ಮದುವೆಯಾಗಿ ಇಷ್ಟು ವರ್ಷವಾದರೂ ನನ್ನ ಗಂಡ ಇನ್ನು ಹನಿಮೂನ್ ಗೆ ಕರ್ಕೊಂಡು ಹೋಗಿಲ್ಲ ಎಂದ ನಟಿ ಶುಭಾ ಪೂಂಜಾ! ಅಸಲಿ ಕಾರಣ ಏನಂತೆ ಗೊತ್ತಾ ನೋಡಿ!!

ಸುದ್ದಿ

ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಉತ್ತಮ ನಟನೆಯ ಮೂಲಕ ಜನರ ಗಮನ ಸೆಳೆದಿದ್ದ ಖ್ಯಾತ ನಟಿ ಶುಭಾ ಪೂಂಜಾ ಇದೀಗ ಸಂತೋಷದಲ್ಲಿ ತೇಲಾಡುತ್ತಿದ್ದಾರೆ ತಮ್ಮ ಬಹುಕಾಲದ ಗೆಳೆಯ ಸಮಂತ್ ಮಹಾಬಲ ಅವರ ಜೊತೆಗೆ ಕೊನೆಗೂ ಹಸೆಮಣೆ ಏರಿದ್ದಾರೆ ಈ ಸಂತೋಷದ ವಿಚಾರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸ್ಟಾರ್ ನಟಿ ಆಗಿದ್ದರು ಕೂಡ ಶುಭ ಪೂಜಾ ಮದುವೆಯಾಗಿದ್ದು ಮಾತ್ರ ಬಹಳ ಸರಳವಾಗಿ.

ಈ ವಿಷಯದ ಬಗ್ಗೆ ಈ ಹಿಂದೆಯೂ ಮಾತನಾಡಿದ ಶುಭಪುಂಜ ನಾವು ಸರಳವಾಗಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಬೇಕು ಅಂದುಕೊಂಡಿದ್ದೇವೆ ಎಂದು ಹೇಳಿದ್ದರು. ಶುಭ ಪೂಂಜ ಅವರ ಆಸೆಯಂತೆ ಅವರ ಮದುವೆ ಸರಳವಾಗಿ ಗುರು ಹಿರಿಯರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆದಿದೆ. ಹೌದು ನಟಿ ಶುಭ ಪೂಂಜ ಇತ್ತೀಚಿಗೆ ಮಂಗಳೂರಿನ ಮಜನಬೆಟ್ಟುಬೀಡುವಿನಲ್ಲಿ ತಮ್ಮ ಅಜ್ಜಿ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಈ ಮೂಲಕ ಶುಭಪುಂಜ ಅವರ ಆಸೆ ಕೊನೆಗೂ ಈಡೇರಿದೆ. ಕಳೆದ ಎರಡು ವರ್ಷಗಳಿಂದ ಸಮಂತ್ ಅವರನ್ನ ಶುಭ ಪೂಜಾ ಪ್ರೀತಿಸುತ್ತಿದ್ದರು. ಈ ಹಿಂದೆಯೇ ಅವರ ಮದುವೆ ಆಗಬೇಕಿತ್ತು. ಆದರೆ ಈ ಸಮಯದಲ್ಲಿ ಶುಭಪೂಂಜ ಅವರಿಗೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತೆ. ಹಾಗಾಗಿ ಅವರ ಮದುವೆಯನ್ನು ಮುಂದೂಡಲಾಗುತ್ತೆ. ಕೊನೆಗೂ ಇದೀಗ ಶುಭ ಪುಂಜ ತನ್ನ ಮನದರಸನ ಕೈ ಹಿಡಿದಿದ್ದಾರೆ.

