ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಅದರ ಟೀಸರ್, ಟ್ರೈಲರ್, ಫಸ್ಟ್ ಲುಕ್ ಎಲ್ಲವನ್ನು ಜನ ಮೆಚ್ಚಿಕೊಂಡಿದ್ದಾರೆ ಹಾಗಾಗಿ ಕ್ರಾಂತಿ ಸಿನಿಮಾದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಕ್ರಾಂತಿ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನಿರೀಕ್ಷೆ ಮಾಡಿದ ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕ್ರಾಂತಿ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ವಿಷಯವನ್ನು ಕ್ರಾಂತಿ ಸಿನಿಮಾ ಚಿತ್ರತಂಡ ಬಹಿರಂಗಪಡಿಸಿದೆ.
ಇದರಿಂದ ಡಿ ಬಾಸ್ ಅಭಿಮಾನಿಗಳಲ್ಲಿ ಈ ಸಿನಿಮಾದ ಬಗ್ಗೆ ಕುತೂಹಲ ಇನ್ನಷ್ಟು ಜಾಸ್ತಿಯಾಗಿದೆ. ಹೌದು, ನಟ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ 2023 ಜನವರಿ 26ಕ್ಕೆ ರಿಲೀಸ್ ಆಗಲಿದೆ ಇದು ಕನ್ನಡದಿಂದ ಇತರ ಭಾಷೆಗಳಿಗೂ ಕೂಡ ಡಬ್ಬಾಗುತ್ತಿದೆ. ಇತ್ತೀಚಿಗೆ ಕನ್ನಡದ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗ್ತಾ ಇರೋದು ನಿಮಗೆ ಗೊತ್ತು. ಇದರಿಂದ ಬಾಲಿವುಡ್ ಅಂತೂ ತತ್ತರಿಸಿ ಹೋಗಿದೆ.
ಇದೀಗ ಬಾಲಿವುಡ್ ನ ಬಾದ್ಷಾ ಶಾರುಖ್ ಖಾನ್ ಅವರು ಡಿ ಬಾಸ್ ಗೆ ಸವಾಲು ಹಾಕುತ್ತಿದ್ದಾರೆ. ಹೌದು ಶಾರುಖ್ ಖಾನ್ ಅಭಿನಯದ ಸಿನಿಮಾ ಕೂಡ ಜನವರಿ 25ನೇ ತಾರೀಕು ತೆರಿಗೆ ಬರಲು ಸಿದ್ಧವಾಗಿದೆ. ಹಾಗಾಗಿ ಬಾಲಿವುಡ್ ನಲ್ಲಿ ಕ್ರಾಂತಿ ಸಿನಿಮಾ ಗೆಲ್ಲುತ್ತಾ ಇಲ್ವಾ ಅನ್ನೋದು ಎಲ್ಲರಲ್ಲೂ ಮೂಡಿರುವ ಆತಂಕ. ಇನ್ನು ಡಿ ಬಾಸ್ ಅಭಿನಯದ ಕ್ರಾಂತಿ ಸಿನಿಮಾ ವನ್ನು ಅವರ ಅಭಿಮಾನಿಗಳೇ ಹೆಚ್ಚಾಗಿ ಪ್ರಚಾರ ಮಾಡುತ್ತಿದ್ದಾರೆ.
ಹಾಗಾಗಿ ಕನ್ನಡ ನಾಡಿನಲ್ಲಂತೂ ಕ್ರಾಂತಿಯ ಸಿನಿಮಾ ಸೂಪರ್ ಹಿಟ್ ಕಾಣುವುದರಲ್ಲಿ ನೋ ಡೌಟ್. ಆದರೆ ಇತರ ಭಾಷೆಗಳಲ್ಲಿ ಹೇಗೆ ರೆಸ್ಪಾನ್ಸ್ ಸಿಗುತ್ತೆ ಎನ್ನುವುದು ಚಿತ್ರತಂಡದ ತಲೆನೋವು. ಇನ್ನು ಸಿನಿಮಾದ ಪ್ರಚಾರದ ಸಮಯದಲ್ಲಿ ಮಾತನಾಡಿದ ದರ್ಶನ್ “ನಾನು ಕನ್ನಡ ಸಿನಿಮಾ ಮಾಡುತ್ತಿದ್ದೇನೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಯೋಚನೆಯಲ್ಲ. ನಾವು ಡಬ್ ಮಾಡಿ ಕೊಡುತ್ತೇವೆ.
