ಇತ್ತೀಚಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಕಲಾವಿದರು ವಯಕ್ತಿಕ ಬದುಕಿನಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದ್ದಾರೆ. ಸಾಲು ಸಾಲು ಕಲಾವಿದರ ಮದುವೆ ಸಮಾರಂಭ ಸಿನಿ ರಂಗದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ! ತಮ್ಮ ತಮ್ಮ ನೆಚ್ಚಿನ ಕಲಾವಿದರ ಮದುವೆಗೆ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ. ಇದೀಗ ತಮಿಳು ಸಿನಿಮಾ ಹಗು ಕಿರುತೆರೆಯ ಮೂಲಕ ಹೆಸರು ಮಾಡಿರುವ ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿ ಸಪ್ತಪದಿ ತುಳಿದಿದ್ದಾರೆ.
ಹೊಸದಾಗಿ ದಾಂಪತ್ಯ ಜೀವನಕ್ಕೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವಿಂದರ್ ಕಾಲಿರಿಸಿದ್ದಾರೆ. ಇವರ ಮದುವೆ ವಿಷಯ ಕಾಲಿವುಡ್ ತುಂಬಾ ಸುದ್ದಿಯಾಗಿದೆ. ಇನ್ನು ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿ ಕಾಲಿವುಡ್ ನ ನಿರ್ಮಾಪಕ ರವಿಂದರ್ ಅವರನ್ನು ಮೆಚ್ಚಿ ಮದುವೆಯಾಗಿದ್ದಾರೆ. ಇತ್ತೀಚಿಗೆ ತಿರುಪತಿಯಲ್ಲಿ ಇವರಿಬ್ಬರೂ ವಿವಾಹ ಮಹೋತ್ಸವ ನೆರವೇರಿದೆ.
ಇನ್ನು ಇವರಿಬ್ಬರಿಗೂ ಇದು ಎರಡನೇ ಮದುವೆಯಂತೆ! ಇದೇ ಗುರುವಾರ ತಿರುಪತಿಯಲ್ಲಿ ನವ ವಧು ವರರು ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ತಮ್ಮ ಸಂತೋಷದ ಈ ಘಳಿಗೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ನನ್ನ ಬದುಕಿನಲ್ಲಿ ನಿಮ್ಮನ್ನು ಪಡೆಯಲು ಪುಣ್ಯ ಮಾಡಿದ್ದೆ.
ಲವ್ ಯು ಅಮ್ಮು’ ಅಂತ ಬರೆದು ಮಹಾಲಕ್ಷ್ಮಿ, ತಮ್ಮ ಮದುವೆಯ ಫೋಟೋವನ್ನು ಶೇರ್ ಮಾಡಿದ್ದಾರೆ. ನಿರ್ಮಾಪಕ ರವಿಂದರ್ ಚಂದ್ರಶೇಖರ್ ನಿರ್ಮಾಣದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲಿ ಮಹಾಲಕ್ಷ್ಮಿಯವರೆ ನಟಿಸಿದ್ದು ವಿಶೇಷ. ವಿಧಾರ್ಥ ಹಾಗೂ ವಿಕ್ರಮ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇನ್ನು, ಮಹಾಲಕ್ಷ್ಮೀಯವರು ಧಾರವಾಹಿಯಲ್ಲಿಯು ನಟಿಸಿದ್ದು.
ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಮಹಾರಸಿ ಎಂಬ ಧಾರಾವಾಹಿಯಲ್ಲಿಯೂ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಅಂದಹಾಗೆ ರವೀಂದರ್ ಚಂದ್ರಶೇಖರನ್ ಅವರು ಕೂಡ ಹಲವು ಸಿನಿಮಾಕ್ಕೆ ತಮ್ಮದೇ ಅದ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹಾಕಿದ್ದು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್ ವಾರೈ ಕಾಥಿರು’ ಮುಖ್ಯವಾದವು. ಇದೀಗ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ ಮಹಾಲಕ್ಷ್ಮಿ ಹಾಗೂ ರವಿಂದರ್ ನಿಜಜೀವನದಲ್ಲಿಯೂ ಒಟ್ಟಾಗಿ ಜೀವನ ನಡೆಸಲು ಮುಂದಾಗಿದ್ದಾರೆ.