ಇತ್ತೀಚಿಗೆ ನಿವೇದಿತಾ ಗೌಡ ಹಾಗೂ ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದ ಮೂಲಕ ಒಂದಲ್ಲ ಒಂದು ಪೋಸ್ಟ್ ಹಾಕಿ ಜನರನ್ನ ರಂಜಿಸುತ್ತಿದ್ದಾರೆ. ಅದರಲ್ಲೂ ನಿವೇದಿತ ಗೌಡ ಹಾಗೂ ಚಂದನ್ ಜೋಡಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಚಂದನ್ ಹಾಗೂ ನಿವೇದಿತಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿನಿಮಾದಲ್ಲಿ ಅಭಿನಯಿಸುವುದಕ್ಕೂ ಕೂಡ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಇನ್ನು ವೈಷ್ಣವಿ ಗೌಡ ಅವರ ಬಗ್ಗೆ ಅಂತೂ ಹೇಳೋದೇ ಬೇಡ ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನದ ಕೆಲವು ಘಟನೆಗಳ ಕುರಿತಾಗಿ ಹೆಚ್ಚು ಸುದ್ದಿಯಲ್ಲಿ ಇರುವ ವೈಷ್ಣವಿ ಗೌಡ ಕನ್ನಡಿಗರ ಅಚ್ಚುಮೆಚ್ಚಿನ ನಟಿ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕನ್ನಡಿಗರ ಮನ ಗೆದ್ದ ನಟಿ ವೈಷ್ಣವಿ ಗೌಡ ಹಾಗೂ ನಿವೇದಿತಾ ಗೌಡ ಇಬ್ಬರು ಒಟ್ಟಾಗಿ ವಿಡಿಯೋ ಒಂದರಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಸಾವಿರಾರು ಫಾಲೋವರ್ಸ್ ಹೊಂದಿರುವ ನಿವೇದಿತಾ ಗೌಡ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಾರಿ ವೈಷ್ಣವಿ ಗೌಡ ಕೂಡ ಕಾಣಿಸಿಕೊಂಡಿದ್ದರು ಚಾಲೆಂಜ್ ಅನ್ನು ವೈಷ್ಣವಿ ಅವರಿಗೆ ನೀಡಿದರು ಆಯ್ತು ಕೊನೆಗೆ ನಿವೇದಿತಾ ಗೌಡ ತಮ್ಮ ಮನೆಯಲ್ಲಿ ನಡೆದಿರುವಂತಹ ಒಂದು ಆಶ್ಚರ್ಯಕರ ಘಟನೆಯನ್ನು ವೈಷ್ಣವಿ ಗೌಡ ಅವರಿಗೆ ವಿವರಿಸುತ್ತಾರೆ. ವೈಷ್ಣವಿ ಗೌಡ ಸಣ್ಣಪುಟ್ಟ ಆನೆ ಇರುವೆ ಜೋಕ್ ಹೇಳುತ್ತಾರೆ.
ಆದರೆ ನಿವಿ ಈ ಬಾರಿ ಹೇಳಿದ ಕಥೆ ಕೇಳಿ ವೈಷ್ಣವಿ ಗೌಡರು ಅದೇನು ಗೊತ್ತಾ? ಹೌದು, ನಿವೇದಿತಾ ಗೌಡ ಮನೆಯಲ್ಲಿ ಚಂದನ್ ಇಲ್ಲದೆ ಇರುವ ಸಮಯದಲ್ಲಿ ಒಮ್ಮೆ ಸುಸ್ತಾಗಿ ಮಲಗಿದ್ದರಂತೆ. ಕೊನೆಗೆ 8 ಗಂಟೆಯ ಹೊತ್ತಿಗೆ ಊಟಕ್ಕೆ ಆರ್ಡರ್ ಮಾಡುತ್ತಾರೆ. ರಾತ್ರಿ ಆದ್ದರಿಂದ ಕೆಳಗಡೆ ಸ್ವಲ್ಪ ಕತ್ತಲೆ ಇತ್ತು. ಅಷ್ತರಲ್ಲಿ ನಿವಿ ಆರ್ಡರ್ ಮಾಡಿದ ಫುಡ್ ಬರುತ್ತದೆ. ಹಾಲ್ನಲ್ಲಿ ಬಂದು ಕುಳಿತುಕೊಳ್ಳುವುದಕ್ಕೆ ನೋಡಿದಾಗ ಸೋಫಾ ಹಿಂದೆ ಸರಿದಿತ್ತಂತೆ.
ಕೊನೆಗೆ ಕರೆಂಟ್ ಹೋಗಿದ್ದಕ್ಕೆ ಯುಪಿಎಸ್ ಕೂಡ ಡೌನ್ ಆಗಲು ಶುರುವಾಯಿತು. ಇದರಿಂದ ಭಯಗೊಂಡ ನಿವೇದಿತ ಚಂದನ್ ಗೆ ಕಾಲ್ ಮಾಡಿ ಸೋಫಾ ಸರಿಸಿದ್ದೀರಿ ಎಂದು ಕೇಳುತ್ತಾರೆ. ಚಂದನ್ ಇಲ್ಲ ನಾನೇನು ಮಾಡಿಲ್ಲ ಎಂದು ಹೇಳುತ್ತಾರೆ ಕೊನೆಗೆ ಇನ್ನಷ್ಟು ಭಯ ಕಾಡುತ್ತೆ ನಾನು ಅಮ್ಮನ ಮನೆಗೆ ಹೋಗ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಸರಿಯಾಗಿ ಚಂದನ್ ಕೂಡ ನನಗೂ ಅದೇ ಸರಿ ಎನಿಸುತ್ತದೆ ಎಂದು ಹೇಳಿದ್ದಾರೆ.
ನೀವು ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಕರೆಂಟ್ ಬರುತ್ತೆ ನಾನು ಈ ಮನೆ ಬಿಟ್ಟು ಹೋಗಬಾರದು ಎನ್ನುವ ಕಾರಣಕ್ಕೆ ಕರೆಂಟ್ ಬಂದ ಹಾಗೆ ಫೀಲ್ ಆಯ್ತು ಎಂದು ನಿವೇದಿತಾ ಅವರು ಹೇಳುತ್ತಾರೆ. ಈ ಕಥೆ ನಿಜಕ್ಕೂ ಭಯಾನಕವಾಗಿದೆ ಎಂದು ವೈಷ್ಣವಿ ಗೌಡ ಕೂಡ ಹೇಳುತ್ತಾರೆ. ಕೊನೆಗೆ ಪೂರ್ತಿ ನಾಗರಬಾವಿಯಲ್ಲಿ ಪವರ್ ಕಟ್ ಆಗಿತ್ತು ಅದಕ್ಕೆ ನಮ್ಮ ಮನೆಯಲ್ಲಿ ಕರೆಂಟ್ ಇರಲಿಲ್ಲ ಎಂದು ನಿವಿ ಹೇಳುತ್ತಾರೆ.
ನಿವಿ ತಮ್ಮ ಕಥೆ ಹೇಳಿ ಮುಗಿಸುವಷ್ಟರಲ್ಲಿ ವೈಷ್ಣವಿ ಗೌಡ ಅವರ ಪ್ಲೇಟ್ ನಲ್ಲಿ ಇದ್ದ ಮುದ್ದೆ ಕಾಣೆಯಾಗಿತ್ತು ಆ ಮುದ್ದೆ ಏನಾಗಿರಬಹುದು ಅಂತ ಇಬ್ಬರು ಯೋಚನೆ ಮಾಡುತ್ತಾರೆ ನೀನು ಹೇಳಿರುವ ಕಥೆಗೂ ಮುದ್ದೆ ಕಾಣೆ ಆಗಿರುವುದಕ್ಕೂ ಏನೋ ಸಂಬಂಧ ಇದೆ ಅಂತ ವೈಷ್ಣವಿ ಗೌಡ ಹೇಳುತ್ತಾರೆ. ಹಾಗಾದ್ರೆ ವೈಷ್ಣವಿ ಗೌಡ ಅವರ ಪ್ಲೇಟ್ ನಲ್ಲಿ ಇದ್ದ ಮುಂದೆ ಎಲ್ಲಿ ಹೋಯಿತು ಈ ವಿಡಿಯೋ ನೋಡಿ ನೀವು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.