PhotoGrid Site 1671597459112

ಮದುವೆಯ ನಂತರ ಮಹಿಳೆಯರು ಇದ್ದಕ್ಕಿದ್ದಂತೆ ದಪ್ಪವಾಗುತ್ತಾ ಹೋಗಲು ಅಸಲಿ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಸಂಕ್ಷಿಪ್ತ ವರದಿ!!

ಸುದ್ದಿ

ಮದುವೆಗೂ ಮೊದಲು ಹೆಣ್ಣು ಮಕ್ಕಳಿಗೆ ಸೌಂದರ್ಯದ ಬಗ್ಗೆ ಆಸಕ್ತಿ ಜಾಸ್ತಿ ಇರುತ್ತೆ ಅಂತ ಹೇಳಬಹುದು ಹಾಗಾಗಿ ತಮ್ಮ ದೇಹ ಹೀಗೆ ಇರಬೇಕು ಬಳುಕುವಂತೆ ತೆಳ್ಳಗೆ ಇರಬೇಕು ಮುಖದ ಸೌಂದರ್ಯ ಚೆನ್ನಾಗಿರಬೇಕು ಅಂತ ತರಾವರಿ ಸೌಂದರ್ಯ ವರ್ಧಕಗಳನ್ನು ಕೂಡ ಬಳಸುತ್ತಾರೆ ಜೊತೆಗೆ ವರ್ಕೌಟ್ ಜಿಮ್ ಅಂತ ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟುಕೊಳ್ಳುತ್ತಾರೆ. ಆದರೆ ಮದುವೆಯ ಬಳಿಕ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ.

ದೇಹದಲ್ಲಿ ತೂಕ ಹೆಚ್ಚಾಗುತ್ತದೆ ಹಾಗಾದರೆ ಯಾಕೆ ಮದುವೆ ಆದಮೇಲೆ ಹೆಣ್ಣು ಮಕ್ಕಳು ಅಷ್ಟು ದಪ್ಪ ಆಗುತ್ತಾರೆ ಅಥವಾ ದೇಹ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ಏಕೆ ಕೊಡುವುದಿಲ್ಲ ಎನ್ನುವ ಡೌಟ್ ಎಲ್ಲರಲ್ಲಿಯೂ ಇರುತ್ತೆ ಈ ಪ್ರಶ್ನೆಗೆ ನಾವು ಈ ಲೇಖನದ ಮೂಲಕ ಉತ್ತರ ನೀಡುತ್ತೇವೆ. ಸಾಮಾನ್ಯವಾಗಿ ಮದುವೆಯಾದ ನಂತರ ಹೆಣ್ಣು ಮಕ್ಕಳು ದಪ್ಪ ಆಗೋದು ಲೈಂ-ಗಿ-ಕ ಕ್ರಿಯೆಯ ಮೂಲಕ ಎಂದೆ ಜನಭಾವಿಸುತ್ತಾರೆ.

ಲೈಂ-ಗಿ-ಕ ಕ್ರಿಯೆ ಎನ್ನುವುದು ಗಂಡು ಹೆಣ್ಣಿನ ದಾಂಪತ್ಯ ಜೀವನದ ಒಂದು ಭಾಗ ಅಷ್ಟೇ. ಅದನ್ನ ಹೊರತುಪಡಿಸಿ ದೇಹದಲ್ಲಿ ತೂಕ ಹೆಚ್ಚಾಗುವುದಕ್ಕೆ ಕಡಿಮೆಯಾಗುವುದಕ್ಕೆ ಲೈಂ-ಗಿಕ ಕ್ರಿ-ಯೆ ಕಾರಣವಾಗುವುದಿಲ್ಲ. ಆದರೆ ಮದುವೆಯಾದ ನಂತರ ಹೆಣ್ಣು ಮಕ್ಕಳು ಸ್ವಲ್ಪ ದಪ್ಪ ಆಗುತ್ತಾರೆ ಎನ್ನುವುದಂತೂ ಸುಳ್ಳಲ್ಲ. ಇದಕ್ಕೆ ಕಾರಣ ಏನಂದ್ರೆ, ಮೊದಲನೇದಾಗಿ ತಾವು ಹುಟ್ಟಿದ ಮನೆಯನ್ನ ತೊರೆದು ಇನ್ನೊಂದು ಮನೆಗೆ ಸೇರಿದ ಹೆಣ್ಣು ಮಕ್ಕಳ ಆಹಾರ ಅಭ್ಯಾಸಗಳಲ್ಲಿ ಬದಲಾವಣೆ ಆಗುತ್ತದೆ.

