PhotoGrid Site 1660905703078

ಮಕ್ಕಳಾಗಿಲ್ಲ ಅನ್ನುವ ಕಾರಣಕ್ಕೆ ಗಂಡನಿಗೆ ಡೈವೋರ್ಸ್ ನೀಡಲು ಮುಂದಾದ ನಟಿ ಪ್ರಿಯಾಮಣಿ! ಲೈವ್ ಬಂದು ಪ್ರಿಯಾಮಣಿ ಹೇಳಿದ್ದೇನು ನೋಡಿ!!

ಸುದ್ದಿ

ಬಹುಭಾಷಾ ನಟಿ ಪ್ರಿಯಾಮಣಿ ಎಲ್ಲರಿಗೂ ಗೊತ್ತು. ಗ್ಲಾಮರ್ ಪಾತ್ರಗಳಲ್ಲಿಯೂ, ಸೀರಿಯಸ್ ಪಾತ್ರಗಳಲ್ಲಿಯೂ, ಸರಳ ಪಾತ್ರಗಳಲ್ಲಿಯೂ ಅತ್ಯದ್ಭುತವಾಗಿ ನಟಿಸುವ ನಟಿ ಈಕೆ. ಬಹುಭಾಷಾ ತಾರೆ ಪ್ರಿಯಾಮಣಿ ಈಗಲೂ ಸಾಕಷ್ಟು ಬೇಡಿಕೆ ಇರುವ ನಟಿ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಹೀಗೆ ಎಲ್ಲಾ ಭಾಷೆಗಳಲ್ಲಿಯೂ ಪ್ರಬುದ್ಧವಾಗಿ ಅಭಿನಯಿಸಿ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡವರು.

ನಟಿ ಪ್ರಿಯಾಮಣಿ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಡ್ಯಾನ್ಸ್ ರಿಯಾಲಿಟಿ ಶೋ ದ ಜಡ್ಜ್ ಕೂಡ ಆಗಿದ್ರು. ಈಗಲೂ ಕೂಡ ನಟಿ ಪ್ರಿಯಾಮಣಿ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಕೆಲವು ಸಿನಿಮಾಗಳು ಇನ್ನೂ ತೆರಿಗೆ ಬರಬೇಕಿದೆ.

ಅಂದಹಾಗೆ ಬೆಂಗಳೂರಿನ ಮೂಲದ ತಮಿಳು ಕುಟುಂಬಕ್ಕೆ ಸೇರಿದ ಪ್ರಿಯಾಮಣಿ, ವಯಸ್ಸು 38 ಆದರೂ ಇಂದಿಗೂ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಮಣಿ 2017ರಲ್ಲಿ ಮದುವೆಯಾಗುತ್ತಾರೆ. ಮುಸ್ತಫ ರಾಜ್ ಎನ್ನುವ ಉದ್ಯಮಿಯೊಂದಿಗೆ ಪ್ರಿಯಾಮಣಿ ಸುದ್ದಿ ಸದ್ದು ಗದ್ದಲ ಇಲ್ಲದೆ ಮದುವೆಯಾಗಿದ್ದಾರೆ. ಮುಸ್ತಫ ರಾಜ್ ತನ್ನ ಪ್ರೇಮಿ ಎಂದಾಗಲಿ, ಅವರೊಂದಿಗೆ ಸುತ್ತಾಡುವ ಫೋಟೋವಾಗಲಿ ಯಾವತ್ತೂ ಪ್ರಿಯಾಮಣಿ ಹಂಚಿಕೊಂಡಿರಲಿಲ್ಲ.

ಆದರೆ ಇವರಿಬ್ಬರ ಮದುವೆಯಾದ ನಂತರ ಕೆಲವು ಜನರ ಟೀಕೆಗೂ ಗುರಿಯಾಗಬೇಕಾಯಿತು. ಯಾಕಂದ್ರೆ ಇವರಿಬ್ಬರ ಸಮುದಾಯ ಬೇರೆ ಬೇರೆ, ಸಂಸ್ಕೃತಿ ಬೇರೆ ಬೇರೆ ಹಾಗಾಗಿ ಇವರಿಬ್ಬರು ಹೇಗೆ ಸಂಸಾರ ನಡೆಸುತ್ತಾರೆ ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಯೋಚನೆ ಇತ್ತು. ಆದರೆ ಮದುವೆಯಾಗಿ ಐದಾರು ವರ್ಷ ಕಳೆದರೂ ಬಹಳ ಉತ್ತಮ ರೀತಿಯಲ್ಲಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.

