ನಟಿ ಹರಿಪ್ರಿಯಾ ಸದ್ಯ ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಕನ್ನಡದ ಮೆಚ್ಚಿನ ನಟಿ ಹರಿಪ್ರಿಯ ಳಲ್ಲಿ ಅಭಿನಯಿಸಿರುವ ಹರಿಪ್ರಿಯ ಕನ್ನಡದ ಬಹುಬೇಡಿಕೆಯ ನಟಿ ಕೂಡ ಹೌದು. ಬೋಲ್ಡ್ ಹಾಗೂ ಗಂಭೀರವಾಗಿರುವ ಪಾತ್ರಗಳನ್ನು ನಿಭಾಯಿಸಬಲ್ಲ ಹರಿಪ್ರಿಯಾ, ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.
ಹೌದು, ನಟಿ ಹರಿಪ್ರಿಯ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ರು. ಅದು ಅವರು ಮೂಗು ಚುಚ್ಚಿಸಿಕೊಳ್ಳುತ್ತಿರುವ ಫೋಟೋ. ಮೊದಲೇ ಅಂದವಾಗಿದ್ದ ಹರಿಪ್ರಿಯಾ ಅವರಿಗೆ ಮೂಗುತಿ ಚುಚ್ಚಿದ ನಂತರ ಅವರ ಸೌಂದರ್ಯ ದುಪಟ್ಟಾದಂತೆ ಕಾಣುತ್ತಿದೆ. ಇನ್ನು ಇಷ್ಟು ವರ್ಷದ ನಂತರ ಈಗ ಯಾಕೆ ಹರಿಪ್ರಿಯ ಮೂಗು ಚುಚ್ಚಿಸಿಕೊಳ್ಳುತ್ತಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆ.
ಹೊಸ ಸಿನಿಮಾಕ್ಕೆ ತಯಾರಿ ಇರಬಹುದು ಎಂದು ಹಲವರು ಊಹಿಸಿದ್ದರು. ಅದೇ ರೀತಿ ಹರಿಪ್ರಿಯ ಮದುವೆ ಆಗ್ತಾ ಇದ್ದಾರೆಯೇ ಅಂತ ಸಾಕಷ್ಟು ಮಂದಿ ಕಮೆಂಟ್ ಮಾಡಿ ಕೇಳಿದ್ದರು ಆದರೆ ಇದ್ಯಾವುದಕ್ಕೂ ಹರಿಪ್ರಿಯಾ ಸರಿಯಾದ ಉತ್ತರವನ್ನು ನೀಡಿರಲಿಲ್ಲ. ನನಗೂ ಗೊತ್ತಿಲ್ಲ ಅಂತ ಕಾಗೆ ಹಾರಿಸಿದ್ದರು. ಆದರೆ ಮೂಗುತಿ ಚುಚ್ಚಿಸಿಕೊಳ್ಳುವಾಗ ಅವರ ಬಳಿ ಇದ್ದು ಅವರ ಕಣ್ಣೀರನ್ನು ಒರೆಸಿ, ಹಣೆಗೆ ಮುತ್ತಿಟ್ಟು ಸಾಂತ್ವಾನ ಹೇಳಿದ ವ್ಯಕ್ತಿ ಮತ್ಯಾರೂ ಅಲ್ಲ, ಸ್ಯಾಂಡಲ್ ವುಡ್ ನ ಹೆಸರಾಂತ ನಟ ವಸಿಷ್ಟ ಸಿಂಹ.
ವಿಲನ್ ಪಾತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ ಹೀರೋ ಆಗಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ ಅತ್ಯುತ್ತಮ ಹಿನ್ನೆಲೆ ಗಾಯಕ ಕೂಡ ಆಗಿರುವ ವಸಿಷ್ಠ ಸಿಂಹ ಅವರ ಅದ್ಭುತ ಕಂಠವನ್ನು ಜನ ಮೆಚ್ಚಿದ್ದಾರೆ. ಇದೀಗ ಸುದ್ದಿಲ್ಲದಂತೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್ ವುಡ್ ಅಂಗಳದ ತುಂಬಾ ಹಬ್ಬಿದೆ.
ಹೌದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ ಇತ್ತೀಚಿಗೆ ಸಾಕಷ್ಟು ರೀಲ್ಸ್ ನಲ್ಲಿ ಒಟ್ಟಾಗಿ ನೃತ್ಯ ಕೂಡ ಮಾಡಿದ್ರು. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಇನ್ಸ್ಟಾಗ್ರಾಮ್ ನಲ್ಲಿ ಹಲವು ಪೋಸ್ಟ್ ಗಳನ್ನು ಮಾಡುವುದರ ಮೂಲಕ ಇನ್ನಷ್ಟು ಜನರ ಗಮನ ಸೆಳೆದಿದ್ದಾರೆ. ಇದೀಗ ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಇಬ್ಬರು ಹಸೆಮಣೆ ಏರಲು ತಯಾರಿ ನಡೆಸಿದ್ದಾರಂತೆ. ಸದ್ಯದಲ್ಲೇ ಈ ಜೋಡಿಯ ನಿಶ್ಚಿತಾರ್ಥ ನಡೆಯಲಿದೆಯಂತೆ. ಅದಕ್ಕಾಗಿ ದುಬೈಗೆ ಹೋಗಿ ಶಾಪಿಂಗ್ ಮಾಡಿಕೊಂಡು ಬಂದಿದ್ದಾರಂತೆ ನವ ಜೋಡಿ.
ಇನ್ನು ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಮದುವೆಯಾಗುತ್ತಿರುವುದು ನಿಜಾನಾ? ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯು ಇಲ್ಲ ಆದರೆ ಇತ್ತೀಚಿಗಿನ ಬೆಳವಣಿಗೆಯನ್ನು ನೋಡಿದರೆ ಈ ಸುದ್ದಿ ಸತ್ಯ ಎನಿಸುತ್ತೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.