ಇತ್ತೀಚೆಗೆ ಸ್ಟಾರ್ ನಟ ನಟಿಯರ ಮದುವೆಯ ಸಂಭ್ರಮ ಹೆಚ್ಚಾಗಿದೆ ಸೌತ್ ಇಂದ ಬಾಲಿವುಡ್ ವರೆಗೂ ಎಲ್ಲಾ ಸ್ಟಾರ್ ನಟ ನಟಿಯರು ದಾಂಪತ್ಯದ ಜೀವನಕ್ಕೆ ಕಾಲಿಡುತ್ತಿದ್ದಾರೆ ಇತ್ತೀಚಿಗಷ್ಟೇ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತ್ಯ ಜೀವನವನ್ನು ಆರಂಭಿಸಿದ್ದಾರೆ. ಇದರ ಜೊತೆಯಲ್ಲಿಯೇ ರಣಧೀರ್ ಸಿಂಗ್ ಹಾಗೂ ಆಲಯ ಭಟ್ ಅವರು ಕೂಡ ಮದುವೆಯಾಗಿ ಇದೀಗ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಇನ್ನು ಕನ್ನಡದಲ್ಲಿ ಸಾಕಷ್ಟು ಕಿರುತರೆ ದಾರಾವಾಹಿ ಕಲಾವಿದರು ಕೂಡ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ. ಇದೀಗ ಈ ಲಿಸ್ಟ್ ನಲ್ಲಿ ನಿತ್ಯ ಮೆನನ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಬಹುಭಾಷಾ ನಟಿಯಾದ ನಿತ್ಯ ಮೆನನ್ ಕನ್ನಡದಲ್ಲಿಯು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ವೈಯಕ್ತಿಕ ಜೀವನದ ಕುರಿತಂತೆ ಹೊಸ ಅಪ್ಡೇಟ್ಸ್ ಬಂದಿದೆ. ಅದೇನು ಗೊತ್ತಾ ಹೇಳ್ತಿವಿ ಮುಂದೆ ಓದಿ.
ನಿತ್ಯ ಮೆನನ್ ಅವರು ತಮ್ಮ ಪ್ರೀತಿಯ ಪಯಣಕ್ಕೆ ಮದುವೆಯ ಬಂದ ನೀಡುವುದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಲಯಾಳಂನ ಖ್ಯಾತ ವೆಬ್ಸೈಟ್ನಲ್ಲಿ ವರದಿಯೊಂದು ಪ್ರಕಟವಾಗಿದೆ. ನಿತ್ಯಾನಂದ ಮಲಯಾಳಂ ಸ್ಟಾರ್ ನಟರ ಒಬ್ಬರ ಜೊತೆ ಮದುವೆಯಾಗಲಿದ್ದಾರಂತೆ. ಸ್ನೇಹಿತರೊಬ್ಬರಿಂದ ಪರಿಚಯವಾಗಿ, ನಂತರ ಪ್ರೀತಿ ಮಾಡಿ ಈಗ ಮದುವೆಯಾಗಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿತ್ಯ ಮೆನನ್ ಯಾವಾಗ ಮದುವೆಯಾಗುತ್ತಾರೆ ಹಾಗೂ ಆ ಲಕ್ಕಿ ಮ್ಯಾನ್ ಯಾರು ಅನ್ನೋದು ಇವರಿಗೆ ಬಹಿರಂಗವಾಗಿಲ್ಲ.
ನಟಿ ನಿತ್ಯ ಮೆನನ್ ಅವರು ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ ನಟನೆಯ ‘ಭಿಮ್ಲಾ ನಾಯಕ್’ ಚಿತ್ರದಲ್ಲಿ ನಟಿಸಿದ್ದರು. ವಿಜಯ್ ಸೇತುಪತಿ ಜೊತೆ ಜೋಡಿಯಾಗಿ 19(1)(a) ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಟೀಸರ್ ರಿಲೀಸ್ ಆಗಿದೆ. ನಟಿ ನಿತ್ಯಾನನ್ ಅವರು 2006ರಲ್ಲಿ ‘7 ಓ ಕ್ಲಾಕ್’ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ರು. ‘ಜೋಶ್’, ‘ಐದೊಂದ್ಲ ಐದು’, ‘ಮೈನಾ’, ‘ಕೋಟಿಗೊಬ್ಬ-2’ ಮೊದಲದ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರಿಯರ ಮೆಚ್ಚುಗೆ ಪಡೆದಿದ್ದಾರೆ.
ಸದ್ಯ ನಿತ್ಯ ಮೆನನ್ ಅವರ ಸಿನಿಮಾ ಗಿಂತಲೂ ಹೆಚ್ಚಾಗಿ ಅವರ ಮದುವೆಯ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ಅವರ ಮದುವೆಯಾಗುವ ಹುಡುಗನ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೆ ಇದ್ದರೂ ಶೀಘ್ರದಲ್ಲಿಯೇ ನಿತ್ಯಾನನ್ ಹಸೆಮಣೆ ಏರಲಿದ್ದಾರೆ ಅನ್ನೋದು ಮಾತ್ರ ಖಚಿತ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.