ಸಾಮಾನ್ಯವಾಗಿ ಜೀವನದಲ್ಲಿ ಕೆಲವು ತಪ್ಪುಗಳನ್ನ ಮಾಡಿದ್ರೆ ಅದನ್ನ ಸರಿಪಡಿಸಿಕೊಳ್ಳಬಹುದು ಆದರೆ ಮದುವೆ ವಿಷಯದಲ್ಲಿ ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕು. ಸರಿಯಾದ ರೀತಿಯಲ್ಲಿ ಸರಿಯಾದವರ ಜೊತೆ ಜೋಡಿ ಆದರೆ ಮಾತ್ರ ಆ ಮದುವೆ ದೀರ್ಘಕಾಲ ನಿಲ್ಲುತ್ತೆ. ಇಲ್ಲವಾದರೆ ಮದುವೆ ಎನ್ನುವ ಸಂಬಂಧಕ್ಕೆ ಯಾವ ಅರ್ಥವೂ ಇರುವುದಿಲ್ಲ. ಇಂದು ತಮ್ಮ ಶೋಕಿಗೆ ಮದುವೆಯಾಗುವವರೇ ಹೆಚ್ಚು. ಅದರಲ್ಲೂ ಬುದ್ಧಿ ಬರುವುದಕ್ಕೂ ಮೊದಲೇ ಟೀನೇಜ್ ವಯಸ್ಸಿನಲ್ಲಿಯೇ ಮದುವೆಯಾಗೋಕೆ ಹೊರಟ ಕೆಲವರು ನಂತರ ತಮ್ಮ ಜೀವನವನ್ನು ನರಕವಾಗಿಸಿಕೊಳ್ಳುತ್ತಾರೆ. ಇಂತಹ ಒಂದು ಘಟನೆಯ ಬಗ್ಗೆ ನಾವೆಂದು ಹೇಳುತ್ತಿದ್ದೇವೆ.
ಸಾಮಾನ್ಯವಾಗಿ 20 ವರ್ಷದ ನಂತರ ಮದುವೆಯಾದರೆ ಮಾತ್ರ ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತೆ ಇಲ್ಲವಾದರೆ ಅಂತಹ ಮದುವೆ ಕೇವಲ ಆಕರ್ಷಣೆಯಾಗಿರುತ್ತೆ ಅಷ್ಟೇ. ದೆಹಲಿ ನಿವಾಸಿಗಳಾದ ಸಾಹಿಲ್ ಚೋಪ್ರಾ ಹಾಗೂ ನ್ಯಾನ್ಸಿ ಇಬ್ಬರು ಪ್ರೀತಿಸಿ ಮದುವೆಯಾದವರು. ನ್ಯಾನ್ಸಿಗೆ ಟೀನೇಜ್ ನಲ್ಲಿ ಇರುವಾಗಲೇ ಉದ್ಯಮಿ ಆಗಿದ್ದ ಸಾಹಿಲ್ ಜೊತೆ ಪ್ರೇಮಾಂಕುರವಾಗಿತ್ತು.
2016 17 ರಲ್ಲಿ ಪ್ರೀತಿಸುತ್ತಿದ್ದ ಈ ಜೋಡಿ ಎರಡು ವರ್ಷಗಳ ನಂತರ ಮದುವೆಯಾಗುವ ನಿರ್ಧಾರ ಮಾಡಿದ್ರು. ನ್ಯಾನ್ಸಿ ಮನೆಯವರಿಗೆ ಗೊತ್ತಾದ್ರೆ ಒಪ್ಪೋದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಹೇಳದೆ ಸಾಹಿಲ್ 2018 ರಲ್ಲಿ ನ್ಯಾನ್ಸಿಯನ್ನ ಮದುವೆಯಾದ. ಮಗ ಪ್ರೀತಿಸಿದ ಹುಡುಗಿ ಎನ್ನುವ ಕಾರಣಕ್ಕೆ ಸಾಹಿಲ್ ಮನೆಯಲ್ಲಿ ಈ ಮದುವೆಯನ್ನು ಒಪ್ಪಿಕೊಂಡರು. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕ್ರಮೇಣ ಸಾಹಿಲ್ ಹಾಗೂ ನ್ಯಾನ್ಸಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. ಇಬ್ಬರು ಯಾವಾಗಲೂ ಜಗಳ ಆಡೋದಕ್ಕೆ ಶುರು ಮಾಡಿದರು. ಕೆಲವೊಮ್ಮೆ ಈ ಜಗಳ ತಾರಕಕ್ಕೆ ಹೋಗುತ್ತಿತ್ತು.
