ಮಿಲ್ಕಿ ಬ್ಯೂಟಿ ಹಾಗೂ ಡಿಂಪಲ್ ಕ್ವೀನ್ ವೈಷ್ಣವಿ ಗೌಡ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಅಗ್ನಿಸಾಕ್ಷಿ ಧಾರವಾಹಿ ಯಲ್ಲಿ ಸನ್ನಿಧಿ ಪಾತ್ರ ಮಾಡುವ ಮೂಲಕ ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ. ದೇವಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ವೈಷ್ಣವಿ ಗೌಡ ‘ಪುನರ್ ವಿವಾಹ’ ಹಾಗೂ ‘ಅಗ್ನಿ ಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆದರೆ ಇವರು ಜನರಿಗೆ ಹತ್ತಿರವಾಗಿದ್ದು ಹಾಗೂ ಫೇಮಸ್ ಆಗಿದ್ದು ಮಾತ್ರ ಅಗ್ನಿಸಾಕ್ಷಿ ಧಾರವಾಹಿ ಮೂಲಕ.
ಇವರು ‘ಕುಣಿಯೋಣು ಬಾರಾ’ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದಾರೆ. ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋನಲ್ಲಿ ವೈಷ್ಣವಿ ಗೌಡ ಆಂಕರಿಂಗ್ ಮಾಡಿದ್ದಾರೆ. ‘ಗಿರಗಿಟ್ಲೆ’ ಸಿನಿಮಾದಲ್ಲಿ ಅದೇ ರೀತಿ ಭಲೇ ಹುಚ್ಚ ಎಂಬ ಸಿನಿಮಾದಲ್ಲೂ ಇವರು ನಟಿಸಿದ್ದರು. ಅದೇ ರೀತಿ ‘ಬಹುಕೃತ ವೇಷಂ’ ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಒಂದು ರೀತಿ ಹೇಳುವುದಾದರೆ ವೈಷ್ಣವಿ ಗೌಡ ಸಕಲ ಕಲಾ ವಲ್ಲಭೆ.
ನಟನೆ ಮಾತ್ರವಲ್ಲದೆ, ಡ್ಯಾನ್ಸ್, ಹಾಡು, ನಿರೂಪಣೆ ಅದೇ ರೀತಿ ಯೋಗ, ಧ್ಯಾನ ದಲ್ಲೂ ಮುಂದಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ ವೈಷ್ಣವಿ ಗೌಡ ಸಖತ್ ಟ್ಯಾಲೆಂಟೆಡ್ ಹುಡುಗಿ. ಇವರಿಗೆ ಭರತನಾಟ್ಯಂ, ಕುಚುಪುಡಿ, ಬೆಲ್ಲಿ ಡ್ಯಾನ್ಸ್ ಗೊತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ವೈಷ್ಣವಿ ಗೌಡ ಆಗಾಗ್ಗೆ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ತಮ್ಮ ಅಭಿಮಾನಿಗಳನ್ನು ರಂಜಿಸಲು ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ. ವೈಷ್ಣವಿ ಗೌಡ ಅವರು ಬಿಗ್ ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದರು. ಮೊದಮೊದಲು ಸೈಲೆಂಟ್ ಆಗಿದ್ದ ವೈಷ್ಣವಿ ಗೌಡ ತದ ನಂತರದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಬಿಟ್ಟಿದ್ದರು. ಅಷ್ಟೇ ಅಲ್ಲ ಇವರು ಪ್ರತಿನಿತ್ಯ ಯೋಗ ಧ್ಯಾನ ಮಾಡುತ್ತಿದ್ದರು. ಇವರ ಯೋಗಾಸನಕ್ಕೆ ಬಿಗ್ ಬಾಸ್ ವೀಕ್ಷಕರು ಮಾತ್ರವಲ್ಲದೆ ಸ್ಪರ್ಧಿಗಳು ಕೂಡ ಫಿದಾ ಆಗಿದ್ದರು.
ಬಿಗ್ ಬಾಸ್ ಮನೆಯಿಂದ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಹೊರ ಬಂದ ನಂತರ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಏನಾದರೂ ಒಂದು ಮಾಡುತ್ತಿರುತ್ತಾರೆ. ತನ್ನದೇ ಆದ ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ಅದರಲ್ಲಿ ಯಾವುದಾದರೂ ಒಂದು ವಿಷಯದ ಕುರಿತು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ.
ಡ್ಯಾನ್ಸ್ ಹಾಗೂ ಯೋಗಾಸನದ ವಿಡಿಯೋಗಳನ್ನು ಹೆಚ್ಚಾಗಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿ ಯೋಗಾಸನ ಮಾಡಿರುವ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇವರ ಯೋಗಾಸನದ ಭಂಗಿಯನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಫ್ಲೆಕ್ಸಿಬಲ್ ಆಗಿ ಯೋಗಾಸನದ ಬೇರೆ ಬೇರೆ ಭಂಗಿಗಳನ್ನು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಯಾವುದೇ ಧಾರವಾಹಿಗಳಲ್ಲಿ ಕಾಣಿಸಿಲ್ಲ. ಬದಲಾಗಿ ಸೋಶಿಯಲ್ ಮೀಡಿಯಾ ದಲ್ಲಿ ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಹಲವು ಪ್ರಾಡಕ್ಟ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಕಪ್, ಸೀರೆ, ಜ್ಯೂವೆಲರಿಗಳ ಬಗ್ಗೆ ಜಾಹೀರಾತುಗಳಲ್ಲಿ ಇವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವೈಷ್ಣವಿ ಗೌಡ ಅವರ ಈ ಯೋಗಾಸನದ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram