ಮುರುಘಾ ಶ್ರೀ ಸ್ವಾಮಿ ಅವರ ಮೇಲೆ ಅ-ತ್ಯಾಚಾರದ ದೂರು ದಾಖಲಾಗಿ ಅವರನ್ನು ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗದ ಮೂರುಘಾ ಮಠದ ಶಿವಕುಮಾರ ಮುರುಗ ಶರಣ ಸ್ವಾಮಿ, ಮುರುಘಾ ಮಠದಲ್ಲಿ ಓದಲು ಮನೆಯಿಂದ ಬಂದು ಇಲ್ಲಿ ಹಾಸ್ಟೆಲ್ ನಲ್ಲಿ ಇದ್ದ ಹುಡುಗಿಯರ ಮೇಲೆ ತಮಗೆ ಮನಬಂದಂತೆ ವರ್ತಿಸುತ್ತಿದ್ದರು. ಈ ಬಗ್ಗೆ ಅಲ್ಲಿನ ವಿದ್ಯಾರ್ಥಿನಿಯರೇ ದೂರು ನೀಡಿದ್ದರು ಈ ಬಗ್ಗೆ ಮುರುಘಾ ಶ್ರೀ ಅವರ ಮೇಲೆ ಸಾಕಷ್ಟು ತನಿಖೆ ನಡೆಸಲಾಗಿದೆ.
ಇದೀಗ ವಿದ್ಯಾರ್ಥಿನಿಯರು ಮತ್ತೊಂದು ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ. ಇದು ಮುರುಘಾ ಶ್ರೀ ಅವರ ವಿರುದ್ಧ ಬಹಳ ಬಲವಾದ ಸಾಕ್ಷಿಯಾಗಿದೆ. ವಿದ್ಯಾರ್ಥಿನಿಯರು ನೀಡಿದ ಸ್ಪೋಟಕ ಮಾಹಿತಿ ಏನು ಗೊತ್ತಾ? “ಹಾಸ್ಟೆಲ್ ನಿಂದ ವಾರ್ಡನ್ ನಮ್ಮನ್ನ ಸ್ವಾಮೀಜಿ ಕೊಠಡಿಗೆ ಕಳುಹಿಸುತ್ತಿದ್ದರು. ಅಲ್ಲಿ ಮತ್ತು ಬರುವ ಹಣ್ಣನ್ನ ನೀಡಲಾಗುತ್ತಿತ್ತು. ನಂತರ ಸ್ವಾಮೀಜಿ ನಮ್ಮ ಮೇಲೆ ಮನಬಂದಂತೆ ಅ-ತ್ಯಾಚಾರ ಎಸೆಗುತ್ತಿದ್ದರು.
ನಮಗೆ ಎಚ್ಚರವಾದಾಗ ನಮ್ಮ ಮೈ ಮೇಲೆ ಬ’ಟ್ಟೆಗಳೆ ಇರುತ್ತಿರಲಿಲ್ಲ ನಂತರ ಯಾರಿಗೂ ಈ ವಿಷಯ ಹೇಳಬಾರದು ಎಂದು ಸ್ವಾಮೀಜಿ ಚಾ’ಕು ತೋ’ರಿಸಿ ಬೆ’ದರಿಕೆ ಒಡ್ಡುತ್ತಿದ್ದರು”. ಹೀಗೆ ವಿದ್ಯಾರ್ಥಿಗಳು ಮುರುಘಾ ಮಠದ ಸ್ವಾಮೀಜಿ ವಿರುದ್ಧ ಸ್ಪೋಟಕ ಮಾಹಿತಿ ನೀಡಿದ್ದಾರೆ. ಇದರಿಂದ ಮುರುಘಾ ಮಠದ ಸ್ವಾಮೀಜಿಯ ಇನ್ನಷ್ಟು ಮುಖವಾಡ ಬಯಲಾಗುತ್ತಿದೆ.
ಆದರೆ ಮುರುಘಾ ಶ್ರೀ ಅವರ ಸ್ಟೇಟ್ಮೆಂಟ್ ಮಾತ್ರ ಪೂರ ಉಲ್ಟಾ ಆಗಿದೆ. ನನಗೆ ವಾರ್ಡನ್ ರಶ್ಮಿ ಗೊತ್ತೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿನಿಯರು ಹೇಳುವಂತೆ ವಾರ್ಡನ್ ರಶ್ಮಿ ಅವರೇ ಮುರುಘಾ ಶ್ರೀ ಬಳಿಗೆ ವಿದ್ಯಾರ್ಥಿನಿಯರನ್ನು ಕಳುಹಿಸುತ್ತಿದ್ದರು. ಇದೀಗ ನೋಡಿದರೆ ಮುರುಘಾ ಮಠದ ಸ್ವಾಮೀಜಿ ನನಗೆ ರಶ್ಮಿ ಗೊತ್ತೇ ಇಲ್ಲ ಎಂಬಂತಹ ಮಾತುಗಳನ್ನು ಆಡಿದ್ದಾರೆ.
ಅದು ಅಲ್ಲದೆ ರಶ್ಮಿ ಮಕ್ಕಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ನಾನು ಆ ವಿಷಯದಲ್ಲಿ ಯಾವುದೇ ತಲೆ ಹಾಕುತ್ತಿರಲಿಲ್ಲ ವಾರಕ್ಕೊಮ್ಮೆ ವಿದ್ಯಾರ್ಥಿನಿಯರಿಗೆ ಡ್ರೈ ಫ್ರೂಟ್ಸ್, ಹಣ್ಣುಗಳನ್ನು ಕೊಡ್ತಾ ಇದ್ದೆ. ಆದರೆ ಅದರಲ್ಲಿ ಯಾವುದೇ ಮತ್ತು ಬರುವ ಔಷಧಿ ಇರಲಿಲ್ಲ. ಇದು ನನ್ನ ವಿರುದ್ಧ ನಡೆದ ಹುನ್ನಾರ ಅಷ್ಟೇ ಎಂದು ಮೂರುಘಾ ಸ್ವಾಮೀಜಿ ಹೇಳಿದ್ದಾರೆ.
ಇನ್ನು ಮುರುಘಾ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ ಸಂತ್ರಸ್ತ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಹಾಸ್ಟೆಲ್ ನಲ್ಲಿ ಇರುವ ಉಳಿದ 15 ವಿದ್ಯಾರ್ಥಿನಿಯರು ಮುರುಘ ಶ್ರೀಗಳು ನಮ್ಮ ಮೇಲೆ ಯಾವುದೇ ರೀತಿಯ ದೌ-ರ್ಜನ್ಯ ನಡೆಸಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಮುರುಘಾ ಅವರ ಪರವಾಗಿ ಪ್ಲಸ್ ಪಾಯಿಂಟ್ ಆಗಿದೆ. ಸರಿಯಾದ ತನಿಖೆ ನಂತರವಷ್ಟೇ ಈ ಪ್ರಕರಣದ ಸತ್ಯಾಸತ್ಯತೆಗಳು ಹೊರ ಬರಬೇಕು.
ಯಾರ ಮಾತಿನಲ್ಲಿ ಸತ್ಯವಿದೆ ಯಾರು ಹೇಳ್ತಾ ಇರೋದು ಅಸತ್ಯ ಎನ್ನುವುದು ಇನ್ನೂ ಸರಿಯಾಗಿ ಬಹಿರಂಗವಾಗಿಲ್ಲ. ಶ್ರೀಗಳು ಇದು ತನ್ನ ವಿರುದ್ಧ ಮಾಡಿರುವ ಕುತಂತ್ರ ಎಂದು ಹೇಳುತ್ತಿದ್ದಾರೆ. ಆದರೆ ಸಂತ್ರಸ್ತ ವಿದ್ಯಾರ್ಥಿನಿಯರು ಶ್ರೀಗಳ ವಿರುದ್ಧ ಸ್ಟ್ರಾಂಗ್ ಆಗಿ ದೂರನ್ನು ದಾಖಲಿಸಿದ್ದಾರೆ. ಹಾಗಾಗಿ ತನಿಖೆಯ ಬಳಿಕ ಈ ಪ್ರಕರಣದ ನಿಜ ವಿಷಯ ಬೆಳಕಿಗೆ ಬರಲಿದೆ.