ಜಗತ್ತು ಸಾಕಷ್ಟು ಬದಲಾಗಿದೆ, ದೇಶವು ಮುಂದುವರೆದಿದೆ ಇಂದು ಒಬ್ಬರನ್ನ ಒಬ್ಬರು ಸಂಪರ್ಕ ಮಾಡಲು ಸ್ಮಾರ್ಟ್ ಫೋನ್ ಬಳಕೆ ಬಹಳ ಹೆಚ್ಚಾಗಿದೆ. ಆದರೆ ಫೋನ್ ಇರುವುದು ಸಂವಹನ ವಾಹಕವಾಗಿ. ಆದರೆ ಇಂದು ನಾವು ಬೇರೆಯವರ ಜೊತೆ ಸಂವಹನ ಮಾಡುವುದಕ್ಕಿಂತ ಮೊಬೈಲ್ ಹಿಡಿದು ಗೂಗಲ್ ನಲ್ಲಿ ಅದು ಇದು ಸರ್ಚ್ ಮಾಡುತ್ತಾ ಸಮಯ ಕಳೆಯುವುದೇ ಹೆಚ್ಚು. ಇಬ್ಬರು ಒಟ್ಟಿಗೆ ಕುಳಿತರೆ ಮಾತನಾಡುವುದಕ್ಕಿಂತ ತಮ್ಮ ತಮ್ಮ ಮೊಬೈಲ್ ನಲ್ಲಿಯೇ ಬ್ಯುಸಿಯಾಗಿರುತ್ತಾರೆ.
ಸ್ಮಾರ್ಟ್ ಫೋನ್ ಗಳು ಇಂದು ಅದೆಷ್ಟು ಸಂಬಂಧವನ್ನು ಹದಗೆಡಿಸಿವೆ. ಹಾಗಂದ ಮಾತ್ರಕ್ಕೆ ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ಬಳಸುವುದು ತಪ್ಪು ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ ಇಂದು ನಮಗೆ ಯಾವುದೇ ಮಾಹಿತಿ ಬೇಕು ಅಂದ್ರು ಗೂಗಲ್ ನ ಮೊರೆ ಹೋಗಬೇಕು. ಹೀಗೆ ಒಮ್ಮೆ ಕುಳಿತು ವಿಚಾರ ಮಾಡುವಾಗ ಯಾರೆಲ್ಲಾ ಮೊಬೈಲ್ನಲ್ಲಿ ಏನೆಲ್ಲಾ ವಿಷಯಗಳ ಬಗ್ಗೆ ಸರ್ಚ್ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲೂ ಮೂಡಿರಬಹುದು?
ಹಾಗಾಗಿ ನಾವು ಇಂದು ಹೆಚ್ಚಾಗಿ ಹುಡುಗಿಯರು ಇಂಟರ್ನೆಟ್ ನಲ್ಲಿ ಏನು ಹುಡುಕುತ್ತಾರೆ ಎನ್ನುವ ವಿಷಯವನ್ನು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ 20 ಮಿಲಿಯನ್ ಹೆಣ್ಣು ಮಕ್ಕಳೇ! ಹಾಗಾಗಿ ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದ ಮಹಿಳೆಯರೇ ಹೆಚ್ಚು ವಿಷಯಗಳ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ. 15 ರಿಂದ 35 ವರ್ಷ ವಯಸ್ಸಿನ ಹುಡುಗಿಯರಲ್ಲಿ 75% ನಷ್ಟು ದೈನಂದಿನ ಚಟುವಟಿಕೆಯ ಬಗ್ಗೆ ಹೆಚ್ಚಾಗಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರಂತೆ.
ಇನ್ನು 17% ಹುಡುಗಿಯರು ಮಾ-ದ-ಕ ದ್ರ-ವ್ಯ ಡ್ರ-ಗ್ಸ ಮೊದಲಾದ ವಿಷಯಗಳ ಬಗ್ಗೆ ಸರ್ಚ್ ಮಾಡುತ್ತಾರೆ. ಇನ್ನು ಉಳಿದಂತೆ ಹೆಚ್ಚಿನವರು ಅದರಲ್ಲೂ ಅದೇ ಹರೆಯದವರು ಹೆಚ್ಚಾಗಿ ಸೌಂದರ್ಯದ ವಿಷಯದ ಬಗ್ಗೆ, ತಮ್ಮ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳುವುದು ಎನ್ನುವುದರ ಬಗ್ಗೆ ಗೂಗಲ್ನಲ್ಲಿ ಹುಡುಕಾಟ ನಡೆಸುತ್ತಾರೆ. ಹೌದು, ಹುಡುಗಿಯರಿಗೆ ಹೆಚ್ಚಾಗಿ ಗೂಗಲ್ ನಲ್ಲಿ ಸರ್ಚ್ ಮಾಡುವುದಕ್ಕೆ ಇರೋದೇ ತಮ್ಮ ಸೌಂದರ್ಯಕ್ಕೆ ಸಂಬಂಧಪಟ್ಟ ವಿಷಯಗಳು.
ಯಾವ ಸೌಂದರ್ಯ ವರ್ಧಕಗಳನ್ನು, ಬಳಸಬೇಕು ಯಾವ ಬಟ್ಟೆ ತನಗೆ ಸೂಟ್ ಆಗುತ್ತೆ, ಯಾವ ರೀತಿ ಫಿಟ್ನೆಸ್ ಮೆಂಟೇನ್ ಮಾಡಬೇಕು ಬಗ್ಗೆ ಹೆಚ್ಚಾಗಿ ಸರ್ಚ್ ಮಾಡುತ್ತಾ, ಅಂತಹ ಉತ್ಪನ್ನಗಳನ್ನು ಆನ್ಲೈನ್ ನಲ್ಲಿ ಪರ್ಚೇಸ್ ಕೂಡ ಮಾಡುತ್ತಾರೆ. ಇನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆಯೂ ಹುಡುಕಾಟ ನಡೆಸುತ್ತಾರೆ. ಅಂದ ಹಾಗೆ ಮದುವೆಯಾದ ಮಹಿಳೆಯರ ವಿಷಯಕ್ಕೆ ಬಂದರೆ ಅವರಿಗೆ ಎಲ್ಲದಕ್ಕಿಂತಲೂ ದೊಡ್ಡದು ಸಂಸಾರ.
ಹಾಗಾಗಿ ತಾನು ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಗಂಡನ ಸುಖವಾಗಿ ಇಡಲು ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಹುಡುಕಾಟ ನಡೆಸುತ್ತಾರೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ಗಂಡನ ಮನೆಯವರನ್ನ ಮೆಚ್ಚಿಸಲು ಏನು ಮಾಡಬೇಕು ಎನ್ನುವುದೇ ಗೂಗಲ್ ಸರ್ಚ್ ನ ಮುಖ್ಯ ಟಾಪಿಕ್ ಆಗಿರುತ್ತೆ. ಇನ್ನು ಹೆಣ್ಣು ಮಕ್ಕಳು ಸೌಂದರ್ಯ ಪ್ರಿಯರು ಮಾತ್ರವಲ್ಲ ಅಡುಗೆ ಪ್ರಿಯರು ಹೌದು.
ತನ್ನ ಮನೆಯವರಿಗೆ ಯಾವ ರೀತಿ ತಿಂಡಿ ತಿನಿಸುಗಳನ್ನು ಮಾಡಿಕೊಟ್ರೆ ಖುಷಿಯಾಗುತ್ತಾರೆ ಅಂತ ಸದಾ ಹೊಸ ಅಡುಗೆಗಾಗಿ ಹುಡುಕಾಟ ನಡೆಸುತ್ತಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ, ಯುಟ್ಯೂಬ್ ನಲ್ಲಿ ತರಾವರಿ ಅಡುಗೆ ರೆಸಿಪಿ ಸಿಗುತ್ತೆ ಹಾಗಾಗಿ ಹೆಚ್ಚಿನ ಮಹಿಳೆಯರು ರೆಸಿಪಿ ನೋಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇನ್ನು ಮಹಿಳೆಯರು ಸ್ವಾವಲಂಬಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
ಹಾಗಾಗಿ ಸಾಕಷ್ಟು ಮಹಿಳೆಯರು ಮದುವೆಯಾಗುವುದಕ್ಕೂ ಮೊದಲು ಹಾಗೂ ಮದುವೆಯಾದ ನಂತರವೂ ತಾವು ಇಂಡಿಪೆಂಡೆಂಟ್ ಆಗಿ ಇರುವುದು ಹೇಗೆ ಯಾವ ರೀತಿಯ ಉದ್ಯೋಗ ಅಥವಾ ಉದ್ಯಮ ಮಾಡಬೇಕು ಮೊದಲದ ವಿಷಯದ ಬಗ್ಗೆ ಇಂಟರ್ನೆಟ್ ಸಹಾಯ ಪಡೆದು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಅಷ್ಟೇ ಅಲ್ಲ ಮನರಂಜನೆಗೆ ಸಂಬಂಧಪಟ್ಟ ಹಾಗೆ ಮಹಿಳೆಯರು ಟಿವಿ ಸೀರಿಯಲ್ ಅಥವಾ ಸಿನಿಮಾದ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡುತ್ತಾರೆ. ಜೊತೆಗೆ ಕೆಲವು ಜ್ಞಾನಾರ್ಜನೆಯ ವಿಷಯಗಳನ್ನು ಕೂಡ ಹುಡುಕುವುದು ಹುಡುಗಿಯರಿಗೆ ಹವ್ಯಾಸವಾಗಿ ಬಿಟ್ಟಿದೆ. ಹಾಗಾದರೆ ಹೇಳಿ ಸ್ನೇಹಿತರೆ ನೀವು ಯಾವ ವಿಷಯದ ಬಗ್ಗೆ ಗೂಗಲ್ನಲ್ಲಿ ಹೆಚ್ಚಾಗಿ ಹುಡುಕಾಟ ನಡೆಸುತ್ತೀರಾ?