ಬೇಕಾದಷ್ಟು ದಾನ ಧರ್ಮ ಮಾಡಿರುವ ಪುನೀತ್ ಅವರು, ತಮ್ಮ ಹೆಂಡತಿ ಮಕ್ಕಳಿಗಾಗಿ ಮಾಡಿಟ್ಟಿರುವ ಆಸ್ತಿ ಅದೇಷ್ಟು ಗೊತ್ತಾ? 4 ಜನ್ಮ ಕುಳಿತು ತಿಂದ್ರು ಮುಗಿಯಲ್ಲ ನೋಡಿ!!

ಸುದ್ದಿ

ಇತ್ತೀಚಿಗಷ್ಟೇ ಪುನೀತ್ ಪರ್ವಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಪುನೀತ್ ಅವರು ನಮನ ಅಗಲಿ ಒಂದು ವರ್ಷ ಕಳೆದಿವೆ. ಆದರೆ ಅವರ ನೆನಪು ಮಾತ್ರ ಆಜರಾಮರ. ನಮ್ಮ ಮನಸ್ಸಿನಲ್ಲಿ ಸದಾ ಸದಾ ಕಾಲಕ್ಕೆ ಉಳಿದುಬಿಟ್ಟಿದ್ದಾರೆ ಪುನೀತ್ ರಾಜಕುಮಾರ್. ಡಾಕ್ಟರ್ ರಾಜಕುಮಾರ್ ಅವರನ್ನು ಕಳೆದುಕೊಂಡು ಅಂದು ಮನಸ್ಸು ಎಷ್ಟು ನೊಂದಿತ್ತು ಇಂದಿಗೂ ಅವರ ಬಗ್ಗೆ ಅಭಿಮಾನಿಗಳಿಗೆ ಅದೇ ಪ್ರೀತಿಯ ಭಾವನೆ ಇದೆ.

ಅದೇ ರೀತಿ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ ಅವರ ಬಗೆಗಿನ ಪ್ರೀತಿಯಾಗಲಿ ಅಭಿಮಾನವಾಗಲಿ ಒಂಚೂರು ಕಡಿಮೆಯಾಗಿಲ್ಲ. ಹೌದು ಪುನೀತ್ ಅವರು ದಾನ ಶೂಲಕರ್ಣ ಅಂತ ಹೇಳಿದ್ರು ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಯಾರಿಗೂ ಗೊತ್ತಾಗದ ಹಾಗೆ ಪಬ್ಲಿಸಿಟಿ ಪಡೆದುಕೊಳ್ಳದೆ ಸಾಕಷ್ಟು ಜನರಿಗೆ ಸಹಾಯ ಹಸ್ತ ಚಾಚಿದ ಕೈಗಳು ಅವು.

ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಪುನೀತ್ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಆದರೆ ಎಲ್ಲಿಯೂ ಒಮ್ಮೆಯೂ ಸಹಾಯ ಮಾಡಿರುವುದರ ಬಗ್ಗೆ ಹೇಳಿಕೊಂಡಿಲ್ಲ ಪುನೀತ್ ಅವರನ್ನು ಕಳೆದುಕೊಂಡ ನಂತರವೇ ಅವರು ಮಾಡಿರುವ ಸಾಕಷ್ಟು ಉತ್ತಮ ಕೆಲಸಗಳು ಎಲ್ಲರಿಗೂ ಗೊತ್ತಾಗುವಂತೆ ಆಯ್ತು. ಇದೀಗ ಪುನೀತ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಪಡೆದುಕೊಳ್ಳುತ್ತಿದೆ.

ಮೊದಲ ದಿನವೇ ಚಿತ್ರಮಂದಿರಗಳು ತುಂಬಿ ತುಳುಕಿದ್ದವು. ಪ್ರೀ-ಟಿಕೆಟ್ ಬುಕ್ಕಿಂಗ್ ಮಾಡಿಕೊಂಡ ಪುನೀತ್ ಅಭಿಮಾನಿಗಳು ಗಂಧದ ಗುಡಿಯನ್ನು ನೋಡಿ ಕಣ್ಣಿರು ಹಾಕಿದ್ದಾರೆ. ಮತ್ತೆ ಹುಟ್ತಿ ಬನ್ನಿ ಅಪ್ಪು ಅಂತ ಅಪ್ಪು ನೆನಪಿಸಿಕೊಂಡು ದುಃಖ ವ್ಯಕ್ತಪಡಿಸಿದ್ದಾರೆ. ಬಹುಶಃ ಕೋಟಿ ಜನರ ಪ್ರೀತಿ ಗಳಿಸಿಕೊಂಡ ಅಪ್ಪು ನಿಜಕ್ಕೂ ದೇವರೇ.

ತಂದೆಯೊಂದಿಗೆ ಬಹಳ ಚಿಕ್ಕ ವಯಸ್ಸಿನಿಂದಲೇ ಸಿನಿಮಾ ರಂಗ ಪ್ರವೇಶಿಸಿದ ಪುನೀತ್ ಅವರು ಬಾಲ ನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಸಂಭಾವನೆಯನ್ನು ಪಡೆದುಕೊಳ್ಳಲು ಆರಂಭಿಸಿದವರು ಇವರಿಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪುನೀತ್ ರಾಜಕುಮಾರ್ ಸಾಕಷ್ಟು ಶ್ರೀಮಂತರು ಕೂಡ ಹೌದು.

ಬಹಳ ಸಣ್ಣ ವಯಸ್ಸಿನಲ್ಲಿ ಅಂದರೆ 46 ವರ್ಷಗಳಿಗೆ ನಮ್ಮನ್ನ ಅಗಲಿದ ಪುನೀತ್ ತಮ್ಮ ಇಬ್ಬರು ಹೆಣ್ಣು ಮಕ್ಕಳು ಹಾಗೂ ಹೆಂಡತಿಗೆ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ಬೇಕಾದ ವ್ಯವಸ್ಥೆ ಮಾಡಿ ಇಟ್ಟಿದ್ದಾರೆ. ಅಶ್ವಿನಿ ಅವರ ಬಳಿ ಒಂದು ಕೆಜಿಗೂ ಅಧಿಕ ಚಿನ್ನವಿದೆ ಇನ್ನು ಐಷಾರಾಮಿ ಬಂಗಲೆ ಐಶಾರಾಮಿ ಕಾರುಗಳು.

ಬೈಕ್ ಗಳು ಹೀಗೆ ಹಲವು ಚಿರಾಸ್ತಿಗಳನ್ನ ಮಾಡಿಟ್ಟಿರುವ ಪುನೀತ್ ಸುಮಾರು 100 ಕೋಟಿ ಒಡೆಯ ಎಂದು ಹೇಳಬಹುದು. ಸದಾ ಮುಗುಳ್ನಗುತ್ತಿದ್ದ ಪುನೀತ್ ರಾಜಕುಮಾರ್ ಅವರು ಒಮ್ಮೆಯೂ ತನ್ನ ಬಳಿ ದುಡ್ಡಿದೆ ಎನ್ನುವ ಅಹಂಕಾರ ತೋರಿಸಲಿಲ್ಲ ಸಾಮಾನ್ಯರ ಜೊತೆ ಸಾಮಾನ್ಯನಾಗಿ ಬೆರೆತು ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ ನಮ್ಮ ಅಪ್ಪು.

Leave a Reply

Your email address will not be published. Required fields are marked *