ಸಾಮಾನ್ಯವಾಗಿ ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಿದವರು ಕೂಡ ವಯಸ್ಸಾದ ನಂತರ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಥವಾ ಅಭಿನಯಿಸುವುದನ್ನೇ ಬಿಟ್ಟುಬಿಡುತ್ತಾರೆ ಆದರೆ ತಮಗೆ ಸೂಟ್ ಆಗುವಂತಹ ಕಥೆಯಲ್ಲಿ ತಾವೇ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ನಟಿಯರಲ್ಲಿ ಟಬು ಮುಖ್ಯವಾದವರು. ವಯಸ್ಸು 51 ದಾಟಿದರೂ ಪ್ರಭು ನೋಡುವುದಕ್ಕೆ ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ. ಹಾಗಾಗಿ ಟಬು ಅವರಿಗೆ ಈಗಲೂ ಸಿನಿಮಾಗಳಲ್ಲಿ ಬಹು ಮುಖ್ಯ ಪಾತ್ರವನ್ನು ನೀಡಲಾಗುತ್ತೆ.
ಬಾಲಿವುಡ್ ನಟಿ ಟಬು, ಬಾಲಿವುಡ್ ನಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಎಲ್ಲಾ ಭಾಷೆಯಲ್ಲಿಯೂ ನಟಿಸಿ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡವರು. ಇತ್ತೀಚಿಗೆ ಉತ್ತರದ ನಟಿಯರು ದಕ್ಷಿಣದ ಸಿನಿಮಾಗಳಲ್ಲಿ ಅಭಿನಯಿಸುವುದು ಕಾಮನ್ ಆಗಿದೆ. ಟಬು ಅಲ್ಲು ಅರ್ಜುನ್ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳನ್ನ ನಿಭಾಯಿಸುವುದೇ ಆದರೂ ಆ ಪಾತ್ರಗಳಿಗೂ ಕೂಡ ಹೆಚ್ಚು ಮಹತ್ವವನ್ನ ನೀಡಲಾಗುತ್ತದೆ.
ನಟಿ ಟಬು, ಈಗಲೂ ಫಿಟ್ ಅಂಡ್ ಫೈನ್ ಆಗಿದ್ದಾರೆ. ಅವರನ್ನು ನೋಡಿದ್ರೆ ಅವರಿಗೆ ಎಷ್ಟು ವರ್ಷ ಆಯ್ತು ಅಂತ ಊಹಿಸುವುದಕ್ಕೆ ಸಾಧ್ಯವಿಲ್ಲ. ಹೌದು, ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರಾದ ಟಬು ಹಲವು ವರ್ಷಗಳಿಂದ ಬಾಲಿವುಡ್ ಸಿನಿಮಾ ರಂಗದಲ್ಲಿಸಕ್ರಿಯರಾಗಿರುವ ನಟಿ. ಈಗಲೂ ಎಷ್ಟು ಅದ್ಭುತವಾಗಿ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದರೆ ಇಂದಿನ ಯುವ ನಟಿಯರಿಗೂ ಕೂಡ ಅವರು ಮಾದರಿ ಎಂದರೆ ತಪ್ಪಾಗಲ್ಲ.
ಈಗಲೂ ಬಹುಬೇಡಿಕೆಯ ನಟಿ ಟಬು! ಇನ್ನು ಇತ್ತೀಚಿಗೆ ಹೆಚ್ಚು ವೆಬ್ ಸೀರೀಸ್ ಗಳಲ್ಲಿಯೂ ಕೂಡ ಟಬು ಅಭಿನಯಿಸುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಹಾಗೂ ರಾಧಿಕಾ ಆಪ್ತೆ ಅಭಿನಯದ ಅಂಧಾಧೂನ್ ಚಿತ್ರದಲ್ಲಿಯಂತೂ ಟಬು ಕಮಾಲ್ ಮಾಡಿದ್ರು. ಇನ್ನು ಸಾಂಪ್ರದಾಯಿಕ ಹಾಗೂ ಆಧುನಿಕ ಎರಡು ಉಡುಪಿನಲ್ಲಿಯೂ ಟಬು ಮಿಂಚುತ್ತಾರೆ.
ಈಗಲೂ ಹಾಟ್ ಲುಕ್ ಮೂಲಕ ಪಡ್ಡೆ ಹುಡುಗರ ಹಾರ್ಟ್ ಗೆ ಲಗ್ಗೆ ಇಡುವ ಟಬು ಇದುವರೆಗೂ ಯಾಕೆ ಮದುವೆಯಾಗಿಲ್ಲ ಅಂತ ಹಲವರ ಪ್ರಶ್ನೆ. ಇತ್ತೀಚಿಗೆ ಮದುವೆ ಮಕ್ಕಳು ವಿಷಯಕ್ಕೆ ಸಂಬಂಧಪಟ್ಟ ಹಾಗೆ ಟಬು ನೀಡಿರುವ ಹೇಳಿಕೆಯೊಂದು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಮದುವೆಯಾಗದೆಯೂ ಗರ್ಭಿಣಿಯಾಗಬಹುದು ಅಂತ ಐವತತ್ರ ಹರೆಯದ ತಬು ಹೆಳಿಕೆಯೊಂದನ್ನು ನೀಡಿದ್ದಾರೆ.
ಹೌದು, ನಿಮಗೆ ಯಾವತ್ತೂ ಮಕ್ಕಳು ಬೇಕು ಅಂತ ಅನಿಸಿಲ್ವಾ ಎಂದು ಸಂದರ್ಶನ ಒಂದರಲ್ಲಿ ಟಬು ಅವರಿಗೆ ಪ್ರಶ್ನೆ ಮಾಡಲಾಗಿತ್ತು. ಮಗು ಬೇಕು ಅಂದ್ರೆ ಮದುವೆ ಆಗಬೇಕು ಎಂದೇನು ಇಲ್ಲ. ನನಗೆ ಮಗು ಬೇಕು ಅಂತ ಅನಿಸಿದ್ರೆ ಬಾಡಿಗೆ ತಾಯಿಯ ಮುಖಾಂತರ ಮಗುವನ್ನು ಪಡೆಯಬಹುದು. ಮದುವೆಯ ವಿಚಾರಕ್ಕೆ ಬಂದ್ರೆ ನನಗೆ ಯಾವಾಗಲೂ ಮದುವೆಯಾಗಬೇಕು ಅನ್ನಿಸಿಲ್ಲ.
ಆದರೂ ನನಗೆ ಮದುವೆ ಆಗಬೇಕು ಎನ್ನಿಸಿದಾಗ ಹೆಣ್ಣನ್ನ ಬಹಳ ಗೌರವದಿಂದ ನೋಡುವ ವ್ಯಕ್ತಿ ಸಿಕ್ಕರೆ ಮದುವೆಯಾಗುತ್ತೇನೆ ಅಂತ ಟಬು ಹೇಳಿದ್ದಾರೆ. ಒಂದು ವೇಳೆ ಟಬು ಈಗಲೂ ಮದುವೆಯಾಗುತ್ತೇನೆ ಅಂತ ಹೇಳಿದ್ರೆ, ಅವರನ್ನ ವಿವಾಹವಾಗೋಕೆ ಸಾಕಷ್ಟು ಜನರು ಕ್ಯೂ ನಿಲ್ಲುವುದಂತು ಗ್ಯಾರಂಟಿ!