ಸೌತ್ ಇಂಡಿಯನ್ ಸಿನಿಮಾದಲ್ಲಿ ಅತ್ಯುತ್ತಮ ಹೆಸರು ಗಳಿಸಿರುವ ಸ್ಟಾರ್ ನಟಿ ಅಮಲಾ ಪೌಲ್. ಮಲಯಾಳಂ ತಮಿಳು ಸಿನಿಮಾ ರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿರುವ ಅಮಲಾ ಪೌಲ ಅವರ ಸಿನಿಮಾ ಅಂದ್ರೆ ಒಂದು ನಿರೀಕ್ಷೆ ಇದ್ದೇ ಇರುತ್ತೆ. ಇನ್ನು ಕನ್ನಡದಲ್ಲಿ ನಟಿಸಿ ಶಹಬ್ಭಾಷ್ ಗಿರಿ ಗಿಟ್ಟಿಸಿಕೊಂಡಿದ್ದಾರೆ. ಸೌತ್ ನ ಕೃಷ್ಣ ಸುಂದರಿ ಅಮಲಾ ಪೌಲ್ ಬಹು ಬೇಡಿಕೆಯ ನಟಿಯು ಹೌದು.
ಮಲಯಾಳಂನಲ್ಲಿ ಅಮಲಾ ಪೌಲ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ನಟಿ ಅಮಲಾ ಪೌಲ್ ನಟಿಸಿದ್ರು. ಪರಭಾಷಾ ನಟಿ ಅಂತ ಗುರುತಿಸಿ ಕೊಳ್ಳದೆ ಇರುವ ಮಟ್ಟಕ್ಕೆ ಪ್ರಬುದ್ಧ ಅಭಿನಯ ತೋರಿಸಿದ್ರು ಅಮಲಾ. ಹಾಗಾಗಿ ಕನ್ನಡಿಗರ ಮನಸ್ಸಿನಲ್ಲಿಯೂ ಅಮಲಾ ಪೌಲ್ ಜಾಗ ಪಡೆದುಕೊಂಡಿದ್ದಾರೆ.
ಸಿನಿಮಾ ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ನಟಿ ಅಮಲಾ ಪೌಲ್ ಆಕ್ಟಿವ್ ಆಗಿರುತ್ತಾರೆ. ಸಾಕಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಾರೆ. ಸಾಮಾನ್ಯವಾಗಿ ಬಿಡುವಿನ ವೇಳೆಯಲ್ಲಿ ನಾಯಕಿಯರು ವಿದೇಶ ಪ್ರವಾಸ ಮಾಡುವುದು ಕಾಮನ್. ಬೇರೆ ಬೇರೆ ಸ್ಥಳಕ್ಕೆ ಪ್ರಯಾಣಿಸಿ ಅಲ್ಲಿನ ಸುಂದರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಇನ್ನು ಬಹುತೇಕ ಸಿನಿಮಾ ತಾರೆಯರ ಇಷ್ಟವಾದ ಸ್ಥಳ ಮಾಲ್ಡಿವ್ಸ್. ಬಾಲಿವುಡ್ ಮಾತ್ರ ಅಲ್ಲದೆ ಸೌತ್ ಸಿನಿಮಾದ ನಟ ನಟಿಯರು ಕೂಡ ಮಾಲ್ಡೀವ್ಸ್ ನಲ್ಲಿ ಆಗಾಗ ವಿಶ್ರಾಂತಿ ಪಡೆಯುವುದಕ್ಕೆ ಪ್ರವಾಸ ಬೆಳೆಸುತ್ತಾರೆ. ಇದೀಗ ಅಮಲಾ ಪೌಲ್ ಕೂಡ ಮಾಲ್ಡೀವ್ಸ್ ನಲ್ಲಿ ತೆರಪಿ ತೆಗೆದುಕೊಳ್ಳುತ್ತಿದ್ದಾರೆ. ಥೆರಪಿ ಎಂದ ಕೂಡಲೇ ಅವರಿಗೆ ಆರೋಗ್ಯದ ಸಮಸ್ಯೆ ಎಂದು ಕೊಳ್ಳಬೇಡಿ. ಬೀಚ್ ನಲ್ಲಿ ವಿಶೇಷ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮಲಾ ಪೌಲ್ ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಜೊತೆಗೆ ಬೀಚ್ ಎನ್ನುವುದು ನನ್ನ ಅತ್ಯುತ್ತಮ ಥೆರಪಿಸ್ಟ್ ಎಂದು ಬರೆದುಕೊಂಡಿದ್ದಾರೆ. ನಟಿ ಅಮಲಾ ಪೌಲ್ ಅವರಿಗೆ ಇನ್ಸ್ಟಾ ಖಾತೆಯಲ್ಲಿ 4.5 ಮಿಲಿಯನ್ ನಷ್ಟು ಫಾಲೋವರ್ಸ್ ಇದ್ದಾರೆ. ಇದನ್ನು ನೋಡಿದರೇನೇ ಅಮಲಾ ಪೌಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟು ಫೇಮಸ್ ಅನ್ನೋದು ಅರ್ಥವಾಗುತ್ತೆ. ನಟಿ ಅಮಲಾ ಪೌಲ್ ಇತ್ತೀಚಿಗೆ ಸಿನಿಮಾ ರಂಗದಲ್ಲಿ ತಾವು ಕಂಡ ಕೆಟ್ಟ ಅನುಭವಗಳನ್ನು ಕೂಡ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲಾಗಿತ್ತು.
ಕಷ್ಟದ ಸಮಯದಲ್ಲಿಯೂ ಕಂಗೆಡದ ಗಟ್ಟಿಗಿತ್ತಿ ಅಮಲಾ ಪೌಲ್. ಅದೇನೇ ಇರಲಿ ಅಮಲಾ ಪೌಲ್ ಅವರಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇರುವುದಂತೂ ಸತ್ಯ. ಅತ್ಯುತ್ತಮ ಅಭಿನೇತ್ರಿ ಅಮಲಾ ಪೌಲ್ ಈಗಲೂ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಇಟ್ಟುಕೊಂಡಿದ್ದಾರೆ. ನಟಿ ಅಮಲಾ ಪೌಲ್ ನಿಮಗೂ ಇಷ್ಟವಾಗಿದ್ದರೆ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.