ಪ್ರೀತಿಗೆ ಯಾವ ಬೇಧವೂ ಇಲ್ಲ. ಜಾತಿ, ಧರ್ಮ, ವರ್ಣ ಹೀಗೆ ಯಾವ ಕಟ್ಟುಪಾಡುಗಳು ಇಲ್ಲ. ಅದೆಷ್ಟೋ ಬಾರಿ ಪ್ರೀತಿಗೆ ಯಾರು ಎಷ್ಟೇ ವಿರೋಧ ಮಾಡಿದರು ಅದನ್ನ ಲೆಕ್ಕಿಸದೆ ಹೇಗೋ ಒಂದಾಗುವ ಜೋಡಿಯನ್ನು ನಾವು ನೋಡಿರುತ್ತೇವೆ. ಪ್ರತಿಯೊಬ್ಬರ ಮದುವೆ ಹಿರಿಯರು ಹೇಳುವಂತೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅದೆಷ್ಟೋ ಸಂಬಂಧಗಳಲ್ಲಿ ಹುಡುಗ ಹುಡುಗಿಗೆ ಯಾವ ವಿಷಯದಲ್ಲಿ ತಾಳಮೇಳ ಇಲ್ಲದೆ ಇದ್ದರೂ ಸಂಸಾರ ಶುರುವಾಗುತ್ತೆ.
ಬಹುಶಃ ಇತ್ತೀಚಿಗೆ ಸಪ್ತಪದಿ ತುಳಿದ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಜೋಡಿ ಇದಕ್ಕೆ ಸಾಕ್ಷಿ. ನೋಡುವುದಕ್ಕೆ ಅತ್ಯಂತ ಮುದ್ದಾಗಿರುವ ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿ ತನಗೆ ಯಾವ ರೀತಿಯಲ್ಲಿಯೂ ಸರಿಹೊಂದದ ನಿರ್ಮಾಪಕ ರವಿಂದರ್ ಚಂದ್ರಶೇಖರನ್ ಅವರನ್ನು ಮದುವೆಯಾಗಿರುವ ಬಗ್ಗೆ ಸಾಕಷ್ಟು ಟ್ರೂಲ್ ಗಳನ್ನು ಕೂಡ ಮಾಡಿದ್ದಾರೆ.
ಜನ ಈ ಮದುವೆ ಮಿಸ್ ಮ್ಯಾಚ್ ಎಂದೇ ಟೀಕೆ ಮಾಡಿದ್ದಾರೆ. ಆದರೆ ನಟಿ ಮಹಾಲಕ್ಷ್ಮಿಯಾಗಲಿ ಅಥವಾ ನಿರ್ಮಾಪಕ ರವೀಂದರ್ ಆಗಲಿ ಈ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಇಬ್ಬರೂ ಖುಷಿಯಾಗಿಯೇ ಹಸೆಮಣೆ ಏರಿ ಮದುವೆಯ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್ ಪ್ರೀತಿಸಿ ಮದುವೆಯಾದವರು ಎಂಬುದನ್ನ ನಂಬಲೇಬೇಕು ಇವರಿಬ್ಬರ ಲವ್ ಸ್ಟೋರಿ ಹಿಂದೆ ಇಂಟರೆಸ್ಟಿಂಗ್ ಕಥೆ ಇದೆ.
ಮಹಾಲಕ್ಷ್ಮಿ ನಿರೂಪಕಿ ಹಾಗೂ ನಟಿ. ಸಾಕಷ್ಟು ತೆಲುಗು ಧಾರಾವಾಹಿಗಳಲ್ಲಿ ನಟಿಸಿದವರು ಮಹಾಲಕ್ಷ್ಮಿ. ಇನ್ನು ಧಾರಾವಾಹಿಯ ನಿರ್ಮಾಪಕರಾಗಿರುವ ರವೀಂದರ್ ಧಾರವಾಹಿ ಮಹಾಲಕ್ಷ್ಮಿ ಅವರನ್ನು ಭೇಟಿಯಾಗಿದ್ದವರು. ಮೊದಲಿಗೆ ಒಟ್ಟಾಗಿ ಕೆಲಸ ಮಾಡಿದ ರವೀಂದರ್ ಹಾಗೂ ಮಹಾಲಕ್ಷ್ಮಿ ನಂತರ ಸ್ನೇಹಿತರಾದರು. ಈ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತು.
