ಮನುಷ್ಯ ಅಂದಮೇಲೆ ಮನುಷ್ಯನಲ್ಲಿ ಮಾನವೀಯತೆ ಇರಲೇಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಅದನ್ನ ಮರೆತಿದ್ದಾರೆ. ತಾವು ತಮ್ಮ ಕೆಲಸ, ತಮ್ಮ ಮನೆ ಎಂದಷ್ಟೇ ಯೋಚನೆ ಮಾಡುತ್ತಾರೆ. ಬೆರೆಯವರು ಹೇಗಾದರೂ ಇರಲಿ ನಮಗೇನು ಎನ್ನುವಂತೆ ವರ್ತಿಸುತ್ತಾರೆ. ಇಂತಹ ಮಾನವೀಯತೆಯನ್ನು ಮರೆತ ಒಂದು ಅಸಹನಿಯ ಘಟನೆಯ ಬಗ್ಗೆ ನಾವಿಂದು ಹೇಳುತ್ತಿದ್ದೇವೆ.
ಇದು, ತಮಿಳುನಾಡಿನಲ್ಲಿ ನಡೆದ ನೈಜ ಘಟನೆ. ಕ್ಷಮಯಾ ಧರಿತ್ರಿ ಹೆಣ್ಣು. ಆದರೆ ಇವರಲ್ಲಿಯೂ ದುಷ್ಟಬುದ್ಧಿ ಇರುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಸ್ನೇಹಿತರೆ. ಮಹೇಶ್ ಎಂಬಾತ ಸಿಲಿಂಡರ್ ಡೆಲಿವರಿ ಮಾಡುವ ಹುಡುಗ. ಆತ ತಮಿಳುನಾಡಿನ ಸಾಕಷ್ಟು ಮನೆಗಳಿಗೆ ಸಿಲಿಂಡರ್ ಅನ್ನು ಕೊಡುತ್ತಾನೆ. ಒಂದು ದಿನ ತುಂಬಾ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವ ಕೆಲಸ ಇರುತ್ತೆ. ಆದರೆ ಆತ ಎದ್ದೇಳುವುದು ತಡವಾದ್ದರಿಂದ ಒಂದು ತೊಟ್ಟು ನೀರನ್ನು ಕುಡಿಯದೆ, ತಿಂಡಿ ತಿನ್ನದೇ ನೇರವಾಗಿ ಕೆಲಸಕ್ಕೆ ಹೋಗುತ್ತಾನೆ.
ಅದರಲ್ಲೂ ಒಂದು ಅಪಾರ್ಟ್ಮೆಂಟ್ ಗೆ ಗ್ಯಾಸ್ ಸಿಲಿಂಡರ್ ಕೊಡಲು ಹೋಗಬೇಕಾಗಿರುತ್ತೆ. ಅಲ್ಲಿ 8 ಫ್ಲೋರ್ ಇದ್ದು ಲಿಫ್ಟ್ ಕೂಡ ಸರಿಯಾಗಿ ವರ್ಕ್ ಆಗುವುದಿಲ್ಲ ಸಿಲಿಂಡರ್ ಹೊತ್ತುಕೊಂಡು ಎಂಟನೇ ಫ್ಲೋರ್ ನಲ್ಲಿರುವ ಸುಜಾತ ಎನ್ನುವ ಮಹಿಳೆಯ ಮನೆಗೆ ಸಿಲಿಂಡರ್ ಡೆಲಿವರಿ ಕೊಡುತ್ತಾನೆ ಅದಾಗಲೇ ಸುಸ್ತಾಗಿದ್ದ. ಹಿಂದಿನ ದಿನವೂ ಹೆಚ್ಚು ಕೆಲ್ಸವಿದ್ದರಿಂದ ಬಹಳ ದಣಿದಿದ್ದ. ಗ್ಯಾಸ್ ಡೆಲಿವರಿ ಮಾಡಿದ ಮಹೇಶ್ ನಿಗೆ ಒಂದು ಲೋಟ ನೀರು ಸಿಕ್ಕಿದರೂ ಸಾಕು ಎನ್ನುವಂತೆ ಆಗಿರುತ್ತೆ.
