ಸಾಮಾನ್ಯವಾಗಿ ಮಹಿಳೆಯರು ಸೌಂದರ್ಯಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಮುಖದ ಮೇಲೆ ಚಿಕ್ಕ ಕಲೆ ಇದ್ದರೂ ಹೆಣ್ಣು ಮಕ್ಕಳಿಗೆ ಕೀಳರಿಮೆ ಶುರುವಾಗುತ್ತದೆ. ಹೆಣ್ಣು ಮಕ್ಕಳು ಹೊರಗಡೆ ಹೋಗುವಾಗ ತಾನು ಸುಂದರವಾಗಿ ಕಾಣಬೇಕು, ಎಲ್ಲರು ತನ್ನನ್ನು ನೋಡಿ ವಾವ್ ಅನ್ನಬೇಕು ಎಂದು ಬಯಸುತ್ತಾರೆ. ಹೆಣ್ಣು ಮಕ್ಕಳು ಅನುಭವಿಸುವ ಸೌಂದರ್ಯ ಸಮಸ್ಯೆಯಲ್ಲಿ ಮುಖದ ಮೇಲಿನ ಅನಾವಶ್ಯಕ ಕೂದಲು ಕೂಡ ಒಂದು.
ಹುಬ್ಬಿನ ಮೇಲೆ ದಪ್ಪನೆಯ ಕೂದಲು ಇರುವುದು, ತುಟಿಯ ಮೇಲೆ ಮೂಗಿನ ಕೆಳಗಡೆ ಕೂದಲು ಇರುವುದು ದೊಡ್ಡ ಸಮಸ್ಯೆಯಾಗಿದೆ. ಮುಖವನ್ನು ಯಾವುದಾಮರಿಂದಲೂ ಮುಚ್ಚಿಕೊಳ್ಳಲು ಸಾಧ್ಯ ಇಲ್ಲ. ಹಾಗಾಗಿ ಈ ಸಮಸ್ಯೆ ಇರುವವರು ತುಂಬಾ ನೋವು ಅನುಭವಿಸುತ್ತಾರೆ. ಅದರ ಪರಿಹಾರಕ್ಕಾಗಿ ಮಾರುಕಟ್ಟೆಯಿಂದ ಅನೇಕ ಸೌಂದರ್ಯ ವರ್ಧಕಗಳನ್ನು ತಂದು ಹಚ್ಚುತ್ತಾರೆ. ಆದರೆ ಈ ರಾಸಾಯನಿಕ ಯುಕ್ತ ಸೌಂದರ್ಯವರ್ಧಕಗಳಿಂದ ಮುಖದ ಕೂದಲಿನ ಸಮಸ್ಯೆ ಬಗೆಹರಿಯುವ ಬದಲು ಬೇರೆ ಸಮಸ್ಯೆ ಎದುರಾಗುತ್ತದೆ.
ಮೊಡವೆ, ಕಲೆ ಮುಂತಾದ ಸಮಸ್ಯೆ ಬರುತ್ತದೆ. ಇನ್ನು ಈ ಹುಬ್ಬನ್ನು ಪಾರ್ಲರ್ ಗಳಿಗೆ ಹೋಗಿ ಶೇಪ್ ಕೊಡಬಹುದು.ಆದರೆ ತುಟಯ ಮೇಲಿನ ಕೂದಲನ್ನು ತ್ರೆಡಿಂಗ್ ಮಾಡುವ ಮೂಲಕ ತೆಗೆಯುವಾಗ ತುಂಬಾನೇ ನೋವು ಉಂಟಾಗುತ್ತದೆ. ಇನ್ನು ಕೆಲವರು ಶೇವಿಂಗ್ ಮಾಡುತ್ತಾರೆ. ಆದರೆ ಈ ಶೇವಿಂಗ್ ಮಾಡಿದಾಗ ಕೆಲವೊಮ್ಮೆ ಚರ್ಮ ಕಪ್ಪಾಗುವ ಸಾಧ್ಯತೆ ಕೂಡ ಇರುತ್ತದೆ, ಅದರ ಜೊತೆ ಹೆಚ್ಚಿನ ಕೂದಲು ಬರಲು ಆರಂಭವಾಗುತ್ತದೆ.
