IMG 20220803 083350

ಬೆಳಿಗ್ಗೆ ಎದ್ದ ತಕ್ಷಣ ವಾರದಲ್ಲಿ ಒಮ್ಮೆ ಈ ಒಂದು ಜ್ಯೂಸ್ ಮನೆಯಲ್ಲೇ ಮಾಡಿ ಕುಡಿಯಿರಿ! ನೀವು ಎಷ್ಟೇ ದಪ್ಪ ಇದ್ದರೂ ನಿಮ್ಮ ತೂಕ ಇಳಿಸುತ್ತದೆ ನೋಡಿ!!

ಸುದ್ದಿ

ಸಾಮಾನ್ಯವಾಗಿ ಇಂದು ಎಲ್ಲರಿಗೂ ಹೆಚ್ಚಾಗಿ ಯೋಚನೆ ಇರೋದು ಇದೊಂದೇ ಕಾರಣಕ್ಕೆ ಅನಿಸುತ್ತೆ. ಅದೇ ದೇಹದ ಬೊಜ್ಜು ಅಥವಾ ಅತಿಯಾದ ತೂಕ. ಒಮ್ಮೆ ದೇಹದ ತೂಕ ಹೆಚ್ಚಾದರೆ ಅದನ್ನು ಕರಗಿಸೋದು ಅಷ್ಟು ಸುಲಭವಲ್ಲ. ಹಾಗಾಗಿ ಜನ ತರಾವರಿ ವ್ಯಾಯಾಮ, ಡಯಟಿಂಗ್, ಜಾಗಿಂಗ್, ವಾಕಿಂಗ್ ಅಂತ ದಿನವಿಡೀ ದೇಹವನ್ನು ಕರಗಿಸುವುದರಲ್ಲಿ ಸಮಯ ಕಳೆಯುತ್ತಾರೆ. ದೇಹದ ತೂಕ ಜಾಸ್ತಿಯಾದರೆ ಅಥವಾ ದೇಹದಲ್ಲಿ ಬೊಜ್ಜು ಜಾಸ್ತಿ ಆದರೆ ಹಲವಾರು ಅನಾರೋಗ್ಯ ಸಮಸ್ಯೆಗಳು ಕಾಡೋದು ಸಹಜ.

ಇದೇ ವಿಷಯಕ್ಕೆ ಇಂದು ಜನರು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಹಾಗಾಗಿಯೇ ದೇಹದ ತೂಕ ಇಳಿಸಿಕೊಳ್ಳುವುದಕ್ಕೆ ಸಾಕಷ್ಟು ಸರ್ಕಸ್ ಮಾಡುತ್ತಾರೆ. ಅಷ್ಟೇ ಅಲ್ಲ ದೇಹದ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಶಸ್ತ್ರ ಚಿಕಿತ್ಸೆಯ ಮೊರೆ ಹೋಗುವವರು ಇದ್ದಾರೆ. ಇದರಿಂದ ಉದ್ಭವಿಸುವ ಇತರ ಸಮಸ್ಯೆಗಳ ಬಗ್ಗೆ ಅಂತೂ ಹೇಳತೀರದು. ಇನ್ನು ದೇಹದಲ್ಲಿ ಅತಿಯಾದ ಕೊಬ್ಬು ಬೆಳೆಯುವುದಕ್ಕೆ ನಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮಗಳೇ ಕಾರಣ.

ಜಂಕ್ ಫುಡ್ ಗಳನ್ನ ಅತಿಯಾಗಿ ಸೇವಿಸುವುದು ಅಥವಾ ಮಧ್ಯಪಾನ ಮಾಡುವುದು ಇಂತಹ ಕೆಲವು ಜೀವನ ಕ್ರಮಗಳಿಂದಾಗಿ ದೇಹದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತೆ. ದೇಹದಲ್ಲಿ ಬೊಜ್ಜು ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು, ಶುಗರ್, ರಕ್ತದೊತ್ತಡ ಮೊದಲಾದ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ನಮ್ಮ ದೇಹವನ್ನು ಆರೋಗ್ಯಕರ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಹಾಗಂತ ಇದಕ್ಕೆಲ್ಲ ಸಾಕಷ್ಟು ಮೆಡಿಸಿನ್ ಗಳ ಮೊರೆ ಹೋಗುವುದು ತಪ್ಪು. ಅದರ ಬದಲು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ. ಇಂತಹ ಒಂದು ಪಾನೀಯವನ್ನು ನಾವು ಇಂದು ತಿಳಿಸಿಕೊಡುತ್ತೇವೆ. ಇದು ವಾರದಲ್ಲಿ ಒಂದು ದಿನ ಕುಡಿದ್ರು ಸಾಕು ನಿಮ್ಮ ದೇಹದ ತೂಕ ಕಡಿಮೆಯಾಗುತ್ತೆ. ಬನ್ನಿ ಹಾಗಾದ್ರೆ ಈ ಪಾನೀಯವನ್ನು ಮಾಡುವುದು ಹೇಗೆ ನೋಡೋಣ.