ಒಮ್ಮೆ, ಸಾಹಿಲ್ ತನ್ನ ಪತ್ನಿಯನ ಪಾಣಿಪತ್ ಗೆ ಕಾರ್ ನಲ್ಲಿ ಕರೆದುಕೊಂಡು ಹೊರಟಿದ್ದ. ಈ ಕಾರ್ ಅನ್ನು ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಸಾಹಿಲ್ ಸ್ನೇಹಿತ ಶುಭಂ. ಕಾರ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೂ ಸಾಹಿಲ್ ಹಾಗೂ ನಾನ್ಸಿ ಜೊತೆ ಜಟಾಪಟಿ ನಡೆದಿದೆ. ಕೊನೆಗೆ ಶೌಚಾಲಯಕ್ಕೆ ಎಂದು ನಾನ್ಸಿ ಕೆಳಗಿಳಿದಾಗ ಹಿಂದುಗಡೆಯಿಂದ ಗುಂ-ಡೇಟು ಹಾರಿಸಿ ಸಾಹಿಲ್ ನ್ಯಾನ್ಸಿಯನ್ನು ಇನ್ನಿಲ್ಲವಾಗಿಸಿದ್ದ. ಪಾಣಿಪತ್ ನಲ್ಲಿಯೇ ಆಕೆಯನ್ನು ಮಣ್ಣುಮಾಡಿ ಮನೆಗೆ ಹಿಂತಿರುಗಿದ್ದ ಸಾಹಿಲ್. ನ್ಯಾನ್ಸಿ ಕೆಲಸದ ಮೇಲೆ ದೆಹಲಿಯಿಂದ ಆಚೆ ಹೋಗಿದ್ದಾಳೆ ಅಂತ ಮನೆಯವರನ್ನ ನಂಬಿಸಿದ್ದ.
ಕೆಲವು ದಿನಗಳ ನಂತರವೂ ನಾನ್ಸಿ ಕಾಣಿಸದೆ ಇದ್ದಾಗ ಆಕೆಯ ಬಗ್ಗೆ ತನಿಖೆ ಆರಂಭವಾಗುತ್ತೆ. ನ್ಯಾನ್ಸಿ ಮನೆಯವರು ಆಕೆ ಕಾ’ಣೆಯಾದ ದಿನ ಸಾಹಿಲ್ ಜೊತೆ ಪಾಣಿಪತ್ ಗೆ ಹೋದ ಫೋಟೋವನ್ನು ಪೊಲೀಸರಿಗೆ ನೀಡಿ ದೂ-ರು ದಾಖಲಿಸುತ್ತಾರೆ. ನಂತರ ಪೊಲೀಸ್ ತನಿಖೆಯಲ್ಲಿ ಸಾಹಿಲ್ ಕೊ-ಲೆ ಮಾಡಿರುವುದು ಗೊತ್ತಾಗುತ್ತೆ. ಇದು ವ’ರದಕ್ಷಿಣೆ ವಿರುದ್ಧ ಮಾಡಿದ ಹ-ತ್ಯೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ನಿಜವಾದ ಸತ್ಯ ಬೇರೆನೇ ಇರುತ್ತೆ. ಪೊಲೀಸರು ಸಾಹಿಲ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ಇರುವ ಸತ್ಯ ಹೇಳುತ್ತಾನೆ.
ನ್ಯಾನ್ಸಿ ಮದುವೆಯಾದ ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿಯ ಜೊತೆ ಅ-ಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆಕೆಯ ಮೊಬೈಲ್ ನಲ್ಲಿ ನೋಡಬಾರದ ಕೆಲವು ಫೋಟೋಗಳನ್ನು ನೋಡಿ ಸಾಹಿಲ್ ಸಿಟ್ಟಿಗೆರುತ್ತಾನೆ. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಆಗಾಗ ಕಿತ್ತಾಟ ಆಗುತ್ತಿತ್ತು. ಕೊನೆಗೆ ಬೇಸತ್ತ ಸಾಹಿಲ್ ನಾನ್ಸಿಯನ್ನ ಮು’ಗಿಸುವ ಸ್ಕೆ-ಚ್ ಹಾಕುತ್ತಾನೆ. ಸ್ನೇಹಿತನ ಜೊತೆ ಸೇರಿ ಪಾಣಿಪತ್ ಗೆ ನ್ಯಾನ್ಸಿಯನ್ನ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ ಸಾಹಿಲ್, ಅಲ್ಲಿಯೇ ಆಕೆ ಕೊನೆ ಉ’ಸಿರೆಳೆಯುವಂತೆ ಮಾಡುತ್ತಾನೆ.