ಕನ್ನಡ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದವರಲ್ಲಿ ನಟ ನಿರ್ದೇಶಕ ರವಿಚಂದ್ರನ್ ಕೂಡ ಒಬ್ಬರು. ಹೌದು, ಕ್ರೇಜಿ ಸ್ಟಾರ್ ಸಿನಿಮಾವನ್ನು ನೋಡಲು ಕಾಯುತ್ತಿರುವ ಅಭಿಮಾನಿಬಳಗವು ಇದೆ. ಅವರ ಸಿನಿಮಾಗಳು ಎಂದರೇನೇ ಹಾಗೆ ಏನೋ ಒಂದು ವಿಶೇಷತೆಯಿಂದ ಕೂಡಿರುತ್ತವೆ. ಹೌದು, ರವಿಚಂದ್ರನ್ ಅವರನ್ನು ಕ್ರೇಜಿಸ್ಟಾರ್, ರಣಧೀರ, ಕಿಂದರಿಜೋಡಿ, ಪ್ರೇಮಲೋಕದ ರಾಜ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ.
ಅದಲ್ಲದೆ, ಆ ಕಾಲಕ್ಕೆ ಸಿನಿಮಾಗಳಲ್ಲಿನ ಹಾಡುಗಳು, ಸಿನಿಮಾಗಳು ಹೊಸತನದಿಂದ ವಿಶೇಷತೆಯಿಂದ ಸಿನಿಮಾವು ಕೂಡಿತ್ತು. ಪ್ರೇಮ ಕಥೆ ಆಧಾರಿತ ಸಿನಿಮಾಗಳಲ್ಲಿ ನಟನೆ ಹಾಗೂ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಇವರು ಹೊತ್ತು ಕೊಂಡಿದ್ದರು. ಅದರ ಜೊತೆಗೆ , ನಿರ್ದೇಶನದ ಸಿನಿಮಾದಲ್ಲಿ ಹೊಸ ತಂತ್ರಜ್ಞಾನ ಹಾಗೂ ಪ್ರಯೋಗವನ್ನು ಮಾಡಿದ್ದರು. ಹೀಗೆ ಸಿನಿಮಾರಂಗದಲ್ಲಿ ಹೊಸತನವನ್ನು ಮಾಡಿದ್ದ ನಟ ರವಿಚಂದ್ರನ್ ಅವರು ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯಾರಾಗಿದ್ದಾರೆ.
ಇವರ ನಟನೆಯಲ್ಲಿ ಮೂಡಿ ಬಂದ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ಮಲ್ಲ ಕೂಡ ಒಂದು. ಹಾಗಾಡರೆ ಇದೀಗ ಮಲ್ಲ 2 ಸಿನಿಮಾ ಮಾಡಲು ತಯಾರಿ ನಡೆಸಿದ್ದಾರಾ ರವಿಚಂದ್ರನ್, ಅದಕ್ಕೆ ಇಲ್ಲಿದೆ ಉತ್ತರ. ಈ ಹಿಂದೆ ಅರ್ಜುನ್ ಗೌಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರವಿಚಂದ್ರನ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಗಲಿದ ನಿರ್ಮಾಪಕ ಕೋಟಿ ರಾಮು ಅವರ ಬಗ್ಗೆ ಕೆಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದರು.
ಹೌದು, ತನ್ನ ಪತಿಯನ್ನು ನೆನೆದು ವೇದಿಕೆಯಲ್ಲಿ ಕಣ್ಣೀರು ಹಾಕಿದ ಮಾಲಾಶ್ರೀ ಅವರಿಗೆ ಸಮಾಧಾನ ಮಾಡುವ ರೀತಿಯಲ್ಲಿ ಮಾತನಾಡಿದ್ದರು ರವಿಚಂದ್ರನ್. ವೇದಿಕೆಯ ಮೇಲೆ ತಮ್ಮಿಬ್ಬರ ಸ್ನೇಹ ಹಾಗೂ ಸಿನಿಮಾ ಕೆಲಸದ ಬಗ್ಗೆ ಮಾತನಾಡಿದ್ದರು. ಅಂದಹಾಗೆ, ಹೌದು, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಾಮು ಅವರು ರಾಮು ಪ್ರೊಡಕ್ಷನ್ ಅಡಿಯಲ್ಲಿ ಶಕುನಿ ಎನ್ನುವ ಚಿತ್ರವನ್ನು ನಿರ್ಮಿಸುತ್ತಿದ್ದರು. ಈ ಸಿನಿಮಾವು ಶೇಕಡಾ 40 ರಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು.