ಶುಭ ಪೂಂಜ ಅವರು ಪ್ರೀತಿಸುತ್ತಿದ್ದ ಹುಡುಗ ಸಮಂತ್ ಮಹಾಬಲ. ಇವರು ಒಬ್ಬ ಉದ್ಯಮಿ. ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು ಶುಭ ಪೂಂಜಾ ಅವರನ್ನು ಬಹಳ ಮೆಚ್ಚಿಕೊಂಡಿದ್ದ ಸಮಂತ್ ಶುಭ ಅವರ ನಟನಿಗೂ ಕೂಡ ಯಾವುದೇ ತೊಂದರೆ ಮಾಡಿಲ್ಲ. ಅವರ ವೃತ್ತಿ ಜೀವನವನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದಾರೆ ಸಮಂತ್.

ಶುಭ ಪೂಂಜ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ತನ್ನ ಗೆಳೆಯ ಸಮಂತ್ ಜೊತೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕರಾವಳಿಯ ಕುವರಿ ಶುಭಪುಂಜ ಸಮಂತವರನ್ನ ಕರೆದುಕೊಂಡು ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆಯಲು ಕೂಡ ಹೋಗಿದ್ದರು. ಈ ವಿಷಯವನ್ನು ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು ಶುಭಪುಂಜ.

ಸರಳವಾಗಿ ಮದುವೆಯಾಗಿರುವ ಶುಭಪೂಂಜ ಅವರು ಮದುವೆಯಾದ ಒಂದೇ ವಾರದಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಹೌದು ಮದುವೆಯಾದ ಬಳಿಕ ಸಾಮಾನ್ಯವಾಗಿ ಸಿನಿಮಾ ನಟಿಯರು ಚಿತ್ರದಲ್ಲಿ ಅಭಿನಯಿಸುವುದನ್ನು ಬಿಟ್ಟು ಬಿಡುತ್ತಾರೆ. ಆದರೆ ಸಮಂತ ಅವರ ಸಪೋರ್ಟ್ ಇರುವ ಕಾರಣಕ್ಕೆ ಶುಭಪುಂಜ ಈಗಲೂ ಸಿನಿಮಾಗಳನ್ನ ಮಾಡುತ್ತಿದ್ದಾರೆ.

ಶ್ರೀದೇವಿ, ಅಂಬುಜ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಶುಭಪೂಂಜ. ಶುಭ ಅಭಿನಯದ ಅಂಬುಜ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಇದರ ಜೊತೆಗೆ ರೈಮ್ಸ್ ಎನ್ನುವ ಸಿನಿಮಾದಲ್ಲಿಯೂ ಕೂಡ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶುಭ ಪೂಂಜ. ಮದುವೆಯಾಗಿ ಕೇವಲ ಒಂದೇ ವಾರಕ್ಕೆ ಶೂಟಿಂಗ್ ಗೆ ಮರಳಿದ ಶುಭ ತಾನೀಗ ಶೂಟಿಂಗ್ ನಲ್ಲಿ ಇದ್ದೇನೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.

ಅಂದಹಾಗೆ ಮದುವೆಯಾಗಿ ಒಂದು ವಾರ ಕಳೆದಿಲ್ಲ ಆಗಲೇ ತನ್ನ ಪತಿ ಸಮಂತ್ ಮೇಲೆ ತಮಾಶೇಗೆ  ಆರೋಪ ಮಾಡಿದ್ದಾರೆ ಶುಭ ಪೂಂಜ. ಹೌದು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ ಶುಭ ಪೂಂಜ ನನ್ನ ಚಿನ್ನಿ ಇನ್ನು ನನ್ನನ್ನು ಹನಿಮೂನಿಗೆ ಕರೆದುಕೊಂಡು ಹೋಗಿಲ್ಲ ಅಂತ ದೂರಿದ್ದಾರೆ. ಈ ಸಂದರ್ಶನ ನೋಡಿದ ಶುಭ ಅವರ ಅಭಿಮಾನಿಗಳು ಸಮಂತ್ ಅವರೇ ಮೊದಲು ಅವರನ್ನು ಹನಿಮೂನಿಗೆ ಕರೆದುಕೊಂಡು ಹೋಗಿ ಅಂತ ಕಿಚಾಯಿಸಿದ್ದಾರೆ.

Leave a Reply

Your email address will not be published. Required fields are marked *