ಪಾನೀಯ ಮಾಡಲು ಬೇಕಾಗುವ ಸಾಮಗ್ರಿಗಳು; ಒಂದು ಚಮಚ ಜೀರಿಗೆ, ಒಂದು ಇಂಚು ಹಸಿ ಶುಂಠಿ, ಒಂದು ಬೌಲ್ ಪುದಿನ ಎಲೆ, ಒಂದು ಸೌತೆಕಾಯಿ (ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ) ಮಾಡುವ ವಿಧಾನ: ಈ ಎಲ್ಲಾ ವಸ್ತುಗಳು ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುತ್ತವೆ. ಮತ್ತು ದೇಹದಲ್ಲಿರುವ ಟಾಕ್ಸಿಕ್ ಅನ್ನು ಹೊರಹಾಕುತ್ತವೆ. ಸುಮಾರು ಎರಡು ಲೀಟರ್ ಗಳಷ್ಟು ನೀರನ್ನ ಒಂದು ದೊಡ್ಡ ಪಾತ್ರೆಯಲ್ಲಿ ಇಟ್ಟು ಕುದಿಸಿ.

ಇದು ಕುದಿಯುತ್ತಿರುವಾಗ ಹೆಚ್ಚಿಟ್ಟುಕೊಂಡ ಸೌತೆಕಾಯಿ, ಜೀರಿಗೆ, ಶುಂಠಿ ಹಾಗೂ ಪುದೀನಾ ಎಲೆಗಳನ್ನು ಹಾಕಿ. ನಂತರ ಇದು ಬಣ್ಣ ಬಿಡುವವರೆಗೆ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ಸ್ವಲ್ಪ ತಣ್ಣಗಾಗುವವರೆಗೆ ಹಾಗೆಯೇ ಬಿಡಿ. ಈ ಪಾನೀಯ ತಣ್ಣಗಾದ ಮೇಲೆ ಅದನ್ನು ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿ. ಈ ಪಾನೀಯವನ್ನು ಒಂದೊಂದೇ ಲೋಟದಂತೆ ಇಡೀ ದಿನ ಕುಡಿಯುತ್ತಿರಬೇಕು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ಪಾನೀಯವನ್ನು ಕುಡಿಯಬಹುದು. ಇದನ್ನ ಕುಡಿಯುವಾಗ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು ಬಾಯಿಗೂ ಅಷ್ಟೇ ರುಚಿ ಕೊಡುತ್ತದೆ.

ಇನ್ನು ಈ ಪಾನೀಯವನ್ನು ಯಾವಾಗ ಸೇವಿಸಬೇಕು; ವಾರದಲ್ಲಿ ಒಂದು ದಿನ ಮಾತ್ರ ಈ ಪಾನೀಯವನ್ನು ಸೇವಿಸಬೇಕು ವಾರದಲ್ಲಿ ಒಂದು ದಿನ ಈ ಪಾನೀಯ ತಯಾರಿಸಿಕೊಂಡು ಬೆಳಿಗ್ಗೆಯಿಂದ ಸಂಜೆವರೆಗೆ ಕುಡಿಯಬಹುದು ಆದರೆ ಊಟ ಮಾಡುವ ಅರ್ಧ ಗಂಟೆ ಮೊದಲು ಹಾಗೂ ಊಟ ಆಗಿ ಅರ್ಧ ಗಂಟೆ ನಂತರ ಈ ಪಾನೀಯವನ್ನು ಸೇವಿಸಬಹುದು. ಹೀಗೆ ಮಾಡಿದರೆ ದೇಹದ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ದೇಹದಲ್ಲಿನ ಇತರ ಕಾಯಿಲೆಗಳು ಕೂಡ ಗುಣಮುಖವಾಗುತ್ತದೆ. ಹಾಗಾಗಿ ಈ ಪಾನೀಯವನ್ನು ದೇಹದ ತೂಕ ಇಳಿಸುವುದಕ್ಕೆ ಮಾತ್ರವಲ್ಲ ಬೇರೆಯವರು ಕೂಡ ಇತರ ಅನಾರೋಗ್ಯ ಸಮಸ್ಯೆಗಳಿಂದ ನಿವಾರಣೆ ಪಡೆಯಲು ಕುಡಿಯಬಹುದು.

Leave a Reply

Your email address will not be published. Required fields are marked *