ಈ ಜಗತ್ತಿನಲ್ಲಿ ಪ್ರತಿದಿನ ಏನಾದರೂ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂತಹ ವಿಚಿತ್ರಗಳು ನಮ್ಮ ಗಮನಕ್ಕೆ ಬಂದಾಗ ಅಚ್ಚರಿಯಾಗುತ್ತದೆ. ಕೆಲವೊಂದು ಪ್ರಾಕೃತಿಕ, ನೈಸರ್ಗಿಕ ವಾದ ವೈಚಿತ್ರ್ಯಗಳು ನಡೆದರೆ ಇನ್ನು ಕೆಲವು ಮನುಷ್ಯರೇ ಸೃಷ್ಟಿಸುವಂತಹ ಅಚ್ಚರಿ. ಇನ್ನು ಈ ಮನುಷ್ಯನಿಗೆ ಲಾಲಸೆ ಅನ್ನುವುದು ಬಂದರೆ ಮುಗಿದೇ ಹೋಯಿತು. ಅದರಿಂದಾಗಿ ಅವರ ಜೀವನವೇ ನಾಶ ಆಗಿ ಬಿಡುತ್ತದೆ ಎಂದು ಗೊತ್ತಿದ್ದರೂ ಆಸೆಯ ಪರಮಾವಧಿ ಮೀರಿ ಬಿಡುತ್ತಾರೆ.
ಈ ಹೆಚ್ಚಿನ ಜನರಿಗೆ ಸಂಸಾರ ಅನ್ನುವುದನ್ನು ಹೇಗೆ ನಡೆಸಿಕೊಂಡು ಹೋಗಬೇಕೆನ್ನುವ ಕಿಂಚಿತ್ ಪರಿಜ್ಞಾನ ಕೂಡ ಇರುವುದಿಲ್ಲ.ಗಂಡ ಹೆಂಡತಿ ಸಂಬಂಧ ಅನ್ನುವುದು ತುಂಬಾ ಪವಿತ್ರವಾದ ಸಂಬಂಧ. ಪರಸ್ಪರ ಅದೇನೇ ಸಮಸ್ಯೆ ಇದ್ದರೂ ಹೇಳಿಕೊಂಡು ಇತ್ಯರ್ಥ ಮಾಡಿಕೊಂಡರೆ ಅದು ಸುಖ ಸಂಸಾರ ಆಗುತ್ತದೆ. ಹೆಚ್ಚಿನ ದಂಪತಿಗಳು ಹೆಚ್ಚಿನ ವಿಷಯಗಳನ್ನು ಗುಟ್ಟಾಗಿ ಇಡುತ್ತಾರೆ. ಅದರಿಂದಾಗಿ ಮುಂದೆ ಒಂದು ದಿನ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಇದೇ ರೀತಿಯ ಒಂದು ಘಟನೆ ಇಂದೋರ್ ನಲ್ಲಿ ನಡೆದಿದೆ. ಹೌದು 2019ರಲ್ಲಿ ವಾಮಿನಿ ಎಂಬ ಮಹಿಳೆಯು ಬಹಳನೇ ಅದ್ದೂರಿಯಾಗಿ ಪಿತಶ್ ಎಂಬುವ ವ್ಯಕ್ತಿಯನ್ನು ಮದುವೆಯಾಗಿದ್ದರು. ಇಬ್ಬರದು ಕೂಡ ಬಹಳ ಶ್ರೀಮಂತ ಕುಟುಂಬ ಆಗಿತ್ತು. ವಾಮಿನಿಯು ಬರೋಬ್ಬರಿ 25 ಲಕ್ಷ ವರದಕ್ಷಿಣೆ ಕೊಟ್ಟು ದೊಡ್ಡ ಪ್ಯಾಲೇಸ್ ನಲ್ಲಿ ಮದುವೆ ಆಗಿದ್ದರು. ಇಬ್ಬರು ನೋಡಲು ಕೂಡ ಸೂಪರ್ ಜೋಡಿ ಅನ್ನಿಸಿಕೊಂಡಿದ್ದರು.
ಹೀಗೆ ಮದುವೆ ಆದ ಇಬ್ಬರಿಗೂ ಪಿತಶ್ ಮನೆಯಲ್ಲಿ ಅದ್ದೂರಿಯಾಗಿ ಪ್ರಸ್ತದ ವ್ಯವಸ್ಥೆ ಮಾಡಲಾಗಿತ್ತು. ಆ ದಿನ ವಾಮಿನಿ ನಾಚಿಕೊಂಡು ಕೂತಿದ್ದರೆ ಪಿತಶ್ ಮಾತ್ರ ಆಕೆಯ ಹತ್ತಿರ ಕೂಡ ಹೋಗದೆ ಮಲಗಿ ಬಿಟ್ಟಿದ್ದ. ಮೊದಲ ರಾತ್ರಿಯೇ ಗಂಡನ ಈ ವರ್ತನೆ ಆಕೆಗೆ ಬೇಸರ ತರಿಸಿತ್ತು. ಆದರೆ ಏನೂ ಹೇಳದೆ ಸುಮ್ಮನೆ ಇದ್ದಳು. ವಾಮಿನಿ ಅದೆಷ್ಟೋ ಆಸೆ ಆಕಾಂಕ್ಷೆಗಳೊಂದಿಗೆ ಗಂಡನ ಮನೆಗೆ ಬಂದಿದ್ದಳು.
ಆದರೆ ಪತಿಗೆ ತನ್ನ ಮೇಲೆ ಯಾವುದೇ ಆಸಕ್ತಿ ಇಲ್ಲದನ್ನು ಕಂಡು ಆಕೆ ತುಂಬಾ ನೋವು ಅನುಭವಿಸುತ್ತಿದ್ದಳು. ದಿನ ಕಳೆದಂತೆ ಸ್ವತಃ ವಾಮಿನಿಯೇ ಪಿತಶ್ ಮೈ ಮೇಲೆ ಬಿದ್ದು ಆತನನ್ನು ಆಕರ್ಷಿಸಲು ಪ್ರಯತ್ನ ಪಟ್ಟಿದ್ದಳು. ಆದರೆ ಹಾಗೆ ಹೋದಾಗಲೆಲ್ಲ ಪಿತೇಶ್ ಆಕೆಯನ್ನು ಗದರಿಸಿ ವಾಪಸ್ ಕಳಿಸುತ್ತಿದ್ದ. ಹೀಗೆ ಮದುವೆಯಾಗಿ ಮೂರು ವರ್ಷಗಳು ಕಳೆದರೂ ಒಂದು ಬಾರಿ ಕೂಡ ಇಬ್ಬರೂ ಪರಸ್ಪರ ಸೇರಿರಲಿಲ್ಲ.
ಈ ಬಗ್ಗೆ ವಾಮಿನಿ ತನ್ನ ಮನೆಯವರಿಗೂ ತಿಳಿಸಿದ್ದಳು. ಇದರಿಂದ ಪಿತಶ್ ತುಂಬಾ ಭಯ ಪಟ್ಟಿದ್ದ. ಎಲ್ಲಿ ತನ್ನ ಪತ್ನಿ ತಮ್ಮ ವಿಷಯಗಳನ್ನು ಎಲ್ಲರಿಗೂ ಹೇಳುತ್ತಾಳೋ ಎಂಬ ಭಯದಿಂದ ಪಿತಶ್ ಒಂದು ಉಪಾಯ ಮಾಡಿದ್ದ. ತನ್ನ ಹೆಂಡತಿಗೆ 20 ಲಕ್ಷ ವರದಕ್ಷಿಣೆ ತರುವವರೆಗೂ ನನ್ನ ಮನೆಗೆ ಕಾಲಿಡಬಾರದು ಎಂಬ ಬೆದ- ರಿಕೆ ಹಾಕಿ ತವರು ಮನೆಗೆ ಕಳಿಸಿಬಿಟ್ಟ. ಇದು ವಾಮಿನಿಗೆ ದೊಡ್ಡ ಶಾಕ್ ಕೊಟ್ಟಿತ್ತು.
ಅಸಲಿಗೆ ತನ್ನ ಗಂಡ ಈ ರೀತಿ ಮಾಡಲು ಕಾರಣ ಏನು ಎಂಬುದನ್ನು ಕೂಡ ತಿಳಿಯದ ವಾಮಿನಿ ಕೊನೆಗೆ ವಿಧಿ ಇಲ್ಲದೆ ಪೊಲೀ-ಸ್ ಸ್ಟೆಷನ್ ಹತ್ತಿ ತನ್ನ ಗಂಡನ ವರ್ತನೆ ಹಾಗೂ ವರದಕ್ಷಿಣೆ ಕಿರುಕುಳದ ಬಗ್ಗೆ ದೂರು ನೀಡಿದ್ದಳು. ಈ ಘಟ-ನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.