ಆದರೆ ಒಂದು ದಿನ ರಾಮು ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಸರ್ ಈ ಚಿತ್ರದಲ್ಲಿ ನಿಮ್ಮ ಗೆಟಪ್ ಯಾಕೋ ನನಗೆ ಇಷ್ಟ ಆಗ್ತಿಲ್ಲ ಎಂದಿದ್ದರು. ಅರ್ಧ ಸಿನಿಮಾ ಚಿತ್ರಣವೇ ಮುಗಿದು ಹೋಗಿದೆ ಈಗ ಗೆಟಪ್ ಚೆನ್ನಾಗಿಲ್ಲ ಅಂದ್ರೆ ಹೇಗೆ ಅಂತ ರವಿ ಸರ್ ನಿರ್ಮಾಪಕ ರಾಮು ಬಳಿ ಕೇಳಿದ್ದರು. ಆದರೆ ನಿರ್ಮಾಪಕ ರಾಮು ಚಿತ್ರವನ್ನು ಪೂರ್ಣಗೊಳಿಸುವುದಕ್ಕೆ ಇಷ್ಟಪಟ್ಟಿಲ್ಲ. ಹಾಗಾಗಿ ಶಕುನಿಯನ್ನು ಅರ್ಧದಲ್ಲಿ ನಿಲ್ಲಿಸಿದರು ರವಿಚಂದ್ರನ್.
ಕೊನೆಗೆ ರವಿಚಂದ್ರನ್ ಅವರು ರಾಮು ಅವರಿಗೆ ಒಂದು ಮಾತನ್ನು ಕೊಟ್ಟರು. ನಾನು ನಿಮಗೆ ಒಂದು ಚಿತ್ರವನ್ನು ಮಾಡಿಕೊಡುತ್ತೇನೆ ಅದು ಸಂಪೂರ್ಣ ನನ್ನ ಜವಾಬ್ದಾರಿ. ನನ್ನ ಇಷ್ಟಕ್ಕೆ ಬಿಟ್ಟುಬಿಡಿ ಎಂದಿದ್ದರು. ಕೊಟ್ಟ ಮಾತಿನಂತೆ ರವಿಚಂದ್ರನ್ ಅವರ ’ಮಲ್ಲ’ ಸಿನಿಮಾ ಸೆಟ್ಟೇರಿತು. ತಾವು ಮಾತುಕೊಟ್ಟಂತೆ ರವಿಚಂದ್ರನ ಅವರು ಹಿಟ್ ಸಿನಿಮಾವೊಂದನ್ನು ರಾಮು ಪ್ರೊಡಕ್ಷನ್ ಗೆ ನಿರ್ಮಿಸಿ ಕೊಟ್ಟಿದ್ದರು.
ರಾಮು ಜೊತೆಗೆ ಸಿನಿಮಾ ನಿರ್ಮಿಸುವಾಗ ಆದ ಅನುಭವವನ್ನು ಹಂಚಿಕೊಂಡ ರವಿಚಂದ್ರನ್ ಅವರು ಮಾಲಾಶ್ರೀ ಅವರ ಕುರಿತು ಈ ರೀತಿ ಹೇಳಿದ್ದರು. ‘ರಾಮಾಚಾರಿ ಸಿನಿಮಾದಲ್ಲಿ ಮಾಲಾಶ್ರೀ ಹೇಗೆ ನನ್ನ ಜೊತೆಗೆ ಸೇರಿ ನನ್ನನ್ನ ಮೇಲಕ್ಕೆತ್ತಿದ್ದರು ಹಾಗೆ ನಾನು ಮಲ್ಲ ಸಿನಿಮಾವನ್ನ ಮಾಡಿ ಆ ಋಣವನ್ನು ತೀರಿಸಿದ್ದೇನೆ ಎಂದು ರವಿಚಂದ್ರನ್ ಹೇಳಿದರು. ರಾಮು ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾದ ಎಲ್ಲಾ ದಿಗ್ಗಜ ನಟರು ಸಿನಿಮಾ ಮಾಡಿದ್ದಾರೆ.
ಇನ್ನು ಮಾಲಾಶ್ರೀ ಅವರ ಬಳಿ ಮಲ್ಲ 2 ಚಿತ್ರವನ್ನು ಮಾಡ್ತೀನಿ ಅಲ್ಲಿ ನೀನು ಹೀರೋಯಿನ್ ಹಾಕ್ತೀಯ ಎಂದು ವೇದಿಕೆಯಲ್ಲಿ ಕೇಳಿದ್ದರು ರವಿಚಂದ್ರನ್. ಅಥವಾ ನಿನ್ನ ಮಗಳ ಜೊತೆಗೆ ಈ ಸಿನಿಮಾ ಮಾಡುತ್ತೀನಿ ಅದು ಬೇಡ ಅಂದ್ರೆ ನನ್ನ ಮಗನ ಜೊತೆ ನಿನ್ನ ಮಗಳನ್ನು ಹೀರೋಯಿನ್ನಾಗಿ ಆಯ್ಕೆ ಮಾಡ್ತೀನಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.