ಸುಜಾತಾ ಅವರಿಗೆ ಗ್ಯಾಸ್ ಸಿಲೆಂದರ್ ಕೊಟ್ಟು ತಾಯಿ ಸ್ವಲ್ಪ ನೀರು ಕೊಡ್ತೀರಾ ಅಂತ ಕೇಳುತ್ತಾನೆ ಆಗ ಸುಜಾತ ಮುಖಕ್ಕೆ ಹೊಡೆದಂತೆ ನಿನಗೆ ನೀರು ಕೊಟ್ಟರೆ ಕರೋನ ಮಹಾಮಾರಿ ನನಗೂ ಅಂಟಿಕೊಳ್ಳಬಹುದು. ಅದನ್ನ ಭರಿಸಲು ನನಗೆ ಸಾಧ್ಯವಿಲ್ಲ ಎಂದು ಹೇಳಿ ಇಲ್ಲಿಂದ ಹೋಗು ಎಂದು ಮುಖಕ್ಕೆ ಹೊಡೆದಂತೆ ಬಾಗಿಲು ಹಾಕಿಕೊಳ್ಳುತ್ತಾಳೆ. ಆದರೆ ಸ್ವಲ್ಪವೂ ಸಿಟ್ಟಾಗದ ಮಹೇಶ್ ಮುಂದಿನ ಮನೆಗೆ ಸಿಲಿಂಡರ್ ಡೆಲಿವರಿ ನೀಡಲು ಹೋಗುತ್ತಾನೆ.
ಆ ಮನೆಯಲ್ಲಿ ನಡೆದ ಘಟನೆ ಮಹೇಶ್ ಕಣ್ಣಿನಲ್ಲಿ ನೀರನ್ನೇ ತರಿಸುತ್ತೆ. ಅಲ್ಲಿ ನಡೆದಿದ್ದೇನು ಗೊತ್ತಾ? ಮುಂದೆ ಓದಿ. ಎಂಟನೇ ಮಹಡಿಯಿಂದ ನಾಲ್ಕನೇ ಮಹಡಿಯ ಸುಮಾ ಎನ್ನುವವರ ಮನೆಗೆ ಗ್ಯಾಸ್ ಸಿಲೆಂಡರ್ ಕೊಡಲು ಹೋಗುತ್ತಾನೆ ಮಹೇಶ್. ಅಲ್ಲಿ ಆತ ಬಹಳ ದಣಿದು ಸುಸ್ತಾಗಿದ್ದನ್ನು ಸುಮಾ ಗಮನಿಸುತ್ತಾಳೆ. ಅವರ ಬಳಿಯೂ ಒಂದು ಲೋಟ ನೀರು ಕೊಡುವಂತೆ ಕೇಳುತ್ತಾನೆ ಆಗ ಸುಮ ತಕ್ಷಣ ನೀರನ್ನು ನೀಡಿ ಸ್ವಲ್ಪ ದಣಿವಾರಿಸಿಕೊಳ್ಳುವಂತೆ ಹೇಳುತ್ತಾಳೆ.
ನೀರು ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ ಮಹೇಶ್ ನೇರವಾಗಿ ಸುಮಾ ಅವರ ಕಾಲಿಗೆ ಬೀಳುತ್ತಾನೆ. ಇದರಿಂದ ಮನನೊಂದ ಸುಮ ಆತನಿಗೆ ನೂರು ರೂಪಾಯಿ ಟಿಪ್ಸ್ ಕೂಡ ಕೊಡುತ್ತಾಳೆ. ನಿಮ್ಮ ಋಣವನ್ನ ಜನ್ಮ ಇರುವವರೆಗೂ ಮರೆಯುವುದಿಲ್ಲ ಎಂದು ಮಹೇಶ್ ಸಂತೋಷದ ಕಣ್ಣೀರು ಹಾಕುತ್ತಾ ತನ್ನ ಮುಂದಿನ ಕೆಲಸಕ್ಕೆ ಹೊರಡುತ್ತಾನೆ.
ಸ್ನೇಹಿತರೆ, ನಮ್ಮಲ್ಲಿ ಬೇರೆಯವರಿಗೆ ಯಾವ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಆದರೆ ಮಾನವೀಯತೆಯನ್ನು ಮರೆಯಬಾರದು. ಯಾರಾದರೂ ದಣಿವಾಗಿದ್ದರೆ ಒಂದು ಲೋಟ ನೀರು ಕೇಳಿದರೆ ಅದನ್ನು ಕೊಡಲು ನಿರಾಕರಿಸಿದರೆ ನಿಜಕ್ಕೂ ನಾವು ಮನುಷ್ಯರಾಗಲು ಯೋಗ್ಯವಿಲ್ಲ ಎಂದೇ ಅರ್ಥ ಅಲ್ವಾ. ಸ್ನೇಹಿತರೆ, ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.