ಅಲ್ಲಿಗೆ ಯಾವ ಪ್ರಚಾರಕ್ಕೆ ಹೋಗುವುದಿಲ್ಲ ನಾನಂತೂ ಅಲ್ಲಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ನಾನು ನನ್ನ ಸಿನಿಮಾದ ಪ್ರಚಾರವನ್ನು ಇಲ್ಲಿಯೇ ಮಾಡಿಕೊಳ್ಳುತ್ತೇನೆ. ಮೇರಾಕುತ್ತ ಮೇರಾ ಗಲಿ ಮೇ ಶೇರ್ ಎನ್ನುವ ಮಾತನ್ನು ಒಪ್ಪುವವನು ನಾನು” ಎಂದು ನಟ ದರ್ಶನ್, ಕನ್ನಡದಲ್ಲಿ ಮಾತ್ರ ತಾನು ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಕ್ಲಾಸ್ ಹಾಗೂ ಮಾಸ್ ಎರಡು ಸಿನಿಮಾದಲ್ಲಿ ಅತ್ಯದ್ಭುತವಾಗಿ ಅಭಿನಯಿಸುವ ನಟ ದರ್ಶನ್, ಯಜಮಾನ ನೋಡಿದಾಗ ನಿಮಗೆ ಈ ಎರಡು ಅನುಭವ ಆಗುತ್ತೆ. ನಿರ್ದೇಶಕ ಹರಿ ಪಕ್ಕ ಮಾಸ್ ಅವರಿಗೆ ಕ್ಲಾಸ್ ಆಗಿ ಬರೋಲ್ಲ ಹರಿ ಯಾವಾಗಲೂ ಮೇಲೆ ಹಾರುತ್ತಲೇ ಇರಬೇಕು ಎನ್ನುವವರು. ಹಾಗಾಗಿ ಜನರ ಚಪ್ಪಾಳೆ ಕೇಳುವುದಕ್ಕೆ, ಶಿಳ್ಳೆ, ಕೂಗಾಟ, ಕಿರುಚಾಟ ಕೇಳುವುದಕ್ಕೆ ಹಾಗೂ ಒಂದು ನೀತಿ ಕಥೆಯನ್ನು ಹೇಳುವುದಕ್ಕೆ ಕ್ರಾಂತಿ ಸಿನಿಮಾ ರೆಡಿಯಾಗಿದೆ.
ಇದೊಂದು ಅತ್ಯುತ್ತಮ ಸಿನಿಮವಾಗಿದ್ದು ನಿಮಗೆಲ್ಲರಿಗೂ ತಪ್ಪದೆ ಮನರಂಜನೆ ನೀಡುತ್ತದೆ. ಕುದುರೆಯನ್ನು ನೀರಿಗೆ ಬಿಡೋದು ನಮ್ಮ ಕೆಲಸ ನೀರನ್ನು ಕುಡಿಯುವುದು ಬಿಡುವುದು ಅದಕ್ಕೆ ಬಿಟ್ಟಿದ್ದು ಯಾರು ನೀರು ಕುಡಿಸುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಕ್ರಾಂತಿ ಸಿನಿಮಾ ಪಕ್ಕ ಎಜುಕೇಶನ್ ಇರುವಂತಹ ಸಿನಿಮಾ. ಆದರೆ ಅದರಿಂದ ಸಿಸ್ಟಮ್ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಆದರೂ ನಮ್ಮ ಪ್ರಯತ್ನ ನಾವು ಮಾಡಿದ್ದೇವೆ ಅದನ್ನ ಗೆಲ್ಲಿಸುವುದು ಬಿಡುವುದು ನಿಮ್ಮ ಕೈಯಲ್ಲಿದೆ ಎಂದು ನಟ ದರ್ಶನ್ ಹೇಳಿದ್ದಾರೆ.