PhotoGrid Site 1671618388767

ಮನೆ ಬಾಡಿಗೆ ಕಟ್ಟಲು ಹೋದಾಗ ಮಂಚಕ್ಕೆ ಒತ್ತಾಯಿಸಿದ ಮನೆ ಓನರ್ ಎಂದ ನಟಿ ತೇಜಸ್ವಿನಿ ಪಂಡಿತ್! 10 ವರ್ಷದ ಹಿಂದೆ ನಡೆದ ಆ ಒಂದು ಘಟನೆಯನ್ನು ಹೊರ ಹಾಕಿದ ನಟಿ ನಟಿ!!

ಸುದ್ದಿ

ಸಿನಿಮಾ ರಂಗ ಅಂದ್ರೆ ಅದರಲ್ಲಿ ಮಹಿಳಾ ಕಲಾವಿದೆಯರು ಸಾಕಷ್ಟು ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಅದೆಶ್ಟೋ ಕಲಾವಿದೆಯರು ಕಾಸ್ಟಿಂಗ್ ಕೌಚ್ ಅನುಭವಿಸಿದ್ದಾರೆ. ಕೆಲವರು ಈ ಬಗ್ಗೆ ಹೇಳಿಕೊಂಡರೆ ಇನ್ನೂ ಕೆಲವರು ಹೇಳಿಕೊಳ್ಳದೆ ನೋವನ್ನ ತಮ್ಮೊಳಗೆ ಇಟ್ಟುಕೊಂಡಿದ್ದಾರೆ. ಮೀಟು ಪ್ರಕರಣದ ನಂತರ ಸಾಕಷ್ಟು ಜನ ನಟಿಯರು ತಮ್ಮ ಜೀವನದಲ್ಲಿ ನಡೆದ ಆ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಅಂತವರಲ್ಲಿ ಮರಾಠಿ ಚಿತ್ರರಂಗದ ಖ್ಯಾತ ನಟಿ ತೇಜಸ್ವಿನಿ ಪಂಡಿತ್ ಕೂಡ ಒಬ್ಬರು. ಹೌದು ಮರಾಠಿ ಚಿತ್ರ ರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿ ಫೇಮಸ್ ಆಗಿರುವ ತೇಜಸ್ವಿನಿ ಪಂಡಿತ್ 10 ವರ್ಷಗಳ ಹಿಂದೆ ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

2009 -10ರ ಸಮಯದಲ್ಲಿ ಪುಣೆಯ ಸಿಂಹಗಡ ರಸ್ತೆಯಲ್ಲಿ ಇರುವ ಅಪಾರ್ಟ್ಮೆಂಟ್ ಒಂದರಲ್ಲಿ ತೇಜಸ್ವಿನಿ ವಾಸವಾಗಿದ್ದರು. ಆ ಸಮಯದಲ್ಲಿ ಅವರ ಒಂದೆರಡು ಸಿನಿಮಾ ರಿಲೀಸ್ ಕೂಡ ಆಗಿತ್ತು. ಅಪಾರ್ಟ್ಮೆಂಟ್ ನ ಓನರ್ ಅಲ್ಲಿಯ ಕಾರ್ಪೊರೇಟರ್ ಆಗಿದ್ದರು ತೇಜಸ್ವಿನಿ ತಿಂಗಳೇ ಕೊನೆಯಲ್ಲಿ ಮನೆ ಬಾಡಿಗೆ ಕಟ್ಟಲು ಹೋದಾಗ, ನೇರವಾಗಿ ತೇಜಸ್ವಿನಿ ಅವರನ್ನು ಮಂಚಕ್ಕೆ ಕರೆಯುತ್ತಾರೆ ಓನರ್.

ಇದರಿಂದ ಕೋಪಗೊಂಡ ತೇಜಸ್ವಿನಿ ಮಾಡಿದ್ದೇನು ಗೊತ್ತಾ? ಹೌದು, ಹೀಗೆಲ್ಲಾ ಜನರು ಕರೀತಾರೆ ಅಂತ ನಟಿಯರು ಸಪೋರ್ಟ್ ಮಾಡೋದಿಲ್ಲ ಅಥವಾ ನಟಿಯರು ಎನ್ನುವ ಕಾರಣಕ್ಕೆ ಅವರು ಎಲ್ಲದಕ್ಕೂ ಸಿದ್ಧರಿರುತ್ತಾರೆ ಎಂದು ಅರ್ಥವಲ್ಲ. ತೇಜಸ್ವಿನಿ ಪಂಡಿತ್ ನೇರವಾಗಿ ಆಫರ್ ಮಾಡಿದ ಮಾಲೀಕನಿಗೆ ಗಾಜಿನ ಲೋಟದಲ್ಲಿ ಇದ್ದ ನೀರನ್ನ ಎತ್ತುಕೊಂಡು ಮುಖಕ್ಕೆ ಎರಚುತ್ತಾರೆ.

ನಂತರ ಅಲ್ಲಿಂದ ಹೊರಗೆ ಬರುತ್ತಾರೆ. ಈ ಘಟನೆಯನ್ನು ಮೆಲುಕು ಹಾಕಿದ ನಟಿ ತೇಜಸ್ವಿನಿ ನಾನು ಇಂತಹ ಕೆಲಸ ಮಾಡುವ ಹಾಗಿದ್ದರೆ ಯಾರಿಗೂ ಕೇರ್ ಮಾಡಿ ಬದುಕಬೇಕಾಗಿರಲಿಲ್ಲ. ಮನೆ ಕಾರು ಖರೀದಿ ಮಾಡಿ ಐಷಾರಾಮಿ ಜೀವನ ಲೀಡ್ ಮಾಡಬಹುದಿತ್ತು ಎಂದು ಹೇಳಿದ್ದಾರೆ. ತೇಜಸ್ವಿನಿ ಪಂಡಿತ್ ಅವರು ವೆಬ್ ಸೀರೀಸ್ ನಲ್ಲಿಯೂ ಕೂಡ ನಟಿಸಿದ್ದಾರೆ.

ಅವರ ನಟನೆಯ ಅಥಂಗ್ ಸೀರೀಸ್ ಬಿಡುಗಡೆಗೆ ಸಿದ್ಧವಾಗಿದೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಎರಡೂ ವಿಚಾರಗಳ ಬಗ್ಗೆ ಈ ಸೀರೀಸ್ ಕಥೆಯನ್ನು ಹೆಣೆಯಲಾಗಿದೆ ಇದರಿಂದ ನಾನು ಜೀವನ ಪಾಠ ಕಲಿತಿರುವೆ ಎಂದು ತೇಜಸ್ವಿನಿ ಹೇಳಿಕೊಂಡಿದ್ದಾರೆ. ತೇಜಸ್ವಿನಿ ಪಂಡಿತ್ ಅವರು ಮರಾಠಿಯ ಖ್ಯಾತ ನಟಿ ಜ್ಯೋತಿ ಚಾಂಡೆಕರ್ ಅವರ ಪುತ್ರಿ.

2004ರಲ್ಲಿ ಕೇದಾರ ಶಿಂದೆ ಅವರ ಅಗಬಾಯಿ ಅರೇಚ ಸಿನಿಮಾದ ಮೂಲಕ ಸಿನಿಮಾದ ಜಗತ್ತಿಗೆ ಕಾಲಿಟ್ಟರು ವೈಬ್ಸ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಕೂಡ ತೇಜಸ್ವಿನಿ ಆರಂಭಿಸಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ವಿಶಾ ದೇವರುಕ್ಕರ್ ನಿರ್ದೇಶನದ ಬಂಬೂ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇಂದು ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ ಅಸಾದಿಸಿರುವ ತೇಜಸ್ವಿನಿ ಪಂಡಿತ್ ಜೀವನದಲ್ಲಿ ನಡೆದ ಕೆಟ್ಟ ಅನುಭವಗಳನ್ನು ಮರೆತು ಮುಂದೆ ಸಾಗಿದ್ದಕ್ಕೆ ಇಂದು ಉನ್ನತ ಸ್ಥಾನದಲ್ಲಿ ಇದ್ದಾರೆ ಅಂದ್ರೆ ತಪ್ಪಲ್ಲ.

Leave a Reply

Your email address will not be published. Required fields are marked *