ಮಹಾಲಕ್ಷ್ಮಿ ಅವರನ್ನು ನೋಡಿ ಇಷ್ಟಪಟ್ಟ ರವೀಂದರ್, ನಿರೂಪಕಿ ಮಹಾಲಕ್ಷ್ಮಿ ನನ್ನನ್ನು ಮದುವೆಯಾಗುತ್ತೀಯಾ ನೀನು ಅಂದರೆ ನನಗೆ ಇಷ್ಟ ಅಂತ ಸಂದೇಶವನ್ನು ಕಳುಹಿಸಿದ್ದರಂತೆ. ಮಹಾಲಕ್ಷ್ಮಿಗೆ ಈ ವಿಷಯದ ಬಗ್ಗೆ ಆಶ್ಚರ್ಯವಾಗಿತ್ತು. ಸ್ವಲ್ಪ ಸಮಯ ತೆಗೆದುಕೊಂಡ ಮಹಾಲಕ್ಷ್ಮಿ ಕೊನೆಗೆ ರವೀಂದರ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಕೊನೆಗೆ ಈ ಪ್ರೇಮ್ ಕಹಾನಿಗೆ ಮದುವೆ ಎನ್ನುವ ಅಧಿಕೃತ ಮುದ್ರೆ ಬಿದ್ದಿದೆ.
ಇನ್ನು ಮದುವೆ ಆಗುತ್ತಿದ್ದಂತೆ ಮಹಾಲಕ್ಷ್ಮಿಯವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಕೂಡ ವೈರಲ್ ಆಗಿದೆ. ’ನನ್ನ ಹೃದಯವನ್ನು ಕದ್ದ ಕಳ್ಳ ಅದನ್ನ ಜೋಪಾನವಾಗಿಟ್ಟುಕೋ’ ಅಂತ ನಟಿ ಮಹಾಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ರು. ಇದನ್ನ ನೋಡಿದವರು ರವೀಂದರ್ ಅವರೇ ಮಹಾಲಕ್ಷ್ಮಿಗೆ ಪ್ರಪೋಸ್ ಮಾಡಿದ್ದು ಅಂತ ಗೆಸ್ ಮಾಡಿದ್ದಾರೆ. ಇದೀಗ ಮಹಾಲಕ್ಷ್ಮಿ ಅವರ ಪೋಸ್ಟ್ ನಿಂದಾಗಿ ಇದು ಸತ್ಯ ಎಂಬುದು ಕೂಡ ಸಾಬೀತಾಗಿದೆ.
ಮಹಾಲಕ್ಷ್ಮಿ ಅವರಿಗೂ ಇದು ಮೊದಲ ಮದುವೆಯೆಲ್ಲ ಈಗಾಗಲೇ ಅವರಿಗೆ ಮದುವೆಯಾಗಿತ್ತು. ಆದರೆ ಆ ಸಂಬಂಧದಿಂದ ದೂರ ಇರುವ ಮಹಾಲಕ್ಷ್ಮಿ ಇದೀಗ ತಾನು ಪ್ರೀತಿಸಿದ ನಿರ್ಮಾಪಕ ರವೀಂದರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಒಟ್ಟಿನಲ್ಲಿ ವೃತ್ತಿ ಜೀವನದಲ್ಲಿ ಒಂದಾಗಿದ್ದ ಜೋಡಿ ನಿಜ ಜೀವನದಲ್ಲಿಯೂ ಜೊತೆಯಾಗಿ ಅಭಿಮಾನಿಗಳೊಂದಿಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸ್ನೇಹಿತರೆ, ನವ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ!