ಬೆಂಗಳೂರಿನ ಸುತ್ತಮುತ್ತ ಇದೀಗ ಹ’ನಿ ಟ್ರ್ಯಾ’ಪ್ ಮಾಡುವವರ ಹಾ’ವಳಿ ಹೆಚ್ಚಾಗಿದೆ. ಸ್ನೇಹಿತರೆ ಎಲ್ಲರೂ ಈ ವಿಷಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇತ್ತೀಚೆಗೆ ಎಲ್ಲರೂ ಸಾಮಾಜಿಕ ಜಾ’ಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಈ ಸಾಮಾಜಿಕ ಜಾಲತಾಣ ಅನ್ನೋದು ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಅಂಶಗಳನ್ನು ಒಳಗೊಂಡಿದೆ. ಕೆಲವರು ಸೋಶಿಯಲ್ ಮೀಡಿಯಾವನ್ನು ಕೆ’ಟ್ಟದಕಾಗಿಯೇ ಬಳಸಿಕೊಳ್ಳುತ್ತಾರೆ.
ಅದರಲ್ಲೂ ಕೆಲವು ಹೆಣ್ಣು ಮಕ್ಕಳು ಯುವಕರನ್ನು ಹನಿ ಟ್ರ್ಯಾ’ಪ್ ಗೆ ಒಳಗಾಗಿಸುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಇಂತಹ ಘಟನೆ ಹೆಚ್ಚಾಗುತ್ತಿದ್ದು ದಿಲೀಪ್ ಕುಮಾರ್ ಎನ್ನುವ ಒಬ್ಬ ಯುವಕ ಹನಿ ಟ್ರ್ಯಾ’ಪ್ ಗೆ ಒಳಗಾಗಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾನೆ. ಹೌದು ಅಕ್ಟೋಬರ್ 27ರಂದು ಯುವತಿ ಒಬ್ಬಳು ದಿಲೀಪ್ ಕುಮಾರ್ ಎನ್ನುವ ಹುಡುಗನಿಗೆ ಕರೆ ಮಾಡಿ ಮನೆಯಲ್ಲಿ ಯಾರು ಇಲ್ಲ ಬಾ ಅಂತ ಕರೆದಿದ್ದಾಳೆ.
ಹೀಗೆ ಹೋದವನು ಎಲ್ಲವನ್ನ ಕಳೆದುಕೊಂಡು ಬರಿ ಕೈಯಲ್ಲಿ ನಿಂತುಬಿಟ್ಟಿದ್ದ. ಹೌದು, ಆ ಯುವತಿ ಸಾಕಷ್ಟು ಹುಡುಗರಿಗೆ ಮೊದಲು ಮೆಸೇಜ್ ಮಾಡಿ ಪರಿಚಯ ಮಾಡಿಕೊಳ್ಳುತ್ತಾಳೆ. ನಂತರ ಅವರಿಗೆ ಮನೆಯಲ್ಲಿ ಯಾರು ಇಲ್ಲ ಬಾ ಎಂದು ಕರೆದು ಅವರ ಜೊತೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾಳೆ. ಅದೇ ರೀತಿ ದಿಲೀಪ್ ಕುಮಾರ್ ನನ್ನು ಕೂಡ ಯುವತಿ ಕರೆದಿದ್ದಾಳೆ.
ಬಿಟಿಎಂ ನಲ್ಲಿ ಇದ್ದ ಆ ಯುವತಿಯ ಮನೆಗೆ ದಿಲೀಪ್ ಕುಮಾರ್ ಹೋಗಿದ್ದಾನೆ. ಆತ ಮನೆ ಒಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಇದ್ದ ಮೂರು ನಾಲ್ಕು ಹುಡುಗರು ದಿಲೀಪ್ ಕುಮಾರ್ ಬಳಿ ಇದ್ದ ಮೊಬೈಲ್, ಕಾರ್ ಕೀ, 26 ಸಾವಿರ ಕ್ಯಾಶ್ ಎಲ್ಲವನ್ನ ದೋಚಿಕೊಂಡಿದ್ದಾರೆ. ಇನ್ನಷ್ಟು ಹಣ ಕೇಳಿದಾಗ ದಿಲೀಪ್ ಕುಮಾರ್ ತನ್ನ ಸ್ನೇಹಿತನಿಂದ 25000 ಹಣ ಹಾಕಿಸಿಕೊಂಡಿದ್ದ.
ಅಷ್ಟೇ ಅಲ್ಲ ಸ್ನೇಹಿತರೆ ಆ ಹುಡುಗಿಯ ಜೊತೆ ದಿಲೀಪ್ ಕುಮಾರ್ ನನ್ನು ನಿಲ್ಲಿಸಿ ವಿಡಿಯೋ ಮಾಡಿ ಇನ್ನಷ್ಟು ಹಣ ಕೊಡಬೇಕು ಇಲ್ಲವಾದರೆ ಈ ವಿಡಿಯೋ ಸೋಶಿಯಲ್ ಮೀ’ಡಿಯಾದಲ್ಲಿ ಪ’ಬ್ಲಿಕ್ ಮಾಡ್ತೀವಿ ಅಂತ ಬ್ಲಾ’ಕ್ ಮೇಲ್ ಮಾಡಿದ್ದಾರೆ. ಕಾರು ಬೇಕು ಅಂದ್ರೆ 60,000 ಕೊಡಬೇಕು ಅಂತ ತಾಕೀತು ಮಾಡಿದ್ದಾರೆ. ಕೊನೆಗೆ ಬೇರೆ ದಾರಿ ಕಾಣದೆ ದಿಲೀಪ್ ಕುಮಾರ್, ಪೊಲೀಸರ ಮೊರೆ ಹೋಗಿದ್ದಾನೆ.
ಗುರುಗುಂಟೆ ಪಾಳ್ಯದಲ್ಲಿರುವ ಪೊಲೀಸ್ ಠಾಣೆಗೆ ದಿಲೀಪ್ ದೂರು ದಾಖಲಿಸಿದ್ದು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ. ಈಗಾಗಲೇ ಆ ಯುವತಿ ಪೊಲೀಸರ ವಶದಲ್ಲಿದ್ದಾಳೆ. ನಾಲ್ಕು ಜನ ಹುಡುಗರು ಮಾತ್ರ ತಪ್ಪಿಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಯುವಕರೇ ಹೀಗೆ ಅನ್ನೋನ್ ನಂಬರ್ ನಿಂದ ಯಾರಾದರೂ ಯುವತಿ ಮೆಸೇಜ್ ಅಥವಾ ಕರೆ ಮಾಡಿದ್ರೆ ಅದಕ್ಕೆ ಮರುಳಾಗಿ ಹಿಂತಿರುಗಿಸಿ ರಿಪ್ಲೈ ಮಾಡಬೇಡಿ. ಇದರಿಂದ ಖಂಡಿತವಾಗಿಯೂ ನಿಮ್ಮ ಮಾನ ಪ್ರಾ-ಣ ಎರಡಕ್ಕೂ ಕುತ್ತು ಬರಬಹುದು ಎಚ್ಚರ.