ಮದುವೆಯಾದ ಗಂಡ ಹೆಂಡತಿಯ ನಡುವೆ ಇತ್ತೀಚಿಗೆ ನಂಬಿಕೆಯೇ ಇಲ್ಲದಂತೆ ಆಗಿದೆ. ಮದುವೆ ಆದ ನಂತರವೂ ತಮಗೆ ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಹೆಣ್ಣು ಮಕ್ಕಳಿಗೆ ಸ್ವಾತಂತ್ರಬೇಕು ನಿಜ. ಆದರೆ ಅದು ಸ್ವೆ-ಚ್ಚಾ-ಚಾ-ರ ಆಗಬಾರದು. ಆದರೆ ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದರೆ ಹೆಣ್ಣು ಮಕ್ಕಳ ವರ್ತನೆ ಯಾಕೆ ಹೀಗೆ ಆಗಿದೆ ಅನ್ನೋದು ಅರ್ಥವಾಗುತ್ತೆ. ಹೆಣ್ಣು ಗಂಡನ ಮನೆಯನ್ನ ಬೆಳಗಬೇಕು. ಇದೇ ಕಾರಣಕ್ಕೆ ಆಕೆಯನ್ನ ಮದುವೆ ಮಾಡಿ ಕೊಡುತ್ತಾರೆ.
ಆದರೆ ಹುಡುಗಿಯರು ಇತ್ತೀಚಿಗೆ ಮದುವೆ ಅದ ಗಂಡನಿಗೆ ಮೋಸ ಮಾಡುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಇಂತಹ ಒಂದು ಘಟನೆ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ತನ್ನ ಪ್ರಿಯಕರನ ಜೊತೆಗೆ ಇರಲು ತಾಳಿಕಟ್ಟಿದ ಗಂಡನನ್ನೇ ಹ-ತ್ಯೆ ಮಾಡಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಮಾಲೂರು ತಾಲ್ಲೂಕು ಚಂಬೆ ಗ್ರಾಮದಲ್ಲಿ ನಡೆದಿದೆ. ಹ-ತ್ಯೆ ಅದ ವ್ಯಕ್ತಿ ಆನಂದ್. ಆನಂದ್ ಕಳೆದ ನವೆಂಬರ್ 21 ರಂದು ಮನೆಗೆ ಬಂದಿರಲಿಲ್ಲ.
ಆನಂದ್ ಕಾನೆಯಾಗಿದ್ದಕ್ಕೆ ಕೋಲಾರದ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಲಾಗಿತ್ತು. ಕಳೆದುಹೋದ ಆನಂದ್ ಶ-ವವಾಗಿ ಪತ್ತೆಯಾಗಿದ್ದಾರೆ. ಆನಂದ್‌ನನ್ನು ಕೊ-ಲೆ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಬಿ.ಮಾಕನಹಳ್ಳಿಯಲ್ಲಿ ಬಿಸಾಡಿ ಹೋಗಿದ್ದರು ಎನ್ನಲಾಗಿದೆ. ನಂತರ ನಂದಗುಡಿ ಪೊಲೀಸರು ಕೇಸ್ ದಾಖಲಿಸಿಕೊಂಡು ಕೊ-ಲೆ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಸಕ್ಸಸ್ ಆಗಿದ್ದಾರೆ.
ಇನ್ನು ಆನಂದ್ ಹ-ತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಪೃಥ್ವಿರಾಜ್, ಚಲಪತಿ ಹಾಗೂ ಆನಂದ್ ಪತ್ನಿ ಚೈತ್ರಾಳನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರೆ. ಮತ್ತೊಬ್ಬ ಆರೋಪಿ ನವೀನ್ ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆನಂದ್ ಪತ್ನಿ ಚೈತ್ರ, ಚಲಪತಿ ಜೊತೆಗೆ ಅ-ಕ್ರ-ಮ ಸಂಬಂಧ ಬೆಳೆಸಿಕೊಂಡಿದ್ದಳು. ಇದು ಕ್ರಮೇಣ ಆನಂದ್ ಗೆ ಗೊತ್ತಾಗಿದೆ. ಇದರ ಬಗ್ಗೆ ಆನಂದ್ ತಕರಾರು ಮಾಡಿದ್ದಾರೆ. ತನ್ನ ಪ್ರಿಯಕರನ ಜೊತೆ ಸೇರಲು ಆನಂದ್ ಅಡ್ಡಿ ಪಡಿಸುತ್ತಾನೆ ಎನ್ನುವ ಕಾರಣಕ್ಕೆ ಚೈತ್ರಾ ತನ್ನ ಪ್ರಿಯಕರ ಚಲಪತಿ ಗೆ ಹೇಳಿ ಆನಂದ್ ನನ್ನು ಹತ್ಯೆ ಮಾಡಿಸುವ ಪ್ಲಾನ್ ಮಾಡಿದ್ದಳು.
ಕೊನೆಗೆ ಸುದ್ದಿಲ್ಲದೆ ಆನಂದ್ ಕಥೆ ಮುಗಿಸಿದ್ದಾರೆ. ಇನ್ನೇನು ನಮ್ಮ ದಾರಿ ಅಡ್ಡಿ ಪಡಿಸುವವರು ಯಾರು ಇಲ್ಲ ಎಂದುಕೊಂಡಿದ್ದ ಚೈತ್ರಾ ಹಾಗೂ ಚಲಪತಿ ಇಂದು ಜೈಲು ಕಂಬಿ ಎಣಸುತ್ತಿದ್ದಾರೆ. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.