ಎಲ್ಲ ಜೋಡಿಯು ನೋಡುವುದಕ್ಕೆ ಪರ್ಫೆಕ್ಟ್ ಆಗಿ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಇಬ್ಬರ ಮನಸ್ಸು ಹೊಂದಾಣಿಕೆ ಆದ್ರೆ ಸಾಕು ನೋಡುವುದಕ್ಕೆ ಹೇಗಿದ್ರೂ ಓಕೆ ಎನ್ನುವವರಿದ್ದಾರೆ. ಹೀಗೆ ಹಲವರು ಭಾವಿಸುತ್ತಾರೆ ಕೂಡ. ಜೋಡಿ ಮಿಸ್ ಮ್ಯಾಚ್ ಆಗಿದ್ದರೂ ಪರವಾಗಿಲ್ಲ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬೇಕು ಎನ್ನುವ ಅಭಿಪ್ರಾಯ ಹಲವರಲ್ಲಿ ಇರುತ್ತೆ.
ಅದೇ ರೀತಿಯ ಮಿಸ್ ಮ್ಯಾಚ್ ಜೋಡಿ ಸಿನಿಮಾ ಇಂಡಸ್ಟ್ರಿಯಲ್ಲಿಯು ಕೂಡ ಇತ್ತೀಚಿಗೆ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಅದೇ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಅವರ ಜೋಡಿ. ನಿರ್ಮಾಪಕ ರವೀಂದರ್ ನೋಡುವುದಕ್ಕೆ ಬಹಳ ದಪ್ಪ. ಆದರೆ ಅವರನ್ನು ಮದುವೆಯಾದ ನಟಿ ಮಹಾಲಕ್ಷ್ಮಿ ಮಾತ್ರ ಸಾಕ್ಷಾತ್ ಮಹಾಲಕ್ಷ್ಮಿ ತರಾನೇ ಇದ್ದಾರೆ.
ಹಾಗಾಗಿ ಈ ತದ್ವಿರುದ್ಧವಾಗಿರುವ ಜೋಡಿಯನ್ನು ನೋಡಿ ಜನ ಸಿಕ್ಕಾಪಟ್ಟೆ ಬೈದುಕೊಂಡಿದ್ದರು. ಬಣ್ಣದಲ್ಲಾಗಲಿ ಆಕಾರದಲ್ಲಾಗಲಿ ಯಾವುದರಲ್ಲಿಯೂ ಇವರಿಬ್ಬರ ನಡುವೆ ಹೊಂದಾಣಿಕೆ ಆಗುವುದಿಲ್ಲ ಅಂತದ್ರಲ್ಲಿ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಅಂದ್ರೆ ಈ ಸತ್ಯವನ್ನ ಜನರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ.
ಅದರಲ್ಲೂ ರವೀಂದರ್ ಗೆ ಹಾಗೂ ಮಹಾಲಕ್ಷ್ಮಿಗೆ ಇದು ಎರಡನೆಯ ಮದುವೆ. ಮೊದಲನೆಯ ಮದುವೆಯಲ್ಲಿ ಇಬ್ಬರೂ ಸುಖ, ನೆಮ್ಮದಿ ಕಾಣದೆ ವಿ-ಚ್ಛೇ-ದ-ನ ಪಡೆದುಕೊಂಡವರು. ಸಿನಿಮಾ ಶೂಟಿಂಗ್ ಒಂದರಲ್ಲಿ ರವೀಂದರ್ ಅವರು ನಟಿ ಲಕ್ಷ್ಮಿ ಅವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಇವರಿಬ್ಬರ ಸ್ನೇಹ ಪ್ರೀತಿಯಾಗಿ ನಂತರ ಮದುವೆಯಾಗಿದ್ದಾರೆ.
ಇವರ ಮದುವೆ ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಜೋಡಿ ಫಾರಿನ್ ಗೆ ಹೋಗಿ ಹನಿಮೂನ್ ಕೂಡ ಮುಗಿಸಿಕೊಡು ಬಂದಿತ್ತು. ನಿರ್ಮಾಪಕ ರವೀಂದರ್ ಮದುವೆಯಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ತನ್ನ ಹೆಂಡತಿಗೆ ಅಡುಗೆ ಮಾಡಿ ಶೂಟಿಂಗ್ ಸೆಟ್ ಗೆ ತೆಗೆದುಕೊಂಡು ಹೋಗುವುದರಿಂದ ಹಿಡಿದು ಅವರಿಗೆ ವಿಶೇಷವಾದ ಗಿಫ್ಟ್ ಕೊಟ್ಟಿದ್ದನ್ನು ಕೂಡ ಪೋಸ್ಟ್ ಮಾಡಿ ತಮ್ಮ ಸಂತೋಷವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಇತ್ತೀಚಿಗೆ ರವೀಂದರ್ ಅವರು ತನ್ನ ಪತ್ನಿ ಮಹಾಲಕ್ಷ್ಮಿ ಗೆ ಅತ್ಯಂತ ದುಬಾರಿಯಾದ ಕಾರ್ ಒಂದನ್ನು ಗಿಫ್ಟ್ ಆಗಿ ನೀಡಿದ್ದರಂತೆ. ಈ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಹರಿದಾಡುತ್ತಿದೆ.
ಇನು ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಅವರ ಮದುವೆಯ ಈ ಕೇವಲ ಎರಡು ತಿಂಗಳು ಕಳೆದಿದೆ ಆಗಲೇ ಇವರಿಬ್ಬರೂ ಗುಡ್ ನ್ಯೂಸ್ ನೀಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದ ತುಂಬಾ ಹರಿದಾಡುತ್ತಿದೆ. ಆದರೆ ಈ ಬಗ್ಗೆ ರವೀಂದರ್ ಆಗಲಿ ಮಹಾಲಕ್ಷ್ಮಿ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಾಗಿ ಇದು ಕೇವಲ ವದಂತಿಯೋ ಅಥವಾ ನಿಜವಾಗಿಯೂ ಎಂಬುದು ಖಚಿತವಾಗಬೇಕಷ್ಟೆ. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.