PhotoGrid Site 1665218263042

ಮಲ್ಲ ಸಿನಿಮಾ ನನಗೆ ಅತ್ಯಂತ ಕಠಿಣವಾದ ಸವಾಲಾಗಿತ್ತು! ಮಲ್ಲ ಚಿತ್ರದಲ್ಲಿ ಪಟ್ಟ ಕಷ್ಟಗಳ ಬಿಚ್ಚಿಟ್ಟ ನಟಿ ಪ್ರಿಯಾಂಕ ಹೇಳಿದ್ದೇನು ನೋಡಿ!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪರಭಾಷೆಯಿಂದ ಹೀರೋಯಿನ್ ಗಳನ್ನು ಕರೆಸಿ ಕನ್ನಡದಲ್ಲಿ ಅಭಿನಯಿಸುವಂತೆ ಮಾಡುವುದು ಹೊಸ ಟ್ರೆಂಡ್ ಏನು ಅಲ್ಲ. ಅದರಲ್ಲೂ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿಯೇ ಹೆಚ್ಚಾಗಿ ಪರಭಾಷೆ ನಟಿಯರನ್ನ ಕರೆದುಕೊಂಡು ಬರಲಾಗುತ್ತಿತ್ತು. ಹಾಗೆ ಬೇರೆ ಭಾಷೆಯವರಾದರೂ ಕೂಡ ಬಂದು ಕನ್ನಡದಲ್ಲಿ ಅಭಿನಯಿಸಿ ನಂತರ ಕನ್ನಡಿಗರೇ ಆಗಿ ಹೋದ ನಟಿಯರಲ್ಲಿ ಪ್ರಿಯಾಂಕ ಉಪೇಂದ್ರ ಮುಂಚೂಣಿಯಲ್ಲಿದ್ದಾರೆ.

ಹೌದು, ನಟಿ ಪ್ರಿಯಾಂಕ ಉಪೇಂದ್ರ ಇದುವರೆಗೆ ಸುಮಾರು 50 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿಯೂ ಕನ್ನಡದಲ್ಲಿ ಅವರು ತಮ್ಮ ಕರಿಯರ್ ಕಂಡುಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವುದು ಅಷ್ಟು ಸುಲಭವಲ್ಲ ಅದರಲ್ಲೂ ಕೆಲವು ನಿರ್ದೇಶಕರ ಸಿನಿಮಾಗಳಲ್ಲಿ ಅಭಿನಯಿಸುವಾಗ ವಿಶೇಷವಾದ ಪ್ರತಿ ಬೇಕಾಗಿರುತ್ತೆ.

ಪ್ರಿಯಾಂಕಾ ಉಪೇಂದ್ರ ಅವರು ಇಂತಹ ಹಲವು ಚಾಲೆಂಜಿಂಗ್ ಪಾತ್ರಗಳನ್ನ ಮಾಡಿದ್ದಾರೆ. ಅದರಲ್ಲೂ ಭಾಷೆಯ ಗೊತ್ತಿಲ್ಲದೆ ಬೇರೆ ಭಾಷೆಯಿಂದ ಬಂದು ಕನ್ನಡದಲ್ಲಿ ಡೈಲಾಗ್ ಹೇಳುವುದು ಅಷ್ಟು ಸುಲಭವೇನು ಅಲ್ಲ. ಆದರೆ ಈ ಎಲ್ಲಾ ವಿಷಯಗಳಲ್ಲಿ ಸಕ್ಸಸ್ ಆಗಿರುವ ನಟಿ ಪ್ರಿಯಾಂಕಾ ತಮ್ಮ ವೃತ್ತಿ ಜೀವನದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದರು.

ಅದರಲ್ಲಿಯೂ ತಮ್ಮ ಸಿನಿಮಾ ಕರಿಯರ್ ನಲ್ಲಿ ಅತ್ಯಂತ ಕಷ್ಟಕರವಾದ ಹಾರ್ಡೇಶ ಸಿನಿಮಾ ಅಂದ್ರೆ ಯಾವುದು ಎನ್ನುವ ಪ್ರಶ್ನೆಗೆ ಅವರ ಉತ್ತರವೇ ಮಲ್ಲ. ಪ್ರಿಯಾಂಕ ಉಪೇಂದ್ರ ಅವರು ಉಪೇಂದ್ರ ಅವರ ಜೊತೆ ಎಚ್ ಟು ಓ ಸಿನಿಮಾದ ನಂತರ ಹೆಚ್ಚು ಫೇಮಸ್ ಆಗಿದ್ದು, ಜನರ ನಡುವೆ ಇಂದು ನೆನಪಿನಲ್ಲಿ ಉಳಿದುಕೊಂಡಿರುವುದು ಮಲ್ಲ ಸಿನಿಮಾದ ಪಾತ್ರದ ಮೂಲಕ. ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ಮಲ್ಲ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ.

