ಬಹುಭಾಷಾ ನಟಿ ನಿತ್ಯ ಮೆನನ್ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ instagram ಖಾತೆಯಲ್ಲಿ ತಾವು ಪ್ರಗ್ನೆಂಟ್ ಆಗಿರುವ ಫೋಟೋ ಗಳನ್ನು ಹಂಚಿಕೊಂಡಿದ್ದಾರೆ. ನಿತ್ಯ ಮೆನನ್ ಈ ಫೋಟೋಗಳನ್ನ ನೋಡಿ ಕೆಲವು ಜನರು ವಿಶ್ ಮಾಡಿದ್ದರೆ. ಇನ್ನೂ ಕೆಲವರು ಶಾಕ್ ಆಗಿದ್ದಾರೆ ನಿತ್ಯಾ ಮೆನನ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದಾರೆ ಅಂದ್ರೆ ಈವರೆಗೆ ಅವರ ಬಾಯ್ ಫ್ರೆಂಡ್ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲವಲ್ಲ ಅಂತ ಶಾಕ್ ಆಗಿದ್ದಾರೆ ಅಭಿಮಾನಿಗಳು.
ಹೌದು, ಸ್ಟಾರ್ ನಟಿ ಒಬ್ಬಳು ಈ ರೀತಿ ಮದುವೆಗೂ ಮುಂಚೆ ಗರ್ಭಿಣಿ ಆಗಿದ್ದೇನೆ ಎಂದು ಓಪನ್ ಆಗಿ ಘೋಷಣೆ ಮಾಡುವ ಪೋಸ್ಟ್ ಹಾಕಿದ್ರೆ ಯಾರಿಗಾದರೂ ಯೋಚನೆ ಬರೋದು ಸಹಜ. ಅದರಲ್ಲೂ ನಿತ್ಯ ಮೆನನ್ ಅವರಿಗೆ ಫ್ಯಾನ್ ಫಾಲೋವರ್ಸ್ ಸಿಕ್ಕಾಪಟ್ಟೆ ಇದ್ದಾರೆ. ಹಾಗಾಗಿ ಅವರು ಹೇಳದೆ ಕೇಳದೆ ಮದುವೆ ಆಗಿಬಿಟ್ರ ಅಥವಾ ಮದುವೆಗೂ ಮುಂಚೆ ಗರ್ಭಿಣಿ ಆಗಿಬಿಟ್ರಾ ಅನ್ನೋದು ಹಲವರ ಡೌಟ್ ಆಗಿತ್ತು.
ಆದರೆ ನಿತ್ಯ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಹೌದು, ಇತ್ತೀಚಿಗೆ ನಿತ್ಯ ಮೆನನ್ ಹಾಗೂ ಪಾರ್ವತಿ ಇಬ್ಬರೂ ಪ್ರತ್ಯೇಕವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಪೋಸ್ಟ್ ಹಂಚಿಕೊಂಡಿದ್ದರು. ಬಹುಶಃ ನಟಿ ಪಾರ್ವತಿ ಕೂಡ ಮಗುವಿನ ಬರುವಿಕೆಯನ್ನು ಖಚಿತಪಡಿಸುವಂತಹ ಪ್ರಗ್ನೆನ್ಸಿ ಟೆಸ್ಟ್ ಕಿಟ್ ಅನ್ನು ಪೋಸ್ಟ್ ಮಾಡಿದ್ರು.
ಇನ್ನು ನಿತ್ಯ ಮೆನನ್ ಒಂದು ಹೆಜ್ಜೆ ಮುಂದೆ ಹೋಗಿ ತಾವು ಪ್ರಗ್ನೆಂಟ್ ಆಗಿರುವ ಫೋಟೋಗಳನ್ನು ವಿವಿಧ ಬಂಗಿಯಲ್ಲಿ ತೆಗೆಯಿಸಿ ಪೋಸ್ಟ್ ಮಾಡಿದ್ದರು. ಈ ಫೋಟೋಗಳಿಗೆ ಸಾಕಷ್ಟು ಅಭಿಮಾನಿಗಳು ವಿಷಸ್ ತಿಳಿಸಿದರೆ ಸೆಲೆಬ್ರೆಟಿಗಳು ಕೂಡ ವಿಶ್ ಮಾಡಿದ್ದು ವಿಶೇಷವಾಗಿತ್ತು. ಆದರೆ ಇದಕ್ಕೆಲ್ಲ ಉತ್ತರ ಸಿಕ್ಕಿದ್ದು ನಿತ್ಯ ಮೆನನ್ ಹಾಗೂ ಪಾರ್ವತಿ ಇಬ್ಬರೂ ಬಾಲಿವುಡ್ ನ ವಂಡರ್ ವುಮೆನ್ ಎನ್ನುವ ಸಿನಿಮಾದಲ್ಲಿ ಪ್ರೆಗ್ನೆನ್ಸಿ ಪಾತ್ರವನ್ನು ಮಾಡುತ್ತಿದ್ದಾರೆ.
ವಂಡರ್ ವುಮೆನ್ ಸಿನಿಮಾದಲ್ಲಿ ನಿತ್ಯ ಮೆನನ್ ನೂರಾ ಎನ್ನುವ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ ಸೋನಿ ಲೈಫ್ ನಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಹೌದು ವಂಡರ್ ವುಮೆನ್ ನಲ್ಲಿ 7 ಜನ ಬೇರೆ ಬೇರೆ ಕಥೆಯನ್ನು ಹೊಂದಿರುವ ಗರ್ಭಿಣಿಯರು ಒಂದೇ ಸೂರಿನಡಿ ಸೇರುವುದು ಈ ಸಿನಿಮಾದ ಕಥೆ.
ಗರ್ಭಿಣಿ ಆದವರು ಅನುಭವಿಸುವ ನೋವು ಕಷ್ಟ ಇವೆಲ್ಲವನ್ನ ತೋರಿಸುವಂತಹ ಭಾವನಾತ್ಮಕ ಸಿನಿಮಾ ಇದು. ಇಂದಿನಂತೆ ನಿತ್ಯ ಮೆನನ್ ಹಾಗೂ ಪಾರ್ವತಿ ಇಬ್ಬರೂ ಬಹಳ ವಿಭಿನ್ನವಾಗಿ ಹಾಗೂ ಅದ್ಭುತವಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ.
ಈಗಾಗಲೇ ಮಿಷನ್ ಮಂಗಲ್ ಹಾಗೂ ಬ್ರೀತ್ 2 ಪ್ರಾಜೆಕ್ಟ್ ಗಳಲ್ಲಿ ಅಭಿನಯಿಸಿ ಬಾಲಿವುಡ್ ಗೂ ಪರಿಚಯಗೊಂಡಿದ್ದಾರೆ ನಿತ್ಯಾ ಮೆನನ್. ಇನ್ನು ಅಂಜಲಿ ಮೆನನ್ ನಿರ್ದೇಶನದ ವಂಡರ್ ವುಮೆನ್ ಟ್ರೈಲರ್ ನೋಡಿ ಮೆಚ್ಚಿದ ಜನ ಇನ್ನೇನು ಈ ಸಿನಿಮಾನ ನೋಡೋದಕ್ಕೆ ಕಾತುರರಾಗಿದ್ದಾರೆ. ಪ್ರಗ್ನೆಂಟ್ ಎಂದು ಶಾಕ್ ನಲ್ಲಿ ಇದ್ದವರಿಗೆ ಸದ್ಯ ಉತ್ತರ ಸಿಕ್ಕಂತಾಗಿದೆ.