ಆದರೆ ಮುಸ್ತಫಾ ರಾಜ್ ಅವರಿಗೆ ಮೊದಲು ಮದುವೆ ಆಗಿದೆ. ಆದರೂ ಪ್ರಿಯಾಮಣಿ ಅವರನ್ನು ಮದುವೆಯಾದರು. ನಂತರ ಸ್ವಲ್ಪ ಸಮಯದ ಬಳಿಕ ಮುಕ್ತಫಾ ಅವರ ಮೊದಲ ಪತ್ನಿ ಹೀರೋಯಿನ್ ಎನ್ನುವ ಕಾರಣಕ್ಕೆ ಪ್ರಿಯಾಮಣಿ ಅವರನ್ನು ಮದುವೆಯಾಗಿದ್ದಾರೆ. ನನಗೆ ಎರಡು ಮಕ್ಕಳು ಇದ್ದಾರೆ. ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ ಮುಸ್ತಫಾ, ಅವರ ಮದುವೆಯನ್ನ ಅಸಿಂಧೂಗೊಳಿಸಬೇಕು ಅಂತ ನ್ಯಾಯಾಲಯದ ಮೊರೆ ಹೋಗಿದ್ದರು.

ನಟಿ ಪ್ರಿಯಾಮಣಿ ಹಾಗೂ ಮುಸ್ತಫ ರಾಜ್ ಇಬ್ಬರು ದೂರಾಗುತ್ತಿದ್ದಾರೆ ಎನ್ನುವ ಮಾತು ಒಂದು ವರ್ಷದ ಹಿಂದೆ ಕೇಳಿ ಬರುತ್ತಿತ್ತು. ಅವರಿಬ್ಬರ ನಡುವೆ ವೈಮನಸ್ಯ ಮೂಡಿದೆ ಎಂದು ಹೇಳಲಾಗುತ್ತಿತ್ತು ಆದರೆ ಸ್ವಲ್ಪ ಸಮಯದ ಬಳಿಕ ಇವೆಲ್ಲವೂ ಗಾಸಿಪ್ ಅಷ್ಟೇ ಎಂದು ಪ್ರಿಯಾಮಣಿ ಸ್ಪಷ್ಟನೆ ನೀಡಿದರು. ಆದರೆ ಇದೀಗ ಮತ್ತೆ ಅವರಿಬ್ಬರು ದೂರಾಗುತ್ತಿದ್ದಾರೆ ವಿ-ಚ್ಛೇಧನಕ್ಕೂ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತೆ.

ಪ್ರಿಯಾಮಣಿ ಹಾಗೂ ಮುಸ್ತಫ ರಾಜ್ ಮದುವೆಯಾಗಿ ಐದಾರು ವರ್ಷ ಕಳೆದಿದೆ ಆದರೆ ಇನ್ನೂ ಮಕ್ಕಳಾಗಲಿಲ್ಲ. ಮುಸ್ತಫ ಅವರಿಗೆ ಮಗು ಆಗಬೇಕು ಎನ್ನುವ ಆಸೆ ಇದೆ ಆದರೆ ಪ್ರಿಯಾಮಣಿ ನನ್ನ ಕೆರಿಯರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಮಕ್ಕಳನ್ನ ಮಾಡಿಕೊಳ್ಳಲು ಸದ್ಯಕ್ಕೆ ರೆಡಿ ಇಲ್ಲ. ಸ್ವಲ್ಪ ದಿನಗಳ ಹಿಂದೆ ಪ್ರಿಯಾಮಣಿ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಹಿಂದಿಯ ಫ್ಯಾಮಿಲಿ ಮ್ಯಾನ್ ಸೀರೀಸ್ ನಲ್ಲಿ ಅಭಿನಯಿಸಿದ ಬಳಿಕ ಪ್ರಿಯಾಮಣಿ ಬೇಡಿಕೆ ಹೆಚ್ಚಿದೆ.

ಹಾಗಾಗಿ ನಾನು ಇನ್ನೂ ಕೆರಿಯರ್ ನಲ್ಲಿ ಮುಂದೆ ಬರಬೇಕು ಎನ್ನುವ ಕಾರಣಕ್ಕೆ ಮಗು ಮಾಡಿಕೊಳ್ಳಲು ಅವರು ಸಿದ್ಧರಿಲ್ಲವಂತೆ. ಇದೇ ಕಾರಣ ಮುಂದಿಟ್ಟುಕೊಂಡು ಇಬ್ಬರು ದೂರಾಗುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅಧಿಕೃತವಾಗಿ ವಿ-ಚ್ಛೇಧನ ಪಡೆದುಕೊಳ್ಳಲಿದ್ದು ಈಗಾಗಲೇ ಬೇರೆ ಬೇರೆ ವಾಸಿಸುತ್ತಿದ್ದಾರೆ ಎಂದು ಗಾಸಿಪ್ ಎಲ್ಲೆಡೆ ಹರಿದಾಡುತ್ತಿವೆ. ಇದಕ್ಕೆ ಸ್ವತಃ ಪ್ರಿಯಾಮನಿಯವರೆ ಉತ್ತರ ನೀಡಬೇಕಿದೆ.

Leave a Reply

Your email address will not be published. Required fields are marked *