‘ಯಮ್ಮೋ ಯಾಮ್ಮೋ ನೋಡ್ದೆ ನೋಡ್ದೆ’ ಹಾಡು ಸಿನಿಮಾ ರಿಲೀಸ್ ಆಗಿ ಇಷ್ಟು ವರ್ಷ ಕಳೆದರೂ ಜನರಿಗೆ ಇಂದಿಗೂ ನೆನಪಿದೆ. ‘ನಾನು ಬಹುಶಃ ಬೇರೆ ಯಾವ ಸಿನಿಮಾದಲ್ಲಿಯೂ ಮಲ್ಲಾ ಸಿನಿಮಾದಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿಲ್ಲ ಅದು ನನಗೆ ನಿಜಕ್ಕೂ ಹಾರ್ಡೆಸ್ಟ್ ಸಿನಿಮವಾಗಿದ್ದು ರವಿಚಂದ್ರನ್ ಸರ್ ಜೊತೆ ಮನಸ್ಸಿನಲ್ಲಿ ಬೇರೆ ಬೇರೆ ಶೇಡ್ಸ್ ನಲ್ಲಿ ಪಾತ್ರ ನಿಭಾಯಿಸಿದ್ದೇನೆ.

ರವಿಚಂದ್ರನ್ ಅವರ ಅಮ್ಮನಾಗಿ ಅವರ ಹೆಂಡತಿಯಾಗಿ ಸಾಫ್ಟ್ ಹಾಗೂ ಹಾರ್ಡ್ ಆದ ಕ್ಯಾರೆಕ್ಟರ್ ನಿಭಾಯಿಸಿದ್ದೇನೆ. ರವಿ ಸರ್ ಹೆಚ್ಚು ಡೈಲಾಗ್ ಹೇಳುವುದನ್ನೇ ಪ್ರಿಫರ್ ಮಾಡುತ್ತಾರೆ ಹಾಗಾಗಿ ನಾನು ಕನ್ನಡ ಡೈಲಾಗ್ ಮಾಡಿ ಹೇಳಬೇಕಿತ್ತು. ಅದು ನನಗೆ ಅಷ್ಟು ಸುಲಭದ ಟಾಸ್ಕ್ ಆಗಿರಲಿಲ್ಲ. ಮಲ್ಲ ಸಿನಿಮಾ ನನ್ನ ಗ್ರೇಟೆಸ್ಟ್ ಅಚೀವ್ಮೆಂಟ್’ ಹೀಗಂತ ಮಲ್ಲ ಸಿನಿಮಾದ ಸಕ್ಸಸ್ ಬಗ್ಗೆ ಹಾಗೂ ತಾವು ಪಾತ್ರ ನಿಭಾಯಿಸಿದ ಬಗ್ಗೆ ಪ್ರಿಯಾಂಕ ಉಪೇಂದ್ರ ಹೇಳಿಕೊಂಡಿದ್ದಾರೆ.

ವಿ ರವಿಚಂದ್ರನ್ ಅವರು ಹೀರೋಯಿನ್ ಗಳನ್ನು ಹೆಚ್ಚು ಗ್ಲಾಮರಸ್ ಆಗಿ ತೋರಿಸುವ ಏಕೈಕ ನಿರ್ದೇಶಕ ಅಂದ್ರೆ ತಪ್ಪಾಗಲ್ಲ. ನಟಿಯರನ್ನ ರವಿಚಂದ್ರನ್ ಅವರಷ್ಟು ಚೆನ್ನಾಗಿ ಹಾಗೂ ಅವರಿಗೆ ಮಹತ್ವವನ್ನು ನೀಡಿ ಬೇರೆ ಯಾವುದೇ ಸಿನಿಮಾ ನಿರ್ದೇಶಕರು ಬಳಸಿಕೊಂಡಿಲ್ಲ. ಹಾಗಾಗಿ ರವಿಚಂದ್ರನ್ ಅವರು ಇವರಿಗೆ ನಿರ್ಮಾಣ ಮಾಡಿದ ಹಾಗೂ ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಹಾಗೆ ಪ್ರಿಯಾಂಕ ಉಪೇಂದ್ರ ಕೂಡ ಇಂದು ದೊಡ್ಡ ಸಕ್ಸೆಸ್ ಕಂಡಿದ್ದಾರೆ.

Leave a Reply

Your email address will not be published. Required fields are marked *