ಒಂದು ಮಾಡಲು ಹೋಗಿ ಇನ್ನೊಂದು ಸಮಸ್ಯೆ ಎದುರಾಗುತ್ತದೆ.ಕೆಲವರು ಲೇಸರ್ ಚಿಕಿತ್ಸೆಗಳಂತಹ ಪ್ರಕ್ರಿಯೆಗಳ ಮೊರೆಹೋಗುತ್ತಾರೆ. ಇದು ದುಬಾರಿ ಜೊತೆಗೆ ನೋವಿನಿಂದ ಕೂಡಿರುತ್ತದೆ. ಅದಕ್ಕಾಗಿ, ಮಹಿಳೆಯರ ಮುಖದ ಮೇಲಿರುವ ಕೂದಲನ್ನು ನೈಸರ್ಗಿಕವಾಗಿ ಹೋಗಲಾಡಿಸಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಉತ್ತಮ. ಕೆಲವೊಂದು ಮನೆಮದ್ದುಗಳ ಮೂಲಕ ಮುಖದ ಮೇಲಿನ ಕೂದಲ ಬೆಳವಣಿಗೆಯನ್ನು ಕಡಿಮೆ ಮಾಡುವ ನೈಸರ್ಗಿಕ ಮದ್ದುಗಳಿವೆ.
ಹಾಗಾದರೆ, ಆ ಮನೆಮದ್ದುಗಳಾವುವು ಬನ್ನಿ ಹೇಳುತ್ತೇವೆ. ನಿಂಬೆ ರಸ ಹಾಗೂ ಅರಶಿನ: ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ಅರಿಶಿಣ ಮಿಕ್ಸ್ ಮಾಡಿ ದಿನಕ್ಕೆ ಒಂದು ಬಾರಿಯಂತೆ ಮುಖಕ್ಕೆ ಹಚ್ಚಿದತೆ ಮುಖದ ಮೇಲಿನ ಕೂದಲು ನಿಧಾನಕ್ಕೆ ಮಾಯವಾಗುತ್ತದೆ. ನಿಂಬೆ ರಸ, ಜೇನು ತುಪ್ಪ, ಸಕ್ಕರೆ: ಎರಡು ಚಮಚ ನಿಂಬೆ ರಸ, ಎರಡು ಚಮಚ ಜೇನು ಮತ್ತು ನಾಲ್ಕು ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಬಿಸಿ ಮಾಡಿ, ತಣ್ಣಗಾದ ನಂತರ ಬೇಡವಾದ ಕೂದಲಿನ ಮೇಲೆ ಹಚ್ಚಿ ಒಣಗಲು ಬಿಡಿ, ಒಣಗಿದ ನಂತರ ಹತ್ತಿ ಬಟ್ಟೆಯನ್ನು ಒದ್ದೆ ಮಾಡಿ ಉಜ್ಜಿ ತೆಗೆಯಿರಿ.
ಹಳದಿ, ಮೊಸರು ಮತ್ತು ಕಡಲೆ ಹಿಟ್ಟು: ಈ ಮೂರು ವಸ್ತುವನ್ನು ತಲಾ ಒಂದು ಸ್ಪೂನ್ ನಂತೆ ತೆಗೆದುಕೊಂಡು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮುಖದ ಮೇಲೆ ಬೇಡವಾದ ಕೂದಲು ಬರಲು ಕಾರಣ ಹಾರ್ಮೋನ್ ಇಂಬ್ಯಾಲೆನ್ಸ್. ಹೀಗಾಗಿ ಹಾರ್ಮೋನ್ ಅನ್ನು ಸಮತೋಲನದಲ್ಲಿ ಇರಿಸುವಂತಹ ಆಹಾರವನ್ನು ಸೇವಿಸಬೇಕು.
ಮುಖ್ಯವಾಗಿ ಸೋಯಾಬೀನ್ , ಟೊಮೆಟೊ, ಕಡಲೆ, ದಾಳಿಂಬೆ, ಆಲೂಗಡ್ಡೆ, ಜೀರಿಗೆ, ಸೋಂಪು, ಪ್ಲಮ್, ಬೀನ್ಸ್, ಸೂರ್ಯಕಾಂತಿ ಎಣ್ಣೆ ಮತ್ತು ಬೀಜ, ಅಗಸೆ ಬೀಜ ಇವೆಲ್ಲಾವನ್ನು ಬಳಸಿ ತಿಂದರೆ ಹಾರ್ಮೋನ್ ಬ್ಯಾಲೆನ್ಸ್ ಮಾಡಬಹುದು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.