ಆ ಸ್ಥಳಕ್ಕೆ ಹೊಂದಿಕೊಂಡು ಅಲ್ಲಿಯದೆ ಆಹಾರ ಸೇವಿಸಬೇಕಾಗುತ್ತದೆ ಅದರಲ್ಲೂ ಕೆಲವು ಕೊಬ್ಬಿನ ಅಂಶ ಇರುವ ಆಹಾರ ಸೇವಿಸಿದರೆ ದೇಹದಲ್ಲಿ ಬೊಜ್ಜು ಉಂಟಾಗುವುದು ಸಹಜ ಇನ್ನು ಮದುವೆಯಾಗಿ ಮಕ್ಕಳು ಹುಟ್ಟಿದ ಮೇಲಂತೂ ಹೆಣ್ಣು ಮಕ್ಕಳಿಗೆ ಉಸಿರಾಡಿಸುವುದಕ್ಕೂ ಕೂಡ ಸರಿಯಾಗಿ ಪುರುಸೊತ್ತು ಇರುವುದಿಲ್ಲ ಅಂದರೆ ತಪ್ಪಲ್ಲ.

ಅಂತಹ ಸಂದರ್ಭದಲ್ಲಿ ತಮ್ಮ ದೇಹದ ಸೌಂದರ್ಯದ ಬಗ್ಗೆ ಅವರಿಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ದೇಹ ದಪ್ಪಗಾದರೆ ಆಶ್ಚರ್ಯವಲ್ಲ. ಕೆಲಸದ ಒತ್ತಡ ಹೆಚ್ಚಾಗುತ್ತಿದ್ದಂತೆ ಮಹಿಳೆಯರಿಗೆ ತಮ್ಮ ದೇಹದ ಬಗ್ಗೆ ಕಾಳಜಿ ಮಾಡಲು ಸಾಧ್ಯವಾಗುವುದಿಲ್ಲ ಮಕ್ಕಳ ಲಾಲನೆ ಪಾಲನೆ ಪತಿಯ ಸೇವೆ ಮನೆಯವರ ಕೆಲಸ ಅಂತ ಅದರಲ್ಲಿ ಬ್ಯುಸಿ ಆಗುತ್ತಾರೆ ಹಾಗಾಗಿ ಯೋಗ, ವ್ಯಾಯಾಮ ಮೊದಲಾದವುಗಳನ್ನು ಮಾಡಲು ಅವರಿಗೆ ಸಮಯವೇ ಇರುವುದಿಲ್ಲ.

ಇನ್ನು ಕೆಲ ಹೆಣ್ಣು ಮಕ್ಕಳು ಮದುವೆ ಆಯ್ತಲ್ಲ ಇನ್ನೆಲ್ಲ ಯಾಕೆ ಬಿಡು ಅಂತ ಮದುವೆಗೂ ಮೊದಲು ಇದ್ದ ದೇಹ ಸೌಂದರ್ಯದ ಯೋಚನೆಯನ್ನು ಬಿಟ್ಟುಬಿಡುತ್ತಾರೆ. ಹೀಗಾದಾಗ ಮಹಿಳೆಯರು ದಪ್ಪಗಾಗುತ್ತಾರೆ. ತೆಳ್ಳಗಿನ ಸುಂದರವಾದ ದೇಹವನ್ನು ಕಳೆದುಕೊಳ್ಳುತ್ತಾರೆ ಅದನ್ನು ಹೊರತುಪಡಿಸಿ ಹೆಣ್ಣು ಮಕ್ಕಳು ಆರಾಮಾಗಿ ಕುಳಿತು ತಿಂದು ದಪ್ಪಗಾಗುವುದಿಲ್ಲ ಅಥವಾ ಲೈಂಗಿಕ ಕ್ರಿಯೆಯಿಂದ ದೇಹ ತೂಕ ಜಾಸ್ತಿ ಆಗುವುದಿಲ್ಲ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *