ಇಂದು ಸಾಮಾನ್ಯವಾಗಿ ಎಜುಕೇಶನ್ ಅಥವಾ ಉತ್ತಮ ಶಿಕ್ಷಣ ಬೇಕು ಅಂದ್ರೆ ದಕ್ಷಿಣ ಕನ್ನಡದಲ್ಲಿ ಓದಬೇಕು ಅಂತ ಹೇಳಲಾಗುತ್ತೆ. ಯಾಕಂದ್ರೆ ದಕ್ಷಿಣ ಕನ್ನಡದಲ್ಲಿ ಸಿಗುವಷ್ಟು ಅತ್ಯುತ್ತಮ ವಿದ್ಯಾರ್ಥಿ ಬೇರೆ ಕಡೆ ಸಿಗಲು ಸಾಧ್ಯವಿಲ್ಲ ಹಾಗಾಗಿ ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಬೇರೆ ಬೇರೆ ವಿಷಯಗಳ ಅಧ್ಯಯನ ಮಾಡುವುದಕ್ಕೆ ವಿದ್ಯಾರ್ಥಿಗಳು ಬರುತ್ತಾರೆ. ಮಂಗಳೂರು ಉಡುಪಿ, ಮಣಿಪಾಲ್ ಮೂಡುಬಿದರೆ ಉಜಿರೆ ಹೀಗೆ ಮೊದಲದ ವಿದ್ಯಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮುಗಿಬಿದ್ದು ತಮ್ಮ ಶಿಕ್ಷಣಕ್ಕಾಗಿ ಸೀಟ್ ಗಿಟ್ಟಿಸಿಕೊಳ್ತಾರೆ.
ಇನ್ನು ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಅಷ್ಟೇ ಉತ್ತಮವಾಗಿ ಅದೇನೋ ಮಾಡ್ತಾರೆ ಹಾಗಾಗಿ ಯಾವುದೇ ವಾರ್ಷಿಕ ರಿಸಲ್ಟ್ ಬಂದ್ರು ದಕ್ಷಿಣ ಕನ್ನಡ ಮುಂಚೂಣಿಯಲ್ಲಿ ಇರುತ್ತೆ. ಇದು ಶಿಕ್ಷಣದ ಬಗ್ಗೆ ಆಯ್ತು ಇನ್ನು ಒಂದು ವಿಷಯದಲ್ಲಿ ತಕ್ಷಣ ಕನ್ನಡ ತುಂಬಾನೇ ಫೇಮಸ್ ಹಾಗೆ ಮೊದಲ ಸ್ಥಾನದಲ್ಲಿದೆ. ಯಾವ ವಿಷಯದಲ್ಲಿ ಗೊತ್ತಾ? ದಕ್ಷಿಣ ಕನ್ನಡ, ಮ’ದ್ಯಪಾ’ನ ಪ್ರಿಯರ ನಾಡು.
ಇಲ್ಲಿ ಮದುವೆ ದೈವ ಪೂಜೆ ಬರ್ತಡೇ ಪಾರ್ಟಿ ಹೀಗೆ ಯಾವುದೇ ಸಮಾರಂಭಗಳಾಗಲಿ ಅಲ್ಲಿ ಏನೇ ಇಲ್ದಿದ್ರೂ ಮ’ದ್ಯ ಮಾತ್ರ ಇರಲೇಬೇಕು. ಅಂದಹಾಗೆ ಇಲ್ಲಿ ‘ಒಕೇಶನಲಿ ಕುಡಿಯುತ್ತೇನೆ’ ಅನ್ನುವ ಜನ ಸಿಗೋದೇ ಕಡಿಮೆ. ಯಾವುದಾದರೂ ಪೂಜಾ ಸಮಯದಲ್ಲಿ ಮಾತ್ರ ಮ’ದ್ಯ ಸೇವಿಸುವುದಿಲ್ಲ ಅಂತ ಹೇಳುವವರೇ ಹೆಚ್ಚು. ಹೌದು ದಕ್ಷಿಣ ಕನ್ನಡದಲ್ಲಿ ಬರೋಬ್ಬರಿ ದಿನಕ್ಕೆ ಒಂದು ಲಕ್ಷ ಲೀಟರ್ ಗಳಷ್ಟು ಆಲ್ಕೋಹಾಲನ್ನ ಸೇವಿಸುತ್ತಾರೆ.
ಒಂದು ಲೆಕ್ಕಾಚಾರದ ಪ್ರಕಾರ ಸುಮಾರು 2.2 ಕೋಟಿ ಲೀಟರ್ ಗಳಷ್ಟು ವಿಸ್ಕಿ, ಬ್ರಾಂಡಿ, ರಮ್ಮು ಇಂತಹ ಹಾಟ್ ಡ್ರಿಂಕ್ ಗಳನ್ನು ದಕ್ಷಿಣ ಕನ್ನಡದ ಜನ ಕುಡಿಯುತ್ತಾರೆ. ಇದನ್ನೇ ದಿನದ ಲೆಕ್ಕದಲ್ಲಿ ಹೇಳುವುದಾದರೆ ಒಂದು ದಿನಕ್ಕೆ ಸುಮಾರು 60 ಸಾವಿರ ಹಾಟ್ ಲಿಕ್ಕರ್ ಮ’ದ್ಯವನ್ನು ಸೇವಿಸುತ್ತಾರೆ. ಇನ್ನು ತಿಂಗಳಿಗೆ 1.4 ಕೋಟಿ ಲೀಟರ್ ಗಳಷ್ಟು ಬಿಯರ್ ಬೇಕು ಕರಾವಳಿ ಮ’ದ್ಯ ಪ್ರಿಯರಿಗೆ.
ಹೌದು, ರಾಜ್ಯದ ಯಾವುದೇ ಜಿಲ್ಲೆಗಳನ್ನು ತೆಗೆದುಕೊಂಡ್ರು ದಕ್ಷಿಣ ಕನ್ನಡವನ್ನು ಲಿಕ್ಕರ್ ಸೇವನೆಯಲ್ಲಿ ಬೀಟ್ ಮಾಡೋದಕ್ಕೆ ಸಾಧ್ಯವೇ ಇಲ್ಲ. ಇಲ್ಲಿ 18 ವರ್ಷ ಮೇಲ್ಪಟ್ಟ ಯಾರೇ ಆದ್ರೂ ಮನೆಯವರ ಲೈಸೆನ್ಸ್ ಇದ್ದೆ ಕುಡಿಯುತ್ತಾರೆ. ಬ್ರಾಹ್ಮಣ, ಜೈನ, ಕೊಂಕಣಿ ಈ ಕೆಲವು ಸಮುದಾಯದ ಜನರನ್ನ ಬಿಟ್ಟು ಉಳಿದವರಲ್ಲಿ ಮ’ದ್ಯ ಸೇವನೆ ಮಾಡದೆ ಇರೋರನ್ನ ಟಾರ್ಚ್ ಹಾಕಿ ಹುಡುಕಬೇಕು. ಇಲ್ಲಿ ಕದ್ದು ಮುಚ್ಚಿ ಆಲ್ಕೋಹಾಲ್ ಸೇವನೆ ಮಾಡಬೇಕಾಗಿಲ್ಲ ಮನೆಯವರೆಲ್ಲ ಒಟ್ಟಿಗೆ ಕುಳಿತು ಆಲ್ಕೋಹಾಲ್ ಸೇವಿಸುತ್ತಾರೆ.
ಸಾಮಾನ್ಯವಾಗಿ ಏಪ್ರಿಲ್ ಮೇ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಲಿಕ್ಕರ್ ಖಾಲಿಯಾಗುತ್ತೆ ದಕ್ಷಿಣ ಕನ್ನಡದಲ್ಲಿ. ಜುಲೈ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಲ್ಪ ಕಡಿಮೆ ಅಂತ ಹೇಳಬಹುದು. ಇನ್ನು ರಾಜ್ಯದ ಅಬಕಾರಿ ಇಲಾಖೆಗೆ ಅತಿ ಹೆಚ್ಚು ರೆವೆನ್ಯೂ ಬರುವುದು ದಕ್ಷಿಣ ಕನ್ನಡದ ಮ’ದ್ಯ ಪ್ರಿಯರಿಂದ. ಕಳೆದ ಐದು ವರ್ಷಗಳಲ್ಲಿ ಈ ಭಾಗದಲ್ಲಿ ಇದ್ದ 463 ಸಾರಾಯಿ ಅಂಗಡಿ ಈಗ 520ಕ್ಕೆ ಏರಿಕೆಯಾಗಿದೆ.
ಕರುಣಾ ಸಮಯವನ್ನು ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲಿ ಮಂಗಳೂರು ಭಾಗದಲ್ಲಿ ಮಾರಾಟವಾಗುವ ಲಿಕ್ಕರ್ ಗಳ ಸಂಖ್ಯೆ ಎಷ್ಟು ಗೊತ್ತಾ ! 2020 21ರ ಆರ್ಥಿಕ ವರ್ಷದಲ್ಲಿ ಸರಾಸರಿ 25 ಲಕ್ಷ ಬಾಕ್ಸ್ ಮ’ದ್ಯ ಮಾರಾಟವಾಗಿದೆ. ಅಂದ್ರೆ ಕಳೆದ ಐದು ವರ್ಷಗಳಿಂದ ಮಧ್ಯ ಮಾರಾಟದ ಆದಾಯ ಇನ್ನು 285 ಕೋಟಿಯಿಂದ 370 ಕೋಟಿಗೆ ಏರಿಕೆಯಾಗಿದೆ.
ಅಂದರೆ ಕುಡಿಯುವ ಪ್ರಮಾಣ ಹಾಗೂ ಮದ್ಯಪ್ರಿಯರ ಸಂಖ್ಯೆಯು ಜಾಸ್ತಿಯಾಗಿದೆ ಎಂದು ಹೇಳಬಹುದು. ಒಟ್ಟಿನಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಆದಾಯವನ್ನು ತಂದು ಕೊಡುತ್ತಿರುವುದು ಅಬಕಾರಿ ಇಲಾಖೆ ಅಬಕಾರಿ ಇಲಾಖೆಗೆ ಅತಿ ಹೆಚ್ಚು ರೆವೆನ್ಯೂ ಬರ್ತಾ ಇರೋದೇ ದಕ್ಷಿಣ ಕನ್ನಡದಿಂದ ಅಂತ ಅಂಕಿ ಅಂಶಗಳು ಹೇಳುತ್ತವೆ.