಲೆ ಆಡಿಸುತ್ತಿದ್ದಾಳೆ ನಿಮ್ಮ ಮುಂದಿನ ಮಾತಿಗೆ ಪ್ರೋತ್ಸಾಹಿಸುತ್ತಿದ್ದಾಳೆ ಎಂದು ಅರ್ಥವಾಗುತ್ತದೆ. ಸ್ಟ್ರೆಂತ್ ಇಲ್ಲದೆ ಇದ್ರೆ ಆಕೆ ನಾಚುತಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಬಹುದು ಇನ್ನು ಯಾವುದಾದರು ಹುಡುಗಿ ನೇರವಾಗಿ ಸೀಟ್ ನಲ್ಲಿ ಕುಳಿತಿದ್ದರೆ ಆಕೆ ಬಹಳ ಸ್ಟ್ರಾಂಗ್ ಆಗಿದ್ದಾಳೆ ಎಂದು ಅರ್ಥವಾಗುತ್ತದೆ.
ಇನ್ನು ಅತಿ ಮುಖ್ಯವಾದ ಒಂದು ಸನ್ನೆ ಅಂದ್ರೆ ಹೆಣ್ಣು ಮಕ್ಕಳು ತುಟಿ ಕಚ್ಚುವುದು ಹೀಗೆ ಹೆಣ್ಣು ಮಕ್ಕಳು ತುಟಿ ಕಚ್ಚಿದರೆ ಆಕೆಗೆ ಗಂಡಸಿನ ಮೇಲೆ ಆಸೆ ಅಂತನು ಅಥವಾ ಬೇರೆಯವರನ್ನ ಪ್ರೋವೊಕ್ ಮಾಡುತ್ತಿದ್ದಾರೆ ಅಂತನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇದು ಖಂಡಿತ ತಪ್ಪು. ಹೆಣ್ಣು ಮಕ್ಕಳು ತುಟಿ ಕಚ್ಚಿದರೆ ಉಗುರು ಕಚ್ಚಿಕೊಳ್ಳುತ್ತಿದ್ದರೆ ಅವರು ಒತ್ತಡಕ್ಕೆ ಒಳಗಾಗಿದ್ದಾರೆ ಯಾವುದೋ ವಿಷಯಕ್ಕೆ ಆತಂಕಗೊಂಡಿದ್ದಾರೆ ಎಂದು ಅರ್ಥವಾಗುತ್ತದೆ ಹೊರತು ಅದಕ್ಕೆ ಬೇರೆಯ ಅರ್ಥ ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ.